..ನಾಗಾರ್ಜುನಕೊಂಡ ಪ್ರವಾಸ - ಭಾಗ ೧ ರಿಂದ ಮುಂದುವರೆದಿದೆ
ನಾಗಾರ್ಜುನಕೊಂಡದಲ್ಲಿ ನೋಡಲು ತುಂಬಾ ಸ್ಮಾರಕಗಳಿವೆ. ಒಂದು ಘಂಟೆಯಲ್ಲಿ ಅರ್ಧಭಾಗ ಕೂಡ ನೋಡಲಾಗುವದಿಲ್ಲ, ಹಾಗಿದ್ದಮೇಲೆ ಒಂದೇ ಸಲ ಎಲ್ಲ ಬರೆಯುವದು ಕಷ್ಟ. ಆದ ಕಾರಣ ಈ ಎರಡನೇ ಭಾಗ.
ಕೆಳಗೆ ಚಿತ್ರದಲ್ಲಿರುವ ಸ್ತೂಪದ ಹೆಸರು ಬೋಧಿಶ್ರೀ ಸ್ತೂಪ. ಇಲ್ಲಿರುವ ಎಲ್ಲ ಸ್ತೂಪಗಳ ರಚನೆ ನೋಡಲು ಒಂದೇ ತರ ಇವೆ. ಮೂರನೇ ಶತಮಾನದಲ್ಲಿ ನಿರ್ಮಿಸಲಾದ ಈ ಸ್ತೂಪವು ಚುಲಧರ್ಮಗಿರಿಯ ಒಂದು ಭಾಗ. ಉಪಾಸಿಕಾ ಬೋಧಿಶ್ರೀ ಎಂಬ ಶಿಷ್ಯ ಈ ಸ್ತೂಪ ನಿರ್ಮಾಣಕ್ಕೆ ಕಾಣಿಕೆ ನೀಡಿದ್ದನೆಂದು, ಈ ಸ್ತೂಪಕ್ಕೆ ಅವನ ಹೆಸರೇ ಬಂದಿರಬಹುದು.
ನಾಗಾರ್ಜುನ ಕೊಂಡ ಮೊದಲು ಕೋಟೆ ಇತ್ತೆಂದು ಅಲ್ಲಿನ ಅವಶೇಷಗಳನ್ನು ನೋಡಿದರೆ ತಿಳಿದುಬರುತ್ತದೆ. ಬೌದ್ಧ ಅವಶೇಷಗಳನ್ನೆಲ್ಲ, ಕೃಷ್ಣ ನದಿಗೆ ಆಣೆಕಟ್ಟು ಕಟ್ಟಿದಾಗ ನಾಗಾರ್ಜುನಕೊಂಡಕ್ಕೆ ಸಾಗಿಸಿ ಅಲ್ಲಿ ಪುನರ್ನಿರ್ಮಾನಿಸಲಾಗಿದೆ. ಅದಕ್ಕೂ ಮೊದಲು ಅಲ್ಲಿರುವ ಈ ಹಿಂದೂ ದೇವಾಲಯ ಈಗ ಹಾಳುಬಿದ್ದಿದೆ. ಈ ದೇವಾಲಯ ಇಕ್ಷ್ವಾಕು ರಾಜರ ಕಾಲದಲ್ಲಿ ನಿರ್ಮಿಸಲಾಗಿರಬಹುದೆಂದು ಹೇಳಬಹುದು.
ಚಾಂತಶ್ರೀ ಚೈತ್ಯ ಗ್ರಿಹ ಸ್ತೂಪ. ಈ ಸ್ತೂಪವನ್ನು ವಶಿಸ್ಥಿಪುತ್ರ ಚಂತಮೂಲನ ತಂಗಿಯಾದ ರಾಣಿ ಚಾಂತಾಶ್ರೀ ಕಟ್ಟಿಸಿದಳೆಂದು ಹೇಳಲಾಗಿದೆ. ಅಬ್ಬಾ! ಸಿದ್ದಿ ಬ್ಲಾಗ್ ನಾನು ಮೊದಲು ಓದುತ್ತಿದ್ದಾಗ ಈ ಕೆಲಸ ತುಂಬಾ ಸರಳ ಅಂದುಕೊಂಡಿದ್ದೆ. ಆದರೆ ಈಗ ತಿಳಿಯುತ್ತಿದೆ ಅದರ ಹಿಂದಿರುವ ಪ್ರಯತ್ನ ಹಾಗೂ ತಾಳ್ಮೆ. ಧಗ ಧಗ ಉರಿಯುವ ಬಿಸಿಲಿನಲ್ಲಿ ಇಷ್ಟು ನೋಡುವದರೊಳಗೆ ನಮಗೆ ಸಾಕಾಗಿ ಸುಸ್ತಾಗಿ ಎಲ್ಲಿಯಾದರೂ ಕುಳಿತರೆ ಸಾಕು ಎನಿಸಿಬಿಟ್ಟಿತ್ತು. ಆದರೆ ನೋಡುವದು ಇನ್ನು ತುಂಬಾ ಇದ್ದಿದ್ದರಿಂದ, ಇಲ್ಲಿಯವರೆಗೂ ಬಂದಿದ್ದಕ್ಕೆ ಸಾರ್ಥಕವಾಗಲಿ ಎಂದು ಮತ್ತೆ ಮುಂದುವರೆಯತೊಡಗಿದೆವು.
ಮಹಾಸ್ತೂಪ ಎಂದು ಕರೆಯಲ್ಪಡುವ ಈ ಕಟ್ಟಡ ವೃತ್ತಾಕಾರದಾಗಿದ್ದು ತುಂಬಾ ವಿಶಾಲವಾಗಿದೆ. ನಾವು ಇದನ್ನು ನೋಡಲು ಹೋದಾಗ ಅಲ್ಲಿಯ ಸೆಕ್ಯೂರಿಟಿ ನಮಗೆ ಮಹಾಸ್ತೂಪದ ಕುರಿತು ಹೇಳುತ್ತಾ ಕೈ ತೋರಿಸಿ ಅಲ್ಲಿ ಬುದ್ಧನ ಬಂಗಾರದ ಹಲ್ಲು ದೊರೆತಿದೆ. ಅದನ್ನು ಸರಕಾರ ಯಾವುದೊ ಸಂಗ್ರಹಾಲಯದಲ್ಲಿ ಸುರಕ್ಷಿತವಾಗಿಟ್ಟಿದೆ(ಸಂಗ್ರಹಾಲಯದ ಹೆಸರು ಮರೆತುಹೋಗಿದೆ). ಅದನ್ನು ನೋಡಲು ಮೊದಲು ಪರವಾನಿಗೆ ಪತ್ರ ಪಡೆಯಬೇಕು ಎಂದು ಹೇಳುತ್ತಿದ್ದ. ಈ ಮಹಾಸ್ತೂಪದ ಮೇಲೆ ಇರುವ ಕಂಬಗಳ ಮೇಲೆ ಶಾಸನವನ್ನು ಕಾಣಬಹುದು.
ಅಲ್ಲದೆ ಇಲ್ಲಿನ ಇಟ್ಟಿಗೆಗಳು ಗಟ್ಟಿ ಮತ್ತು ಆಕಾರದಲ್ಲಿ ದೊಡ್ಡದಾಗಿವೆ. ನಾನು ಈಗಿನ ಇಟ್ಟಂಗಿ ಭಟ್ಟಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ಹಾಗೂ ಇಟ್ಟಿಗೆಗಳ ತಯಾರಿಕೆ ಮತ್ತು ಅವುಗಳ ಗುಣಮಟ್ಟ ಕೂಡ ನನಗೆ ಪರಿಚಯವಿದೆ. ಅವುಗಳಿಗೆ ಈ ಇಟ್ಟಿಗೆಗಳನ್ನು ಹೋಲಿಸುವದು ಅಸಾಧ್ಯ . ಇದನ್ನೆಲ್ಲ ನೋಡಿದರೆ ನನಗೆ ಆಧುನಿಕ ಟೆಕ್ನಾಲಜಿ ಬೆಳವಣಿಗೆಯತ್ತ ಸಾಗುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಇಲ್ಲಿ ಬರಿ ಇಟ್ಟಿಗೆಯ ಮಾತಲ್ಲ ಪ್ರತಿಯೊಂದು ವಸ್ತುವನ್ನು ಗಮನಿಸಿದಾಗ ಇದೆ ಯೋಚನೆ ಬರುತ್ತದೆ. "OLD IS GOLD " ಸುಳ್ಳಲ್ಲ ಬಿಡಿ.
ಮಹಾಸ್ತೂಪವನ್ನು ನೋಡಿಕೊಂಡು ಮುಂದೆ ದಲಾಯಿಲಾಮಾ ನೆಟ್ಟ ಗಿಡವನ್ನು ನೋಡಲು ಬಂದೆವು. ಈ ಕೆಳಗಿನ ಆಲದ ಗಿಡವನ್ನು ದಲಾಯಿಲಾಮಾ ಬಂದು ಪೂಜೆ ಮಾಡಿ ನೆಟ್ಟು ಹೋದನೆಂದು ಅದೇ ಸೆಕ್ಯೂರಿಟಿ ಹೇಳುತ್ತಿದ್ದನು. ಆ ಗಿಡಕ್ಕೆ ದಲಾಯಿಲಾಮಾ ಟ್ರೀ ಎಂದು ಫಲಕ ಕೂಡ ಹಾಕಿದ್ದಾರೆ.
ಇಕ್ಷವಾಕು ರಾಜರುಗಳು ಅಶ್ವ ಬಲಿದಾನಕ್ಕೆ ಹೆಸರುವಾಸಿಯಾಗಿದ್ದರು. ಆಮೆಯ ಆಕಾರದಲ್ಲಿರುವ ಈ ಕುಂಡದಲ್ಲಿ ಅವರು ಕುದುರೆಯ ಭಾಗಗಳನ್ನು ಬಲಿ ಕೊಡುತ್ತಿದ್ದರೆಂದು ಹೇಳಲಾಗುತ್ತದೆ. ಈ ಕುಂಡ ಆಮೆಯ ಆಕಾರದಲ್ಲಿರುವದರಿಂದ ಇದಕ್ಕೆ ಕೂರ್ಮ ಚಿತಿ ಎಂದು ಕರೆಯುತ್ತಾರೆ.
ಈ ಚಿತ್ರದಲ್ಲಿರುವ ಕುಂಡವನ್ನು ಅಶ್ವಮೇಧಕುಂಡ ಎಂದು ಕರೆಯುತ್ತಾರೆ. ಅಶ್ವ ಬಲಿದಾನಕ್ಕೆ ಮೊದಲು ಕೊನೆಯ ಪವಿತ್ರ ಸ್ನಾನ ಈ ಕುಂಡದ ನೀರಿನಿಂದ ಮಾಡಿಸಲಾಗುತ್ತಿತ್ತು.
ಅಶ್ವಮೇಧ ಕುಂಡ ನೋಡಿದ ನಂತರ ನಾನು, ಭುವನ ಸುಸ್ತಾಗಿ ಕುಳಿತುಕೊಳ್ಳಲು ಜಾಗ ನೋಡಲು ಶುರು ಮಾಡಿದೆವು. ಸಿದ್ದಿ ನಮ್ಮನ್ನು ಎಲ್ಲಿಯಾದರೂ ನೆರಳಿಗೆ ಕುಳಿತುಕೊಳ್ಳುವಂತೆ ಹೇಳಿ ಮುಂದೆ ಇರುವ ಸ್ಮಾರಕಗಳನ್ನು ನೋಡಲು ಹೊರಟರು. ಅವರು ನೋಡಿದ ಈ ಸ್ವಸ್ತಿಕ ಸ್ತೂಪ ನನಗನಿಸಿದಂತೆ ಆ ಬೌದ್ಧ್ ವಿಹಾರದಲ್ಲಿರುವ ಅತಿ ವಿಭಿನ್ನವಾದ ಸ್ಮಾರಕ. ವೃತ್ತಾಕಾರದ ಮಧ್ಯಭಾಗದಲ್ಲಿ ಸ್ವಸ್ತಿಕ ಆಕೃತಿ ತುಂಬಾ ಆಕರ್ಷಕವಾಗಿ ಕಂಡಿತು.
ಸಿದ್ದಿ ಬರುವವರೆಗೆ ನಾವು ದಲಾಯಿಲಾಮಾ ಮರದ ಹತ್ತಿರ ಕುಳಿತು ಸೌತೆಕಾಯಿ ತಿನ್ನಲು ಶುರುಮಾಡಿದೆವು. ಆ ಬಿಸಿಲಿನ ಧಗೆಯಲಿ ಸೌತೆಕಾಯಿ ತುಂಬಾ ಹಿತ ನೀಡಿತು. ಎಲ್ಲಿಯಾದರೂ ಪ್ರವಾಸ ಎಂದರೆ ಸಾಕು ಸಿದ್ದಿ ಸೌತೆಕಾಯಿ, ನೆನೆ ಹಾಕಿದ ಹೆಸರು ಮತ್ತು ಮಡಿಕೆ ಕಾಳು ಡಬ್ಬಿಗೆ ಹಾಕಿ ಇಟ್ಟುಕೊಂಡಿರುತ್ತಾರೆ. ಸುಮಾರು ಏಳು ವರ್ಷಗಳಿಂದ ನಾನು ಸಿದ್ಧಿಯನ್ನು ನೋಡುತ್ತಿದ್ದೇನೆ, ತುಂಬಾ ಪೌಷ್ಟಿಕ ಆಹಾರ ತಿನ್ನುವ ರೂಢಿ ಇಟ್ಟಿದ್ದಾರೆ. ನನಗನಿಸಿದಂತೆ ಎಲ್ಲ ನಮ್ಮ ಅತ್ತೆಯ ತರಬೇತಿ. ಈ ಕಾರಣದಿಂದ ನಾವು ಸುಸ್ತಾದರೂ ಸಿದ್ದಿ ಮಾತ್ರ ಸುಸ್ತಾಗೋದೇ ಇಲ್ಲ.
ಸಿದ್ದಿ ಸ್ವಸ್ತಿಕ ಸ್ತೂಪ ನೋಡಿಕೊಂಡು ಬಂದ ನಂತರ ಅವರಿಗೂ ಸೌತೆಕಾಯಿ ಕೊಟ್ಟು, ಅವರು ತಿಂದ ನಂತರ ಮುಂದೆ ಹೊರಟೆವು. ಸೆಕ್ಯೂರಿಟಿ, ಮುಂದೆ ಒಂದು ದೊಡ್ಡ ಬಾವಿ ಇದೆ ನೋಡಿಕೊಂಡು ಹೋಗಿ ಚೆನ್ನಾಗಿದೆ ಎಂದು ಹೇಳಿದ್ದ. ಅಲ್ಲಿಂದ ಬಾವಿ ನೋಡಲು ಹೊರಟೆವು.
ಬಾವಿ ಕೋಟೆಯ ಈ ಸಣ್ಣ ಬಾಗಿಲಿನ ಆ ಕಡೆ ಇದೆ.
ನಾನು ಬಾವಿ ಎಂದರೆ ಚಿಕ್ಕ ಬಾವಿ ಇರಬೇಕೆಂದು ತಿಳಿದಿದ್ದೆ, ಆದರೆ ಇಲ್ಲಿ ಬಂದು ನೋಡಿದರೆ ವೃತ್ತಾಕಾರದ ವಿಶಾಲ ಬಾವಿ. ಅಬ್ಬಾ..!! ಎಷ್ಟೊಂದು ವಿಸ್ತೀರ್ಣ ಹೊಂದಿದೆ ಈ ಬಾವಿ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡೆ. ಬಾವಿಯಲ್ಲಿ ಸ್ವಲ್ಪ ನೀರಿತ್ತು. ಬಾವಿಗೆ ಇಳಿಯಲು ಮೆಟ್ಟಿಲುಗಳನ್ನು ಕೂಡ ಮಾಡಿದ್ದರು. ನಾವು ಅದನ್ನು ನೋಡುತ್ತಿರುವಾಗಲೇ ಮತ್ತೆ ಸ್ವಲ್ಪ ಜನ ಬಾವಿ ನೋಡಲು ಬಂದರು.
ಬಾವಿ ನೋಡಿದ ನಂತರ ಹಸಿವಾಗಿದ್ದರಿಂದ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಬೇಕೆಂದು ವಸ್ತುಸಂಗ್ರಹಾಲಯದ ಎದುರಿರುವ ದೊಡ್ಡ ಮರದ ಕೆಳಗೆ ಕುಳಿತೆವು. ಬೆಳಿಗ್ಗೆ ಕಟ್ಟಿಸಿಕೊಂಡು ಬಂದ ಇಡ್ಲಿ ಚಟ್ನಿತಿಂದು, ಅದೇ ಮರದಡಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದೆವು. ಅಲ್ಲಲ್ಲಿ ತೆಗ್ಗು ಬಿದ್ದಿದನ್ನು ನೋಡಿ ನಾನು ಸಿದ್ದಿ ಗೆ ಕೇಳಿದೆ, ಆಗ ಸಿದ್ದಿ ಹೇಳಿದರು ಅಲ್ಲಿ ಕಾಡು ಹಂದಿಗಳು ತುಂಬಾ ಇವೆ ಅವೇ ಈ ರೀತಿ ತೆಗ್ಗು ತೆಗೆಯುತ್ತವೆ ಅಂತ.
ವಿಶ್ರಾಂತಿ ತೆಗೆದುಕೊಂಡ ನಂತರ ವಸ್ತುಸಂಗ್ರಹಾಲಯ ನೋಡಿದೆವು. ಬೌದ್ಧ ಧರ್ಮದ ಮೂರ್ತಿಗಳು, ಕಲಾಕೃತಿಗಳು, ಚಿತ್ರಕಲೆ, ಶಿಲಾಯುಗದ ಆಯುಧಗಳು ಮುಂತಾದವನ್ನೊಳಗೊಂಡ ಸಂಗ್ರಹಾಲಯ ನಮ್ಮನ್ನು ಆಕರ್ಷಿಸಿತು. ಸಂಗ್ರಹಾಲಯದಲ್ಲಿ ದೊಡ್ಡ ದೊಡ್ಡ ಪೆಡಸ್ಟಲ್ ಫ್ಯಾನ್ ಗಳ ಗಾಳಿ ಮನಸ್ಸಿಗೆ ಹಾಯ್ ಅನಿಸಿತು. ಇಷ್ಟು ನೋಡಿ ಮುಗಿಸುವದರಲ್ಲಿ, ನಮಗೆ ಸಾಕಾಗಿದ್ದರಿಂದ ಹೋಗೋಣ ಬನ್ನಿ ಎಂದು ತೆಲಂಗಾಣ ಪ್ರವಾಸೋದ್ಯಮದ ಹಡಗು ಬರುವ ಜಾಗಕ್ಕೆ ಹೋಗಿ ಕುಳಿತುಕೊಂಡೆವು. ಸುಮಾರು ೩.೪೫ ಮಧ್ಯಾಹ್ನ ನಮ್ಮ ನಾಗಾರ್ಜುನ ಕೊಂಡದ ದರ್ಶನ ಮುಗಿದಿತ್ತು. ಹಡಗು ೪.೩೦ ಗೆ ಬರುತ್ತೆ ಎಂದು ಹೇಳಿದಕ್ಕೆ ಅಲ್ಲಿಯೇ ಮರದ ಕೆಳಗೆ, ಕೃಷ್ಣ ನದಿಯ ನೀರನ್ನು ನೋಡುತ್ತಾ ಕುಳಿತೆವು.
೪.೩೦ ಕ್ಕೆ ಹಡಗು ತನ್ನ ಆ ದಿನದ ಕೊನೆಯ ಪ್ರಯಾಣಿಕರನ್ನು ಹೊತ್ತು ಬಂದಿತು. ಅವರಿಗೆ ಕೇವಲ ಒಂದು ಗಂಟೆ ಕಾಲಾವಕಾಶ ನೀಡಲಾಯ್ತು ಹೋಗಿ ನಾಗಾರ್ಜುನಕೊಂಡ ನೋಡಿಕೊಂಡು ಬರಲು. ನನಗನಿಸಿದಂತೆ ಅವರು ಆ ಐತಿಹಾಸಿಕ ಸ್ಥಳ ನೋಡಲು ಬಂದಂತೆ ಕಾಣಲಿಲ್ಲ. ಸುಮ್ಮನೆ ಹಡಗು ಪ್ರಯಾಣ ಮಾಡಲು ಬಂದಂತೆ ಕಂಡರು. ನಾವು ಹಡಗು ಹತ್ತಿ ಕುಳಿತುಕೊಂಡೆವು. ಯಾವುದೊ ರಾಜಕೀಯ ವ್ಯಕ್ತಿ ತನ್ನ ಪರಿವಾರ ಸಮೇತ ಕೊನೆಯ ಪ್ರವಾಸಿ ಗುಂಪಿನಲ್ಲಿ ಬಂದಿದ್ದ. ಅವನಿಗಾಗಿ ಒಬ್ಬ ಪೊಲೀಸ್ ಹಡಗಿನಲ್ಲಿ ಕುಳಿತುಕೊಳ್ಳಲು ಕುರ್ಚಿಗಳನ್ನು ಜೋಡಿಸಿ ಅವನ್ನು ಕಾಯ್ದಿರಿಸುತ್ತಿದ್ದ. ಅಲ್ಲಿ ಯಾರಾದರೂ ಪ್ರವಾಸಿಗರು ಕುಳಿತುಕೊಳ್ಳಲು ಬಂದರೆ ಎಬ್ಬಿಸಿ ಕಳುಹಿಸುತ್ತಿದ್ದ. ಈ ಪದ್ಧತಿ ಯಾವಾಗ ಸುಧಾರಿಸುತ್ತೋ ಗೊತ್ತಿಲ್ಲ. ಸ್ವಲ್ಪ ಸಮಯದ ನಂತರ ಒಂದು ಜೋಡಿ ಆ ಕಾಯ್ದಿರಿಸಿದ ಜಾಗದಲ್ಲಿ ಕುಳಿತರು. ಪೊಲೀಸ್ ಬಂದು ಎದ್ದೇಳಲು ಹೇಳಿದ. ಅವರು ನಾವು ಟಿಕೆಟ್ ತಗೊಂಡೆ ಕೂತಿರೋದು ಏಳೋಕಲ್ಲ ಎಂದು ಹೇಳಿದರು. ಆದರೆ ಈ ರೀತಿ ಪ್ರತಿಭಟಿಸೋರು ಎಲ್ಲೋ ಕೆಲವು ಜನ ಮಾತ್ರ. ಬಹಳಷ್ಟು ಜನ ಹೆದರಿ ಸುಮ್ಮನಾಗುತ್ತಾರೆ. ಕೊನೆಗೆ ಆ ರಾಜಕೀಯ ವ್ಯಕ್ತಿ ಹಡಗು ಚಾಲನೆ ಯಂತ್ರದ ಕೊನೆಯಲ್ಲೂ, ಅವನ ಪರಿವಾರ ಅಲ್ಲಿ-ಇಲ್ಲಿ ಜಾಗ ಮಾಡಿಕೊಂಡು ಕುಳಿತುಕೊಳ್ಳಬೇಕಾಯಿತು. ೫.೩೦ ಸುಮಾರಿಗೆ ಹಡಗು ಹೊರಟಿತು. ನಮಗೆ ಬಿಸಿ ಬಿಸಿ ಚಾ ಸಿಕ್ಕರೆ ಸಾಕು ಎನಿಸಿತ್ತು. ಮತ್ತೆ ನೀರಿನ ಸೌಂದರ್ಯ, ಹಕ್ಕಿಗಳು ಗೂಡಿಗೆ ಮರಳುವದು, ಸೂರ್ಯ ದಿನಕ್ಕೆ ವಿದಾಯ ಹೇಳಿ ಕೆಳಜಾರುವ ಅದ್ಭುತ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತ ಸಾಗಿದೆವು........
ವಿಜಯ ವಿಹಾರ ತಲುಪಿದ ತಕ್ಷಣವೇ ಅಲ್ಲಿಯೇ ಮುಂದಿರುವ ಒಂದು ಚಿಕ್ಕ ಹೋಟೆಲಿನಲ್ಲಿ ಮಿರ್ಚಿ ತಿಂದು ಚಹಾ ಕುಡಿದೆವು. ಮಾರನೆಯ ದಿನ ಅನುಪು ನೋಡಲು ಹೋಗುವ ಪ್ಲಾನ್ ಇದ್ದಿದ್ದರಿಂದ, ಬೇಗ ಊಟ ಮಾಡಿ ಮಲಗಿಕೊಂಡೆವು.
ಮರಳಿ ಬಂದ ನಂತರ ಮತ್ತೆ ಗಣೇಶಯ್ಯನವರ ಪುಸ್ತಕವನ್ನು ತೆರೆದೆ, ಆಗ ನಾವು ಎರಡು ಸ್ಮಾರಕಗಳನ್ನು ನೋಡಲಾಗಲಿಲ್ಲ ಅಂತ ತಿಳಿಯಿತು. ಒಂದು ಸ್ನಾನ ಘಟ್ಟ ಮತ್ತೊಂದು ದೇವಾಲಯ. ಒಟ್ಟಿನಲ್ಲಿ ನಾಗಾರ್ಜುನಕೊಂಡ ಪ್ರವಾಸವಂತೂ ತುಂಬಾ ವಿಭಿನ್ನವಾದ ಅನುಭವವನ್ನು ಕೊಟ್ಟಿತು. ತೆಲಂಗಾಣದ ಆ ಹಳ್ಳಿಗಾಡಿನ ಪ್ರಕೃತಿ ಸೌಂದರ್ಯದ ಜೊತೆ ಐತಿಹಾಸಿಕ ಸ್ಮಾರಕಗಳ ನೋಟ ಕಣ್ಮನ ತಣಿಸಿತು. ನಾನು ಕೆ.ಎನ್.ಗಣೇಶಯ್ಯನವರಿಗೆ ಇಲ್ಲಿ ಧನ್ಯವಾದಗಳನ್ನು ಹೇಳಲೇಬೇಕು.
.........

You guys are lucky, it is difficult to visit these places due to busy schedule and as well no much information is available in India.
ReplyDeleteMy sister Pushpa-ji has written very good descriptive blog with humor about Sid's healthy eating habits.
If I look at first picture stoopa almost looks like Shivalinga.
I have visited few Buddists places I have seen Stupa along with lean Buddha. Here I don't see Budda ' s statue(s).
What I don't like Buddists is mixing up of church and state, unlike Jains. Jain kings or hindu kings never used their power for influencing their beleife but Buddists always used their money and muscle to spread Buddism right from Emperor Ashoka, which I don't like which quite contrary to Budda ' s teachings.
I have to read Ganeshayya books, name is new to me. Well written blog.
Haa!! Forgot one thing, I have one request. If you visit next time, please collect more info on Ikshvaaku which were ancestors of Shri Ram-ji. We believe that their Kingdom used be near Sarayu river present day Ayodhya in Uttarpradesh. How come they are\were in south? Like Lava son of Ram where it was called Luvapur became Lahore which in Pakistan now, is it same, like their kingdom was spread till south? But I did not like Ikshvaaku slaughtering horses, Ashwameda yaaga, it shows they were cruel. Sorry to say to my Shri Ram-ji's ancestors.
ReplyDeleteThe planning starts several months before.. Places to visit, route to take, where to stay etc.
ReplyDelete-I think most major religions used money and power to promote religion. As I have read in historical books powerful religious leaders influenced rulers religious beliefs. So religious leaders and kings dependent on each other, I think. Also within Hindu community rivalry between worshipers of Shiva and Vishnu to the extent temple deities were changed by the sect in power. Whatever the religion is, the ultimate message of every religion is to live peacefully.
-As per wikipedia Ikshvaku dynasty and Andra Ikshvaku are different. Need to research further.
-Sri.K.N.Ganeshaiah's books are fiction based on historical places. He has unique writing style. You must read his books.
Thank you for sharing your thoughts. Say hi to Sahas-ji :)
Interesting place, so much to see and nice descriptive write up.
ReplyDeleteThank you Manjula.
ReplyDeleteIts very interesting dear.. Really amazing...
ReplyDeleteThank you Saru :)
ReplyDelete