Sep 28, 2024

Sangolli Rayanna Rock Garden part-4

..continued from Sangolli Rayanna Rock Garden part-3.

ಸಂಗೊಳ್ಳಿ ರಾಯಣ್ಣ ತಂಡ ಸೇರ್ಪಡೆ
ಖೋದಾನಪೂರ ಲಿಂಗನಗೌಡ, ನೇಗಿನಹಾಳ ವೆಂಕನಗೌಡ ಮತ್ತು ಸಂಗೊಳ್ಳಿ ರಾರ್ಯ ಈ ಆತ್ಮೀಯ ಗೆಳೆಯ ಪಟದಮ್ಮನವರ ಲಕ್ಕಪ ಹಾಗೂ ಸುಮಾರು ಮುನ್ನೂರು ಸೇನೆ ಆಣೆ ಪ್ರಮಾಣ ಮಾಡಿ ಸಂಗೊಳ್ಳಿ ರಾಯಣ್ಣ ತಂಡ ಸೇರುವುದು.

People join Sangolli Rayanna's team
Khodanapur Lingan Gowda Neginahala Venkan Gowda and Sangolli Rayanna's close friend Patadammanavar Lakkappa and about three hundred soidiers took oath and joined Sangolli Rayanna's team.

ಗಿಡದ ಹುಬ್ಬಳ್ಳಿ ದಾಳಿ
ಧಾರವಾಡ ತಾಲೂಕಿನ ಗಿಡದ ಹುಬ್ಬಳ್ಳಿ ಗ್ರಾಮದ ಮೇಲೆ ಸಂಗೊಳ್ಳಿ ರಾಯಣ್ಣನ ತಂಡ 7 ಎಪ್ರಿಲ್ 1830 ರಂದು ದಾಳಿ ಮಾಡಿ ಗ್ರಾಮ ಲೂಟಿ ಮಾಡುತ್ತಿರುವುದು.

Attack on Gidad Hubballi
On April 7, 1830, Sangolli Rayanna's team attacked and plundered the village of Gidad Hubballi in Dharwad taluk.

ಡೋರಿ ಹಳ್ಳದಲ್ಲಿ ಬಂಧನ
ಧಾರವಾಡ ತಾಲೂಕಿನ ಡೋರಿ ಗ್ರಾಮದ ಹತ್ತಿರ ಇರುವ ಹಳ್ಳದಲ್ಲಿ ಸಂಗೊಳ್ಳಿ ರಾಯಣ್ಣ ಸ್ನಾನ ಮಾಡುತ್ತಿರುವ ಸಂದರ್ಭದಲ್ಲಿ,8 ಎಪ್ರಿಲ್ 1830 ಬೆಳಿಗ್ಗೆ ಪಟದಮ್ಮನವರ ಲಕ್ಕಪ್ಪ ಸಂಗೊಳ್ಳಿ ರಾಯಣ್ಣನ ಖನ್ನ ತೆಗೆದುಕೊಂಡು ಓಡುತ್ತಿದ್ದಾನೆ. ಕೆರೆಯ ಸುತ್ತುವರೆದು, ಆಂಗ್ಲ ಸೇನೆ ಸಂಗೊಳ್ಳಿ ರಾಯಣ್ಣನ ಬಂಧಿಸುವುದು.

Rayanna's arrest at the stream of Dori village
On the morning of April 8, 1830, while Sangolli Rayanna was bathing in a stream at Dori village in Dharwad taluk, Patadammanavar Lakkappa took Sangolli Rayanna's sword and ran. The English army encircled and arrested Sangolli Rayanna.


ಪ್ರಾಥಮಿಕ ವಿಚಾರಣೆ
ಸಂಗೊಳ್ಳಿ ರಾಯಣ್ಣನನ್ನು ಬಂಧಿಸಿದ ಆಂಗ್ಲ ಅಧಿಕಾರಿಗಳು 28 ಎಪ್ರಿಲ್ 1830 ರಂದೆ ಅಮಲ್ದಾರ ಮುಂದೆ ಹಾಜರು ಪಡಿಸಲಾಯಿತು. ಪ್ರಾಥಮಿಕ ವಿಚಾರಣೆ ನಡೆಸಲಾಯಿತು. ನಂತರ 19 ಮೇ 1830 ರಂದು ಸಹಾಯಕ ನ್ಯಾಯಾಧೀಶರು ಮುಂದೆ ವಿಚಾರಣೆಗೆ ಒಳಪಡಿಸಲಾಯಿತು. ಅವರ ಮುಂದೆ ತಪ್ಪೋಪ್ಪಿಗೆ ಪತ್ರಕ್ಕೆ ಸಹಿ ಪಡೆಯಲಾಯಿತು.

Preliminary Inquiry
On April 28, 1830, Sangolli Rayanna was brought before the Amaldar by the English officers who had arrested him. After a preliminary investigation, he was tried before the Assistant Judge on May 19, 1830, and he was to sign a confession letter before the judge.

ನ್ಯಾಯಾಲಯದಲ್ಲಿ ವಿಚಾರಣೆ
ಸಂಗೊಳ್ಳಿ ರಾಯಣ್ಣ ಮತ್ತು ಸಹಚರರ ಮೇಲೆ ಗುರುತರವಾದ ಆರೋಪಗಳು ಇರುವುದರಿಂದ ಇವರ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲಾಯಿತು ಜೆ.ವಿ.ಎಂಡರಸನ್ ಅವರನ್ನು ವಿಶೇಷ ನ್ಯಾಯಾಧೀಶರಾಗಿ ನೇಮಕ ಮಾಡಲಾಯಿತು.20 ಮೇ 1830 ರಿಂದ 30 ಡಿಸೆಂಬರ್ 1830 ರ ವರೆಗೆ ಅಂದರೆ ಏಳು ತಿಂಗಳ ಹತ್ತು ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಲಾಯಿತು.ಕೊನೆಗೆ 13 ಜನ ಮುಖ್ಯ ಅಪರಾಧಿಗಳೆಂದು ನಾಲ್ಕ ನೂರ ಜನರು ಸಾಮಾನ್ಯ ಅಪರಾಧಿಗಳೆಂದು ಅವರಿಗೆ ಶಿಕ್ಷೆಯ ಪ್ರಮಾಣ ತೀರ್ಮಾನ ಕೈಗೊಳ್ಳಲು 30 ಡಿಸೆಂಬರ್ 1830 ರಂದು ಮುಂಬೈ ಗವರ್ನರಗೆ ವರದಿ ಕಳುಹಿಸಲಾಯಿತು. ಮುಂಬೈ ಗವರ್ನರ್ ಮಂಡಳಿ ಸಂಗೊಳ್ಳಿ ರಾಯಣ್ಣ ಸಹಿತ ಏಳು ಜನರಿಗೆ 26 ಜನವರಿ 1831 ರಂದು ಬೀಡಿ ತಾಲೂಕಿನ ನಂದಗಡ ಗ್ರಾಮದ ಆಲದ ಮರಕ್ಕೆ ಸಾರ್ವಜನಿಕ ಗಲ್ಲು ಶಿಕ್ಷೆ ವಿಧಿಸಬೇಕು. ಅದೇ ದಿನ ಇನ್ನೂಳಿದ ಆರು ಜನರಿಗೆ ಜೀವಾವಧಿ ಕರೆ ನೀರ ಶಿಕ್ಷೆ ಮತ್ತು ನಾಲ್ಕುನೂರು ಶೇತಸನದಿಗಳಿಗೆ ಸಾದಾ ಶಿಕ್ಷೆ ವಿಧಿಸಿ ತೀರ್ಪು ನೀಡಲಾಯಿತು.

Hearing in court As there weres against Sangolli Rayanna and his associates, a special court was set up for their trial. J.V. Anderson was appointed as Special Judge. A lengthy trial was held from 20 May 1830 to 30 December 1830 i.e. seven months and ten days. On December 30, 1830, a report was submitted to the Collector or of Bombay, recommanding the sentencing of 400 individuals as common offendors and 13 as major criminals. The Board of Governor of Mumbai dictated that seven people including Sangolli Rayanna, should be publicly hanged on January 26 1831 at a Banyan tree in Nandagad village in Bidi Taluk. On the same day, the remaining six people were sentenced to life imprisonment and four hundred people were sentenced to simple punishment.


ಸಾರ್ವಜನಿಕ ಗಲ್ಲು ಶಿಕ್ಷೆಗೆ ಗೆ ಯಾದವರು: ರಾಯಣ್ಣ ಭ ರೋಗಣ್ಣವರ, ಸಂಗೊಳ್ಳಿ; ಬಳನಾಯಕ ಮಲ್ಲನಾಯಕ, ಬಸ್ತವಾಡ; ಬಸಲಿಂಗಪ್ಪ, ಹಣಬರತಿ; ಭೀಮಾ ಜಿಡ್ಡಿಮನಿ, ಹೋಗರ್ತಿ; ಕೆಂಚಪ್ಪ, ಸಂಗ್ರೇಶಕೊಪ್ಪ; ಅಪ್ಪೋಜಿ ನಾಯಕ, ಸುತಗಟ್ಟಿ
ಜೀವಾವಧಿ ಶಿಕ್ಷೆಗೆ ಗುರಿಯಾದವರು: ರುದ್ರನಾಯಕ ನೀಲನಾಯಕ, ಬೆಳವಡಿ; ಯಲ್ಲನಾಯಕ, ಬೆಳವಡಿ; ಅಪ್ಪೊನಿ, ತಿಗಡೊಳ್ಳಿ; ರಾಲೋಜಿ ಕೊಂಡ, ಮಜ್ಜಿಗವಾಡ; ಕೊನೇರಿ, ತೋಪಿನಕಟ್ಟಿ; ನೇಮಣ್ಣ, ಕೊಡಚವಾಡ

The following were sentenced to public hangling: Rayanna B Roganvara, Sangolli; Balanayaka Mallanayaka, Bastawad; Basalingappa, Hanabarati; Karabasappa, Belavadi; Bhima Jiddimani, Hogarthi; Kenchappa, Sangreshkoppa; Appoji Nayak, Sutagatti
These were sentenced to life imprisonment: Rudranayaka Neelanayaka, Belavadi; Yallanayaka, Belavadi; Apponi, Tigadoli; Ranoji Konda, Majjigwad; Koneri, Topinakatti; Nernanna, Kodachand

ವೀರ ಮರಣ
26 ಜನೆವರಿ 1831 ರಂದು ಬೀಡಿ ತಾಲೂಕಿನ ನಂದಗಡದ ಹೊರವಲಯದ ಆಲದ ಮರಕ್ಕೆ ಸಂಗೊಳ್ಳಿ ರಾಯಣ್ಣ ಸಹಿತ ಏಳು ಜನರಿಗೆ ಮರಣ ದಂಡನೆ ಶಿಕ್ಷೆ ವಿಧಿಸುವುದು.ಅದೆ ದಿನ ಆರು ಜನರಿಗೆ ಜೀವಾವಧಿ ಕರೆ ನೀರು ಶಿಕ್ಷೆ ವಿಧಿಸಿದರು.

On January 26, 1831, seven people, including Rayanna, were hanged from a banyan tree on the outskirts of Nandagad in Bidi Taluk. On the same day, six people were sentenced to life imprisonment.

ಅಂತಿಮ ನಮನ
ಬೀಡಿ ತಾಲೂಕಿನ ನಂದಗಡದಲ್ಲಿ ಬಿಚ್ಚುಗತ್ತಿ ಚೆನ್ನಬಸಪ್ಪನ ಜೊತೆಗೆ ಸಂಗೊಳ್ಳಿ ಮತ್ತು ನಂದಗಡ ಜನರು ಸೇರಿಕೊಂಡು ಸಂಗೊಳ್ಳಿ ರಾಯಣ್ಣನ ಪಾರ್ಥಿವ ಶರೀರವನ್ನು ವಿಧಿವತ್ತಾಗಿ ಸಮಾಧಿ ಮಾಡಿದರು.ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ತಾಯಿ ಕೆಂಚಮ್ಮ ಮತ್ತು ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.ತನ್ನ ಆತ್ಮೀಯ ಗೆಳೆಯ ಅಮರನಾಗಿ ಉಳಿಯಬೇಕೆಂದು ಆತನ ಸಮಾಧಿ ಮೇಲೆ ಆಲದ ಸಸಿ ನೆಟ್ಟು ಅಂತಿಮ ನಮನ ಸಲ್ಲಿಸುತ್ತಿರುವುದು.
(ಬಿಚ್ಚುಗತ್ತಿ ಚನ್ನಬಸಪ್ಪನಿಂದ ಪ್ರತಿ ದಿನ ಸಮಾಧಿಗೆ ಪೂಜೆ ಸಲ್ಲಿಸುವ ಸಂಪ್ರದಾಯ ಪ್ರಾರಂಭ. ಈ ಪರಂಪರೆಯನ್ನು ನಂದಗಡದ ಚವ್ಹಾಣ ಮನೆತನದವರು ಪ್ರತಿ ನಿತ್ಯ ಸಮಾಧಿಗೆ ಪೂಜೆ ಸಲ್ಲಿಸುತ್ತಿದ್ದಾರೆ)

A final Obeisance
Bichugatti Chennabasappa Sangolli, the people of Sangolli and Nandagad buried the mortal remains of Sangolli Rayanna with all rituals. Sangolli Rayanna's mother Kenchamma and family members were present. In memory of Rayanna, Bichugatti Chennabasappa is planting a seedling of Banyan.
Bichchugatti Channabasappa initiated the daily practice of performing pooja at the Samadhi. The Chavan family of Nandagad is carrying on this custom till date.

ರಾಯಣ್ಣನ ಕಟ್ಟೆ
ಸಂಪಗಾವ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಕೆಂಚಮ್ಮ ಮತ್ತು ಬಿಚ್ಚುಗತ್ತಿ ಚನ್ನಬಸಪ್ಪ ಮುಂತಾದವರು.ಸಂಗೊಳ್ಳಿ ರಾಯಣ್ಣ ಕುಳಿತುಕೊಳ್ಳುತ್ತಿದ್ದ ಕಟ್ಟೆಗೆ "ಸಂಗೊಳ್ಳಿ ರಾಯಣ್ಣ ಕಟ್ಟೆ"ಎಂದು ನಾಮಕರಣ ಮಾಡಿದರು. ಕಟ್ಟೆಯ ಮೇಲೆ ಆತನು ಕುಸ್ತಿ ತಾಲೀಮಿಗೆ ಬಳಸಿದ ಲೋಡು ಮತ್ತು ಶಕ್ತಿಗಲ್ಲು ಪ್ರತಿಷ್ಠಾಪಿಸಿದರು. ಅವುಗಳಿಗೆ ಪೂಜೆ ಸಲ್ಲಿಸುವ ಮೂಲಕ ದಿನಕರ್ಮ ನೆರವೇರಿಸುತ್ತಿರುವುದು (ಸಂಗೊಳ್ಳಿ ಗ್ರಾಮದ ಡೊಳ್ಳಿನ ಮನೆತನದವರು ಲೋಡು ಮತ್ತು ಶಕ್ತಿಗಲ್ಲಿನ ಮೂರ್ತಿಗೆ ಪ್ರತಿ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ).

Sangolli Rayanna 'Katte' (altar)
Kenchamma and Bichugatti Channabasappa etc. in Sangolli village of Sampagawa taluk named the platform on which Sangolli Rayanna used to sit 'Sangolli Rayanna Katte'. On the altar, they installed the Lodu (dumbbell) and Shaktigallu (stone used for weightlifting) used for the wrestling exercise by Rayanna. The Dollin family of Sangolli village offer daily pooja to 'Lodu' and 'Shaktigallu'.

ಸಂಗೊಳ್ಳಿಯಲ್ಲಿ ರಾಯಣ್ಣನ ಜಾತ್ರೆ
ಸಂಗೊಳ್ಳಿ ಗ್ರಾಮದ ಹಿರಿಯರು ಸಂಗೊಳ್ಳಿ ರಾಯಣ್ಣ ಕಟ್ಟೆಯ ಮೇಲೆ ಸ್ಥಾಪಿಸಿದ ಶಕ್ತಿಗಲ್ಲು ಮತ್ತು ಲೋಡುಗಳಿಗೆ ದೇವಸ್ಥಾನ ನಿರ್ಮಾಣ ಮಾಡಿದರು.ಶಕ್ತಿಗಲ್ಲಿನಲ್ಲಿ ವೀರಾಸನ ಭಂಗಿಯಲ್ಲಿ ಸಂಗೊಳ್ಳಿ ರಾಯಣ್ಣನ ಸುಂದರ ಮೂರ್ತಿ ಕೆತ್ತಿಸಿದರು.ಆತನ ಸ್ಮರಣೆ ಹಿನ್ನೆಲೆ ಹೊಂದಿರುವ ಪಾರಿವಾಳ ಸ್ಪರ್ಧೆ ಗೆಲುವಿನ ಸಂಭ್ರಮ ಸೇರಿಸಿಕೊಂಡು ದವನದ ಹುಣ್ಣಿಮೆ (ಚೈತ್ರ ಪೂರ್ಣಿಮೆ) ಜಾತ್ರೆ ಆರಂಭಿಸಿದರು. ಅಂದು ಬೀರೇಶ್ವರ ಜಯಂತಿ ದಿನವೂ ಆಗಿತ್ತು.'ಆಂಗ್ಲ ಸರ್ಕಾರದ ಆಡಳಿತದ ಅವಧಿಯಲ್ಲಿ ಜಾತ್ರೆಯನ್ನು ಆಚರಿಸಲು ಪ್ರಾರಂಭಿಸಿದರು.'ಬ್ರಿಟೀಷರಿಗೆ ಬೀರಪ್ಪ ಊರವರಿಗೆ ರಾಯಪ್ಪ' ಎಂಬುದು ಊರ ಜನರ ಘೋಷಣೆ.

Rayanna's fair at Sangolli
The elders of Sangolli village paid homage to the Shakti stone and 'lodu'. They carved a beautiful statue of Sangolli Rayanna in the pose of 'Veerasan' (a yoga pose) in the 'Shakti stone. They started the fair on full moon day (Davanad Hunnime). It was also 'Bireshwar Jayanti' day.

In the course of Rayanna's story we have heard several place names. It would be interesting to see the locations of those places to get an idea of how much Rayanna traveled. Below is the list of places and following the list is the map showing the locations.

    1. Sangolli
    2. Kittur
    3. Dharwad
    4. Sampgaon
    5. Dori
    6. Nandgad
    7. Bidi
    8. Haliyal
    9. Khanapur
    10. Mastamardi
    11. Belagavi
    12. Bavihal
    13. Handibadangnath Mutt
    14. Gundolli
    15. Bailhongal
    16. Balagund
    17. Shorapur

At the end I would to suggest a few older posts about Rayanna, below are hyperlinked texts which will link you to those posts:

Rayanna memorial at Nandgadh - Rayanna's execution & burial
Haliyal fort - Rayanna had captured Haliyal fort from the British

.........

No comments:

Post a Comment