..tour continued from Sangolli Rayanna Rock Garden part-2.
ಶೇತಸನದಿಗಳ ಸಂಘಟನೆ
ಬ್ರಿಟಿಷ್ ಸರ್ಕಾರದ ಇನಾಂ ಕಾಯ್ದೆ ವಿರೋಧಿಸಿ ಕಿತ್ತೂರು ನಾಡಿನ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿತು. ಸಂಗೊಳ್ಳಿ ರಾಯಣ್ಣನ ಇನಾಂ ಭೂಮಿ ಮುಟ್ಟುಗೋಲು ವರದಿ ಹೊರಬೀಳುತ್ತಿದ್ದಂತೆ ಅನೇಕ ಶೇತಸನದಿ ಭೂಮಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಪ್ರಾರಂಭಿಸಿತು. ಇದರಿಂದ ಕೆರಳಿದ ಕಿತ್ತೂರು ಶೇತಸನದಿಗಳು ಸಂಗೊಳ್ಳಿ ರಾಯಣ್ಣನ ನೇತೃತ್ವದಲ್ಲಿ ಸಂಘಟಿತರಾಗಿ ಸಂಗೊಳ್ಳಿಗೆ ಬರುವುದು.
Organisation of Shetasanadis
(soldiers) In this tableau we see the people of Kitturu vehemently opposed the British Inam Act. The government begin seizing many Shetasanadi (soldiers) lands. As soon as word spreads about the confiscation of Sangolli Rayanna's Inam land the Kitturu Shetasanadis are infuriated and band together under the leadership of Sangolli Rayanna and travel to Sangolli.
ಆಂಗ್ಲ-ಶೇತಸನದಿ ಯುದ್ಧ
ಕಿತ್ತೂರು ಸೈನ್ಯ ಸಂಗೊಳ್ಳಿ ಕುಲಕರ್ಣಿಯ ಜಮೀನಿಗೆ ಆಗಮಿಸಿತು.ಅಲ್ಲಿಯ ಜೋಳದ ಬಣವಿಗಳಿಗೆ ಬೆಂಕಿ ಹಚ್ಚಿದರು. ಇದನ್ನು ತಡೆಯಲು ಆಂಗ್ಲ ಸೈನ್ಯ ಆಗಮಿಸಿತು. ಭಯಂಕರ ಯುದ್ಧ ನಡೆಯಿತು.ಸಂಗೊಳ್ಳಿ ರಾಯಣ್ಣನ ನೇತೃತ್ವದಲ್ಲಿ ನಡೆದ ಪ್ರಥಮ ಆಂಗ್ಲ-ಶೇತಸನದಿ ನೇರ ಯುದ್ಧ ಇದಾಗಿತ್ತು. ಈ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣನ ತಂಡ ವಿರೋಚಿತ ಗೆಲುವು ಸಾಧಿಸುತ್ತಿರುವುದು.
Anglo-Shetasanadi War
The Kitturu army assembled and arrived at Kulkarni's farm. They set fire to the corn stacks there. The English army arrived to stop this. A terrible battle took place. This was the first Anglo-Shetasanadi battle under the leadership of Sangolli Rayanna.
In this battle, Sangolli Rayanna's army was victorious.
ಸುರಪುರ ದರೋಡೆಕೋರನ ಹತ್ಯೆ
ಬ್ರಿಟಿಷ್ ಆಡಳಿತ ವಿರುದ್ಧ ಹೋರಾಟ ಮಾಡಲು ಸಂಗೊಳ್ಳಿ ರಾಯಣ್ಣನಿಗೆ ಇನ್ನಷ್ಟು ಸೈನ್ಯದ ಅವಶ್ಯಕತೆಯಿತ್ತು. ಅದಕ್ಕಾಗಿ ಹೈದರಾಬಾದ ಪ್ರಾಂತ್ಯಕ್ಕೆ ಸೇರಿದ ಸುರುಪುರ ಸಂಸ್ಥಾನದ ಕೃಷ್ಣಪ್ಪ ನಾಯಕರ ಭೇಟಿಗೆ ತೆರಳುತ್ತಾನೆ. ಅವರನ್ನು ಭೇಟಿಯಾಗುವ ಪೂರ್ವದಲ್ಲಿ ಅವರ ಸಂಸ್ಥಾನಕ್ಕೆ ಕಂಟಕವಾಗಿದ್ದ ಭರಮನಾಯಕ ಎಂಬ ದರೋಡೆಕೋರನ ಜೊತೆಗೆ ಖಡ್ಗ ಕಾಳಗದಲ್ಲಿ ಹತ್ಯೆ ಮಾಡುತ್ತಾನೆ.
The Killing of A Surapur Robber
Sangolli Rayanna needed more troops to fight against British rule. For that, Rayanna goes to meet Krishnappa of Surapur, a kingdom belonging to the province of Hyderabad. On the way to meet him, he kills Bharamanayaka, a bandit who posed a threat to his kingdom, in a sword fight.
ಸುರಪುರ ನಾಯಕರ ನೆರವು
ದರೋಡೆಕೋರ ಭರಮನಾಯಕನ ರುಂಡವನ್ನು ಕತ್ತರಿಸಿ ಸುರಪುರದ ಕೃಷ್ಣಪ್ಪ ನಾಯಕರ ಅರಮನೆಗೆ ಬರುತ್ತಾನೆ.ಇದನ್ನು ಕಂಡ ಕೃಷ್ಣಪ್ಪ ನಾಯಕರು ಸಂಗೊಳ್ಳಿ ರಾಯಣ್ಣನನ್ನು ಅರಮನೆಯಲ್ಲಿ ಗೌರವಿಸಿ ಮುನ್ನೂರು ಜನ ನುರಿತ ಸೈನಿಕ ಪಡೆ ಕೊಟ್ಟು ಕಳುಹಿಸುವುದು.
Help from Surapur Nayak
After executing the robber Bharamanayaka, Rayanna brought the head of the robber to the palace of Krishnappa Nayak of Surapur. Impressed by this, Krishnappa Nayak honoured Rayanna in the palace and presented him a troop of three hundred trained soldiers.
Thus gets help from Surapur Nayak.
ದತ್ತುಪುತ್ರ ಮಲ್ಲಸರ್ಜ ವಶಕ್ಕೆ
ಕಿತ್ತೂರು ಸಂಸ್ಥಾನದ ದತ್ತು ಪುತ್ರ ಮಲ್ಲಸರ್ಜರ ದತ್ತಕವನ್ನು ಬ್ರಿಟಿಷರು ಮಾನ್ಯ ಮಾಡದದಿದ್ದಾಗ ಬೆಳಗಾವಿ ಹತ್ತಿರದ ಸ್ವಗ್ರಾಮ ಮಾಸ್ತಮರಡಿಗೆ ಕಳುಹಿಸಲಾಗಿತ್ತು. ಸಂಗೊಳ್ಳಿ ರಾಯಣ್ಣ ಕೌಲಗುಡ್ಡ ಸಭೆಯ ತೀರ್ಮಾನದಂತೆ ದತ್ತು ಪುತ್ರನನ್ನು ತಮ್ಮ ರಾಜನೆಂದು ಸ್ವೀಕರಿಸಿ ಆತನನ್ನು ತಮ್ಮ ವಶಕ್ಕೆ ಪಡೆಯಲು ಮಾಸ್ತಮರಡಿಯ ಬಾಳನಗೌಡರ ಮನೆಗೆ ಆಗಮಿಸಿಆತನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುವುದು.
Efforts to reinstate the adopted son, Mallasarja
When the appointment of Mallasarja as king, the adopted son of Kitturu state, was not validated by the British, he was sent to his native village, Mastamaradi, near Belagavi. In accordance with the decision Sangolli Rayanna and his allies made at the Kaulagudda meeting, they accepted the adopted son as their king and travelled to Balana Gowda's home in Mastamaradi to bring him with them.
ಕೌಲಗುಡ್ಡ ಸಭೆ
ಕಿತ್ತೂರು ನಾಡಿನ ಸೈನಿಕರನ್ನು ಮತ್ತು ಸುರಪುರ ನಾಡ ವೀರರನ್ನು ಸಂಘಟಿಸಿದ ಸಂಗೊಳ್ಳಿ ರಾಯಣ್ಣ ಬೆಳಗಾವಿ ತಾಲೂಕಿನ ಬಡಾ ಅಂಕಲಗಿ ಸಮೀಪದ ಕಾಡಿನ ಮಧ್ಯೆ ಇರುವ ಕೌಲಗುಡ್ಡ ಎಂಬ ಸ್ಥಳದಲ್ಲಿ ಸಭೆ ಸೇರಿದರು. ಕಿತ್ತೂರು ಸಂಸ್ಥಾನವನ್ನು ಸ್ವತಂತ್ರ ರಾಜ್ಯವೆಂದು ಘೋಷ ಮಾಡಿದರು.ದತ್ತು ಪುತ್ರ ಮಲ್ಲಸರ್ಜರು ತಮ್ಮ ರಾಜನೆಂದು ತೀರ್ಮಾನಿಸಿದರು.ಅದಕ್ಕಾಗಿ ನೇಲೆ ಮತ್ತು ಗೆರಿಲ್ಲಾ ಮಾದರಿ ಯುದ್ಧ ಸಾರುವುದು ಹಾಗೂ ಹೊಸ ರಾಜನ ಹೆಸರಿನಲ್ಲಿ ಕಂಗಾಯ ವಸೂಲಿ ಮಾಡಲು ತೀರ್ಮಾನಿಸುತ್ತಿರುವುದು.
A meeting at Kaulagudda
Sangolli Rayanna, who organised the soldiers of Kitturu and the Surapur province, called a meeting at Kaulagudda, a place in the middle of the forest near Badala Ankalagi in Belgaum Taluk. They declared Kitturu an independent state and appointed the adopted son, Mallasarja, as their king. They decided to wage direct and guerilla warfare and collect revenue in the name of the new king.
ಹಂಡಿಬಡಗನಾಥ ಶ್ರೀಗಳ ದರ್ಶನ
ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ತಮ್ಮ ಜೊತೆಗೆ ಮಲ್ಲಸರ್ಜರನ್ನು ಪಶ್ಚಿಮ ಘಟ್ಟದ ಮದ್ಯೆದ ಹಂಡಿಬಡಗನಾಥ ಮಠಕ್ಕೆ ಕರೆದುಕೊಂಡು ಬಂದರು. ಶಾಂತಿನಾಥ ಮಹಾರಾಜರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಶ್ರೀಗಳು ಮಲ್ಲಸರ್ಜರನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಒಪ್ಪಿಕೊಂಡರು.
A visit to Handibadganath Seer
Sangolli Rayanna and his companions bring Mallasarja along with them to Handibadganath Math, which is situated in the midst of the Western Ghats. There, they held conversations with Shantinath Seer. The seer consents to provide refuge to Mallasarja.
ದತ್ತುಪುತ್ರ ಮಲ್ಲಸರ್ಜ ವಶಕ್ಕೆ
ಕಿತ್ತೂರು ಸಂಸ್ಥಾನದ ದತ್ತು ಪುತ್ರ ಮಲ್ಲಸರ್ಜರ ದತ್ತಕವನ್ನು ಬ್ರಿಟಿಷರು ಮಾನ್ಯ ಮಾಡದದಿದ್ದಾಗ ಬೆಳಗಾವಿ ಹತ್ತಿರದ ಸ್ವಗ್ರಾಮ ಮಾಸ್ತಮರಡಿಗೆ ಕಳುಹಿಸಲಾಗಿತ್ತು. ಸಂಗೊಳ್ಳಿ ರಾಯಣ್ಣ ಕೌಲಗುಡ್ಡ ಸಭೆಯ ತೀರ್ಮಾನದಂತೆ ದತ್ತು ಪುತ್ರನನ್ನು ತಮ್ಮ ರಾಜನೆಂದು ಸ್ವೀಕರಿಸಿ ಆತನನ್ನು ತಮ್ಮ ವಶಕ್ಕೆ ಪಡೆಯಲು ಮಾಸ್ತಮರಡಿಯ ಬಾಳನಗೌಡರ ಮನೆಗೆ ಆಗಮಿಸಿಆತನನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುವುದು.
Efforts to reinstate the adopted son, Mallasarja
When the appointment of Mallasarja as king, the adopted son of Kitturu state, was not validated by the British, he was sent to his native village, Mastamaradi, near Belagavi. In accordance with the decision Sangolli Rayanna and his allies made at the Kaulagudda meeting, they accepted the adopted son as their king and travelled to Balana Gowda's home in Mastamaradi to bring him with them.
ಬೀಡಿ ಅಮಲ್ದಾರ ಕಚೇರಿ ಮುತ್ತಿಗೆ
6 ಜನೆವರಿ 1830 ರಂದು ರಾತ್ರಿ ಧಾರವಾಡ ಜಿಲ್ಲೆಯ ಬೀಡಿ ತಾಲೂಕ ಅಮಲ್ದಾರ ಕಚೇರಿ ಮೇಲೆ ದಾಳಿ ಮಾಡಿದರು.ಕಾವಲಿದ್ದ ಪೋಲಿಸರ ಮೇಲೆ ಹಲ್ಲೆ ಮಾಡಿ,ಕಂದಾಯದ ಹಣ ಲೂಟಿ ಮಾಡಿದರು. ಕಾಗದದ ಪತ್ರ ಸಹಿತ ಕಚೇರಿಯನ್ನು ಸುಟ್ಟು ಹಾಕುತ್ತಿರುವುದು.
The office of Beedi Amaldar under siege
The scene depicted here is when Sangolli Rayanna and his allies attacked the office of the Bidi Taluk Amaldar in the Dharwad district on the night of January 6, 1830. They looted the tax money and attacked the police officers on duty. The documents and the office were set on fire.
ಖಾನಾಪುರ ಸೇನಾ ಠಾಣೆ ಮೇಲೆ ದಾಳಿ
ಧಾರವಾಡ ಜಿಲ್ಲೆಯ ಬೀಡಿ ತಾಲೂಕಿನ ಖಾನಾಪುರ ಬ್ರಿಟಿಷರ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಇದನ್ನು ಶಿವಲಿಂಗ ರುದ್ರ ಸರ್ಜ 1818 ರ ಮನೋ ಒಪ್ಪಂದದ ಪ್ರಕಾರ ಆಂಗ್ಲರ ಸೇನಾ ನೆಲೆಯಾಗಿ ಬಿಟ್ಟು ಕೊಟ್ಟಿದ್ದನು. ಬ್ರಿಟೀಷರು ಇಲ್ಲಿ ಸೇನಾ ಠಾಣೆ ಸ್ಥಾಪಿಸಿದ್ದರು.ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ಖಾನಾಪುರ ಪಟ್ಟಣದ ಮೇಲೆ ದಾಳಿ ಐಾಡಿದರು.ನಂತರ ಮೇಜರ್ ಪಿಕರಿಂಗ್ ನೇತೃತ್ವದ ಸೇನಾ ಠಾಣೆಯ ಮೇಲೆ ನಿರಂತರ ಗುಂಡಿನ ದಾಳಿ ನಡೆಸುತ್ತಿರುವುದು.
Ar attack on Khanapur army station
Khanapur, in Eidi Taluk of Dharwad District, was an important commercial centre for the British. Shivalinga Rudra Sarja had left it as a military base as per the Monroe Treaty of 1818. The British had established an army station here. Sangolli Rayanna and his companions attacked the town of Khanapur. The army station led by Major Pickering was continuously fired upon.
ಸಂಪಗಾವಿ ಅಮಲ್ದಾರ ಕಚೇರಿಗೆ ಮುತ್ತಿಗೆ
ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು 12 ಜನೆವರಿ 1830 ರಂದು ಮುಂಜಾನೆ ಸಂಪಗಾವ ತಾಲೂಕಾ ಅಮಲ್ದಾರ ಕಚೇರಿಯ ಮೇಲೆ ದಾಳಿ ಮಾಡಿದರು. ಕಾವಲಿದ್ದ ದೇವಲಾಪುರದ ಶೇತಸನದಿಗಳು ಸಂಗೊಳ್ಳಿ. ರಾಯಣ್ಣನ ತಂಡ ಸೇರಿಕೊಂಡರು. ಕಚೇರಿಯಲ್ಲಿಯ ಕಂದಾಯದ ಹಣ ಲೂಟಿ ಮಾಡಿದರು.ಕಾಗದ ಪತ್ರ ಸಹಿತ ಕಚೇರಿಯನ್ನು ಸುಟ್ಟುಹಾಕಿದರು.ಅಮಲ್ದಾರ ಐದು ಸಾವಿರ ಕಂದಾಯದ ಹಣ ಮತ್ತು ಮದ್ದು ಗುಂಡುಗಳನ್ನು ಊರ ಮಸೀದಿಯ ಗುಮ್ಮಟದ ಮೇಲೆ ಅಡಗಿಸಿಟ್ಟಿದ್ದನು.ಆದರೆ ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ಮಸೀದಿ ಕಡೆಗೆ ಹೋಗದೆ ಭಾವೈಕ್ಯತೆಯ ಮೆರೆದರು.
The siege of Sampagavi Amaldar's office
On January 12, 1830, Sangolli Rayanna and his friends broke into the office of Sampagavi Taluk Amaldar early in the morning. The Devalapur Shetasanadis, who were standing guards, joined Sangolli Rayanna's team. They raided and took the revenue from the office. They burned the office with all its records. Amaldar had hid the revenue amount of Rs. 5,000 and ammunition in the dome of a mosque. However, Sangolli Rayanna and his friends chose not to enter the mosque. This demonstrates his religious tolerance.
ಅಮಲ್ದಾರ ಸೈನ್ಯದ ಮೇಲೆ ನೇರ ದಾಳಿ
ಸಂಗೊಳ್ಳಿ ರಾಯಣ್ಣನ ತಂಡ ಕಚೇರಿಯನ್ನು ಸಂಪೂರ್ಣ ಸುಟ್ಟು ಹಾಕಿದರು.ಸಂಪಗಾವ ಅಮಲ್ದಾರ ಕೃಷ್ಣರಾವನ ಸೈನ್ಯ ಬಾವಿಹಾಳ ಮಾರ್ಗದಲ್ಲಿ ಬರುತ್ತಿರುವ ಸಂಗತಿ ತಿಳಿಯಿತು. ಸಂಗೊಳ್ಳಿ ರಾಯಣ್ಣನ ತಂಡ ಮತ್ತು ಅಮಲ್ದಾರ ತಂಡವನ್ನು ಊರಿನ ಬಾವಿಯ ಹತ್ತಿರ ಎದುರಾಯಿತು.ಎರಡು ತಂಡಗಳ ನಡುವೆ ನೇರ ಯುದ್ಧ ಆರಂಭವಾಯಿತು.
A direct assault on Amaldar's army
Sangolli Rayanna's team set the office on fire. The army of Sampagavi Amaldar Krishna Rao was en route to Bavihal. The teams of Sangolli Rayanna, and Amaldar came face to face by the town well. Here we see the two teams engaged in direct combat.
Some of the exhibits and paintings couldn't be photographed since trees were obstructing the views. However the captions have been put here to maintain continuity of the story.
ಬಾಪು ಭಂಡಾರಿಗೆ ಮರಣ ದಂಡನೆ
ಸಂಗೊಳ್ಳಿ ರಾಯಣ್ಣ ನಂದಗಡ ಕೋಟೆಯಲ್ಲಿ ವಾಸ್ತವ್ಯ ಮಾಡಿದ್ದನು.ನಂದಗಡದ ಬ್ರಾಹ್ಮಣ ವಿಧವೆ ಸ್ತ್ರೀ ತನ್ನ ಗಂಡನನ್ನು ಬಾಪು ಕೊಂದುಹಾಕಿದ ವಿಷಯ ತಿಳಿಸಿದಳು.ಹಡಲಗಿ ಗ್ರಾಮ ದಹನ ಮತ್ತು ಬ್ರಾಹ್ಮಣ ವ್ಯಕ್ತಿ ಹತ್ಯೆ ಪ್ರಕರಣದ ಆಧಾರದ ಮೇಲೆ ಸಂಗೊಳ್ಳಿ ರಾಯಣ್ಣ ಬಾಪು ಭಂಡಾರಿ ಮತ್ತು ಆತನ ಮಗನಿಗೆ ಮರಣ ದಂಡನೆ ಶಿಕ್ಷೆ ವಿಧಿಸುವುದು.
The death penalty for Bapu Bhandari
Sangolli Rayanna stayed at Nandagad Fort. A Brahmin widow of Nandagad narrated the story of Bapu killing her husband. Sangolli Rayanna sentenced Bapu Bhandari and his son to death based on the Hadalagi village burning case and the murder of the Brahmin man.
ರಕ್ತಮಾನ್ಯ ಹೊಲದಲ್ಲಿ ರಾಶಿ-ಸಹಪಂಕ್ತಿ ಭೋಜನ
ಇನಾಂ ಕಾಯ್ದೆ ಪ್ರಕಾರ ಕರ ನಿರಾಕರಿಸಿದ ಜಮೀನುಗಳನ್ನು ಬ್ರಿಟಿಷ್ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು ಈ ಕಾಯ್ದೆ ಭಂಗಗೊಳಿಸಲು ಸಂಗೊಳ್ಳಿ ರಾಯಣ್ಣ 14 ಜನೆವರಿ 1830 ರಂದು ಸಾವಿರಾರು ಗೆಳೆಯರ ಜೊತೆಗೆ ಸಂಗೊಳ್ಳಿಯ ತನ್ನ ರಕ್ತಮಾನ್ಯ ಭೂಮಿಯಲ್ಲಿ ಜೋಳದ ತೆನೆಗಳನ್ನು ಕಟಾವು ಮಾಡಿ ರಾಶಿ ಮಾಡಿರುವುದು.
@.ಆಂಗ್ಲ ಸೇನೆ ದಾಳಿ
ರಕ್ತಮಾನ್ಯ ಜಮೀನಿನಲ್ಲಿ ಜೋಳ ರಾಶಿ ಮಾಡುತ್ತಿರುವ ವಿಚಾರ ತಿಳಿದ ಸಂಪಗಾವ ಅಮಲ್ದಾರ ಅದನ್ನು ತಡೆಯಲು ಆಂಗ್ಲ ಸೇನೆ ಕಳುಹಿಸಿದನು.ಭಯಂಕರ ಕಾದಾಟ ನಡೆಯಿತು ಸಂಗೊಳ್ಳಿ ರಾಯಣ್ಣ ಮತ್ತು ಸಹಚರರು ಆಂಗ್ಲ ಸೇನೆಯನ್ನು ಪರಾಭವಗೊಳಿಸಿದ್ದರು.
@.ರಾಶಿ ಹಬ್ಬ
ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರು ಜೋಳ ರಾಶಿ ಮಾಡಿ ವಿವಿಧ ಭಕ್ಷ್ಯ ಭೋಜನ ತಯಾರಿಸಿ ಎಲ್ಲರೂ ರಾಶಿಗೆ ಪೂಜೆ ಸಲ್ಲಿಸಿದರು ಸಂಭ್ರಮದಿಂದ ರಾಶಿ ಹಬ್ಬ ಮಾಡಿದರು
@ ಸಹಪಂಕ್ತಿ ಭೋಜನ
ರಾಶಿ ಹಬ್ಬದ ನಿಮಿತ್ಯ ಮಾಡಿದ ವಿವಿಧ ಭಕ್ಷ್ಯ ಭೋಜನವನ್ನು ಜಾತಿ,ಧರ್ಮದ ಭೇದವಿಲ್ಲದೆ ಎಲ್ಲರೂ ಒಂದೇ ಪಂಕ್ತಿಯಲ್ಲಿ ಕುಳಿತು ಸಹಪಂಕ್ತಿ ಭೋಜನ ಸವಿದರು.ಹಿಂದಿನ ಕಾಲದಿಂದಲೂ ಆಯಾ ಜಾತಿ ಮತ್ತು ಧರ್ಮದ ಜನರು ಪ್ರತ್ಯೇಕವಾಗಿ ಊಟ ಮಾಡುವ ವ್ಯವಸ್ಥೆಯಿತ್ತು.ಸಂಗೊಳ್ಳಿ ರಾಯಣ್ಣ ಈ ಸಂಪ್ರದಾಯ ಮುರಿದು ಎಲ್ಲರೂ ಸಹಪಂಕ್ತಿ ಭೋಜನ ಸ್ವೀಕರಿಸುವ ಮೂಲಕ ಇತಿಹಾಸ ನಿರ್ಮಿಸಿದರು.
ಸಂಗೊಳ್ಳಿಯಲ್ಲಿ ಅದ್ದೂರಿ ಸ್ವಾಗತ.
ಸಂಗೊಳ್ಳಿ ರಾಯಣ್ಣ ಮತ್ತು ಸಹಚರರು ಬ್ರಿಟಿಷ ಸರ್ಕಾರದ ಮೇಲೆ ಅದ್ದೂರಿ ವಿಜಯ ಸಾಧಿಸಿ ಹುಟ್ಟೂರಿಗೆ ಆಗಮಿಸಿದರು. ಗ್ರಾಮದ ಜನರು ಕೊಂಬು ಕಹಳೆ ಮತ್ತು ನಗಾರಿ ಬಾರಿಸುತ್ತ ಅದ್ದೂರಿಯಾಗಿ ಅವರನ್ನು ಸ್ವಾಗತಿಸುವುದು.
A grand welcome at Sangolli
Sangolli Rayanna and his companions arrived in their native land with a grand victory over the British. Here we see the people of the village greeting them enthusiastically by blowing horns and ringing gongs.
ಪತ್ರ ಸಂಚಾರಕ್ಕೆ ನಿಬರ್ಂಧ
ಸಂಗೊಳ್ಳಿ ಆಂಗ್ಲರ ಪತ್ರ ಸಂಚಾರದ ಆಯಕಟ್ಟಿನ ಸ್ಥಳವಾಗಿತ್ತು.ಈ ಮಾರ್ಗದ ಮೂಲಕ ಧಾರವಾಡ,ಬೆಳಗಾವಿ ಮತ್ತು ಮುಂಬೈಗೆ ಪತ್ರ ಸಂಚಾರ ನಡೆಯುತ್ತಿತ್ತು. 14 ಜನೆವರಿ 1830 ರಂದು ಸಂಗೊಳ್ಳಿ ಚಾವಡಿ ಮತ್ತು ಟಪಾಲ ಕಚೇರಿಗೆ ಬೆಂಕಿ ಹಚ್ಚಿದರು. ಸಂಗೊಳ್ಳಿ ಟಪಾಲ ರನ್ನರಗಳ ಮೇಲೆ ಹಲ್ಲೆ ನಡೆಸಿದರು.ಅವರಿಂದ ಟಪಾಲು ಕಸಿದುಕೊಂಡು ಸುಟ್ಟು ಹಾಕಿದರು ಬ್ರಿಟಿಷರ ಪತ್ರ ಸಂಚಾರ ವ್ಯವಸ್ಥೆಗೆ ಕಡಿವಾಣ ಹಾಕುವ ಮೂಲಕ ಅವರ ಸರ್ಕಾರಿ ವ್ಯವಸ್ಥೆಯ ಅಸ್ತಿತ್ವಕ್ಕೆ ಅಲುಗಾಡುವಂತೆ ಮಾಡುವುದು.
Disrupting the postal system
Sangolli was a strategic place for dispatching the letters. Through this route, letters were carried to Dharwad, Belagavi, and Mumbai. On January 14, 1830, they set fire to the Sangolli post office, attacked postmen, snatched mail from them, and burned it. This act disrupted the British postal system, upending their administrative structure.
ಬಾಳಗುಂದ ಗೆರಿಲ್ಲಾ ಯುದ್ಧ
14 ಜನವರಿ 1830 ರಂದು ರಾತ್ರಿ ಬಾಳಗುಂದ ದಟ್ಟ ಗುಡ್ಡದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರ ಮೇಲೆ ದಾಳಿ ಮಾಡಲು ಆಂಗ್ಲ ಸೇನೆ ಬಂದಿತ್ತು. ಈ ಬ್ರಿಟಿಷ್ ಸೈನ್ಯದ ಮೇಲೆ ಸಂಗೊಳ್ಳಿ ರಾಯಣ್ಣ ತಂಡವು ಗೆರಿಲ್ಲಾ ಯುದ್ಧ ಸಾರಿತು.
Balagund Guerrilla War
On the night of January 14, 1830, the British army came to attack Sangolli Rayanna and his companions on the hill of Balagunda.
Sangolli Rayanna's team waged a guerilla war against the British army.
ಸುಪಾರಿ ಕಿಲ್ಲರ್ ಪರಿಶ್ಯಾನ ಹತ್ಯೆ
ಮದ್ರಾಸ ಪ್ರೆಸಿಡೆನ್ಸಿ ವ್ಯಾಪ್ತಿಯ ಹಳಿಯಾಳ ತಾಲೂಕು ಅಮಲ್ದಾರ ಕಚೇರಿ ಮೇಲೆ 16 ಜನೆವರಿ 1830 ರಂದು ಸಂಗೊಳ್ಳಿ ರಾಯಣ್ಣ ಪಡೆ ದಾಳಿ ಮಾಡಿತು. ಕಂದಾಯದ ಹಣ ಲೂಟಿ ಮಾಡಿ,ಕಾಗದ ಪತ್ರಗಳ ಸಮೇತ ಕಚೇರಿಗೆ ಬೆಂಕಿ ಹಚ್ಚಿದರು. ಹಳಿಯಾಳ ಪರಿಶ್ಯಾ,ಭಾಗವಾಡ ಜಿಲ್ಲಾಧಿಕಾರಿ ನಿಸ್ಟರ್ ಅವರಿಂದ ಸಂಗೊಳ್ಳಿ ರಾಯಣ್ಣನನ್ನು ಕೊಲ್ಲಲು ಐದು ನೂರು ಹಣ ಸುಪಾರಿ ಪಡೆದಿದ್ದನು.ಈ ವಿಷಯ ತಿಳಿದು ಸಂಗೊಳ್ಳಿ ರಾಯಣ್ಣ ಹಳಿಯಾಳ ಮಾರುಕಟ್ಟೆಗೆ ಬಂದನು. ಪೇಟೆಯಲ್ಲಿ ಆಂಗ್ಲರ ಕೃಪಾಪೋಷಿತ ವ್ಯಾಪಾರಿಗಳ ವಸ್ತುಗಳನ್ನು ಲೂಟಿ ಮಾಡಿದರು.ಈ ಸಂದರ್ಭದಲ್ಲಿ ಪರಿಶ್ಯಾ ಸಂಗೊಳ್ಳಿ ರಾಯಣ್ಣನ ಕಡೆಗೆ ಗುರಿ ಇಟ್ಟು ಗುಂಡು ಹಾರಿಸಿದನು. ಅದು ಅವನ ತೊಡೆಗೆ ತಾಗಿತು.ಅದೆ ರೋಷದಲ್ಲಿ ಪರಿಶ್ಯಾನ ರುಂಡ ಕತ್ತರಿಸುವುದು.
Contract killer Parishya killed
On January 16, 1830, Sangolli Rayanna's force attacked the office of Amaldar of Haliya Taluk under the Madras Presidency. They looted the revenue money and set fire to the office along with the papers. Parishya, a contract killer of Haliyal, had received five hundred rupees from Dharwad District Collector Nisbat to kill Sangolli Rayanna. Knowing this, Sangolli Rayanna came to Haliyal Market. They looted the goods of the British merchants in the city. On this occasion, Parishya Sangolli aimed at Rayanna and fired a shot. It hit him in the thigh. An infuriated Rayanna is seen chopping the head of Parishya.
ಗುಂಡೊಳ್ಳಿಯ ನೇರ ಯುದ್ಧ
ಧಾರವಾಡ ಜಿಲ್ಲೆಯ ಬೀಡಿ ತಾಲೂಕಿನ ಗುಂಡೊಳ್ಳಿ ಎಂಬ ಊರಿನ ಕೆರೆಯ ಹತ್ತಿರ ಆಂಗ್ಲ ಸೈನ್ಯ ಮೇಜರ್ ಪಿಕರಿಂಗ್ ನೇತೃತ್ವದಲ್ಲಿ ಬಿಡಾರ ಹೂಡಿರುವ ಸಂಗತಿ ತಿಳಿದು ಸಂಗೊಳ್ಳಿ ರಾಯಣ್ಣ ತಂಡದವರು 21 ಜನೆವರಿ 1830 ರಂದು ಅವರ ಮೇಲೆ ನೇರ ಯುದ್ಧ ಸಾರುತ್ತಾರೆ.ಭಯಂಕರ ಯುದ್ಧ ನಡೆಯುತ್ತಿರುವುದು.
Gundolli battle
Sangolli Rayanna's team came to know about the fact that the British army under the command of Major Pickering had camped near the lake of Gundolli in Bidi Taluk of Dharwad district. On January 21, 1830, Rayanna's team declares a direct battle against them. A fierce battle is going on.
ಕಿತ್ತೂರ ಕೋಟೆ ಮುತ್ತಿಗೆ
ಧಾರವಾಡ ಜಿಲ್ಲೆಯ ಕಿತ್ತೂರು ತಾಲೂಕಿನ ಕಿತ್ತೂರು ಕೋಟೆ ವಶಕ್ಕೆ ಪಡೆಯಲು.ಸಂಗೊಳ್ಳಿ ರಾಯಣ್ಣನ ತಂಡದ ದೇಗಾವಿ ಭೀಮಾನಾಯಕ ಗಜವೀರ ಮತ್ತು ವಡ್ಡರ ಯಲ್ಲಣ್ಣ ಮುಂತಾದ ನಾಯಕರ ನೇತೃತ್ವದಲ್ಲಿ 8 ಫೆಬ್ರವರಿ 1830 ರಂದು ಕಿತ್ತೂರು ಮುತ್ತಿಗೆ ಹಾಕಿದರು.ಕೋಟೆಯ ಸಂರಕ್ಷಣೆಗೆ ಆಂಗ್ಲ ಸರ್ಕಾರದ ಬಲವಾದ ಪಡೆಯ ಲೆಫ್ಟಿನೆಂಟ ಕ್ಯೂರಿ ನೇತೃತ್ವದ 18ನೇ ರೆಜಿಮೆಂಟ ಕಾವಲಿತ್ತು. ಎರಡು ಬಣಗಳ ನಡುವೆ ನೇರ ಯುದ್ಧ ನಡೆಯುತ್ತಿರುವುದು.
Siege of Kitturu Fort
To capture Kitturu fort, Degavi Bhimanayaka Gajaveera and Waddar Yallanna of Sangolli Rayanna's team besieged Kitturu on February 8, 1830. The 18th regiment, led by Lieutenant Currie, guarded the fort. A direct battle is going on between the two factions.
ಮಾಯವ್ವಳ ಬಲಿದಾನ
ಸಂಗೊಳ್ಳಿ ರಾಯಣ್ಣನ ತಂಗಿ ಮಾಯವ್ವಳ ಭೇಟಿಗೆ ಮುಳಕೂರಿಗೆ ಬಂದನು. ಮಾಯವ್ವ ಖುಷಿಯಿಂದ ಬರಮಾಡಿಕೊಂಡಳು. ಅವಳ ಆರು ತಿಂಗಳ ಮಗುವನ್ನು ಮುದ್ದಾಡಿದನು. ರಾತ್ರಿ ಮಲಗಿದ ಮೇಲೆ ಆಂಗ್ಲ ಸೈನಿಕರು ಮನೆಗೆ ಮುತ್ತಿಗೆ ಹಾಕಿದರು. ಮನೆಯ ಮೇಲೆ ಗುಂಡಿನ ದಾಳಿ ನಡೆಸಿರುವುದು.
Mayavva's death
Sangolli Rayanna had paid a visit to his sister Mayavva at Mulakuru. English soldiers besieged the home and opened fire on it while they were asleep.
ಬಂಧನಕ್ಕಾಗಿ ಸಂಚು
ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ನಿಸ್ಕೃತ್ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ಸಂಗಡಿಗರ ಬಂಧನಕ್ಕೆ ಸಂಚುರೂಪಿಸತೊಡಗಿದರು ಕಾರ್ಯತಂತ್ರದಂತೆ ಅಮಲ್ದಾರ ಕೃಷ್ಣರಾವ್, ಖೋದಾನಪೂರ ಲಿಂಗನಗೌಡ, ಮತ್ತು ನೇಗಿನಹಾಳ ವೆಂಕನಗೌಡ ಕಿತ್ತೂರು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಕಲ್ಪದೊಂದಿಗೆ ಸಂಗೊಳ್ಳಿ ರಾಯಣ್ಣ ತಂಡ ಸೇರುವುದು. ಮರೆಮೋಸ ಮಾಡಿ ಬಂಧಿಸಲು ಸಂಚು ರೂಪಿಸುತ್ತಿರುವುದು.
Conspiracy to arrest Rayanna and team
Under the direction of District Collector Nisbhat in the Dharwad District Collector's office, they planned to arrest Sangolli Rayanna and his associates. As a strategy, Amaldar Krishnarav, Khodanpur Linganagowda & Neginhal Venkanagowda joined Sangolli Rayanna's team with the pretension to fight for the independence of Kittur.
This tour will continue in the following post- Sangolli Rayanna Rock Garden part-4.
No comments:
Post a Comment