Feb 3, 2018

ತೆಲಂಗಾಣ ಹಳ್ಳಿಗಾಡಿನ ಮುಂಜಾನೆ ನೋಟಗಳು

ನಸುಕಿನ ನಶೆ-
೨೪-೧೨-೨೦೧೭ 
ಹೈದರಾಬಾದಿನಿಂದ ನಲಗೊಂಡ ಕಡೆಗೆ ನಮ್ಮ ಪ್ರವಾಸ ಹೊರಟಿತು. ನಾವು ಮೊದಲೇ ನಿರ್ಧರಿಸಿದಂತೆ ಮೊದಲು ನಲಗೊಂಡಕ್ಕೆ ಹೋಗಿ ಅಲ್ಲಿನ ಕೋಟೆ, ಬಾಲಚಂದ್ರುನಿ ಗುಡ್ಡದಲ್ಲಿರುವ ಶಿವನ ದೇವಾಲಯ ಹಾಗೂ ದೊಡ್ಡ ಹುಣಸೆ ಮರ  ಹಾಗೂ ಪಾನಗಲ್ನಲ್ಲಿರುವ ಛಾಯಾ ಸೋಮೇಶ್ವರ ಗುಡಿ ನೋಡಿಕೊಂಡು ನಾಗಾರ್ಜುನ ಸಾಗರದತ್ತ ಸಾಗುವದು ಎಂದಿತ್ತು. ಹೈದರಾಬಾದಿನ ಔಟರ್ ರಿಂಗ್ರೋಡ್ ಹತ್ತಿದ ನಾವು ಒಂದು ಎಕ್ಸಿಟ್ ಮೊದಲೇ ತೆಗೆದುಕೊಂಡು ನಾಗಾರ್ಜುನ ಸಾಗರದ ರಸ್ತೆ ಹಿಡಿದು ಬಿಟ್ಟೆವು. ಆಮೇಲೆ ನೆನಪಾಗಿದ್ದು ನಾವು ನಲಗೊಂಡದತ್ತ ಹೋಗಲು ನಂತರದ ಎಕ್ಸಿಟ್ ತೆಗೆದುಕೊಳ್ಳಬೇಕಿತ್ತು ಎಂದು. ದಾರಿ ತಪ್ಪಿದ ಮೇಲೆ ಒಳಗಡೆಯಿಂದ ನಲಗೊಂಡಕ್ಕೆ ದಾರಿ ಹುಡುಕಿಕೊಂಡು ಹೊರಡುವದೆಂದು ಅಂದುಕೊಂಡೆವು. "ಕಭಿ-ಕಭಿ ಗಲತ್ ಟ್ರೈನ್ ಭೀ ಸಹಿ ಜಗಹ ಪಹುಂಚಾತಿ ಹೈ" ಅನ್ನೋ ತರಹ ದಾರಿ ತಪ್ಪಿದ್ದು ಒಳ್ಳೆಯದೇ ಆಯಿತು. ಮುಖ್ಯ ರಸ್ತೆಯಲ್ಲಿ ಹೋಗಿ ಬರಿ ವಾಹನಗಳನ್ನು ನೋಡುವ ನಮಗೆ ಪ್ರಕೃತಿ ಸೌಂದರ್ಯ ಸವಿಯಲು ಸಿಕ್ಕಿದ್ದೇ ಆ ಒಳರಸ್ತೆಯಲ್ಲಿ. ಆ ಮುಂಜಾನೆಯ ನಸುಕಿನಲ್ಲಿ ಸೆರೆಸಿಕ್ಕ ಕೆಲವು ಪ್ರಕೃತಿ ಸೌಂದರ್ಯಗಳನ್ನು ಇಲ್ಲಿ ಹಾಕಿದ್ದೇನೆ.

ಹೈದರಾಬಾದಿನಂತಹ ದೊಡ್ಡ ನಗರದಲ್ಲಿರುವ ನಮಗೆ ಬೆಳಿಗ್ಗೆ ಯಾವಾಗ ಆಯಿತು- ದಿನ ಯಾವಾಗ ಮುಗಿತು ಎಂದು ತಿಳಿಯುವದೇ ಕಠಿಣ, ಬೆಳಿಗಿನ ಸೂರ್ಯೋದಯ ನೋಡೋಣವೆಂದರೆ ಎಲ್ಲೆಲ್ಲೂ ತಲೆ ಎತ್ತಿ ನಿಂತ ಕಟ್ಟಡಗಳು ಅಡ್ಡಿ ಮಾಡುತ್ತವೆ, ಬೆಳಿಗಿನ ಕೋಳಿಯ ಕೂಗು ಹಾಗೂ ಸಂಜೆಯ ಪಕ್ಷಿಗಳ ಕಲರವ ಕೇಳೋಣವೆಂದರೆ ವಾಹನಗಳ ಕಿರಿಚಾಟ ಮತ್ತು ಬೀದಿ ನಾಯಿಗಳ ಜಗಳಾಟವೇ ಮುಗಿಯುವದಿಲ್ಲ. ನಾನು ಕೆಲವೇ ವರ್ಷ ಹಳ್ಳಿಯಲ್ಲಿದ್ದರೂ ಹಳ್ಳಿಯ ಜೊತೆ ಬಿಡಿಸಲಾರದ ನಂಟೊಂದನ್ನು ಕಟ್ಟಿಕೊಂಡಿದ್ದೇನೆ.
  
ನಮ್ಮ ಬದುಕಿನಲ್ಲಿ ನನಗನಿಸಿದಂತೆ ಎರಡು ಹಂತಗಳು ತುಂಬಾ ಪ್ರಾಮುಖ್ಯತೆ ವಹಿಸಿದ್ದನ್ನು ನಾನು ಗಮನಿಸಿದ್ದೀನಿ, ಒಂದು ಮುಂಜಾನೆ ಮತ್ತೊಂದು ಮುಸ್ಸಂಜೆ.. ಮುಂಜಾನೆ ಹೊಸ ದಿನ, ಹೊಸ ಉತ್ಸಾಹ, ಹೊಸ ಬಯಕೆ, ಹೊಸ ಕನಸು ಎಲ್ಲ ಹೊತ್ತು ತರುತ್ತದೆ. ಮುಸ್ಸಂಜೆ, ದಿನದ ಸಿಹಿ-ಕಹಿ ಘಟನೆಗಳಿಗೆ ವಿದಾಯ ಹಾಡುತ್ತದೆ. ಎರಡರದು ಸೌಂದರ್ಯ ಮಾತ್ರ ವರ್ಣಿಸಲಸಾಧ್ಯ.
ನಡುದಿನದಲಿ ಧಗ-ಧಗ ಉರಿಯುವ ಸೂರ್ಯ ಈ ಎರಡು ಹೊತ್ತಲ್ಲಿ ಶಾಂತನಾಗಿ ಮಂದ ಬೆಳಕು ಚಲ್ಲುತ್ತ ಆ ದಿನದ ಆರಂಭ ಹಾಗೂ ಅಂತ್ಯಕ್ಕೆಶುಭಕೋರುತ್ತಾನೆ. ಬೆಳಿಗಿನ ಹೊತ್ತು ಇಂಪಾದ ಕಲರವದೊಂದಿಗೆ ಆಹಾರ ಹುಡುಕಲು ಹೊರಟ ಪಕ್ಷಿಗಳ ಗುಂಪು ಸಂಜೆ ಅದೇ ಕಲರವದೊಂದಿಗೆ ಗೂಡಿಗೆ ಮರಳುತ್ತಿರುತ್ತವೆ. ಸೂರ್ಯನ ಏರಿಳಿತಗಳಿಗೆ ಅನುಗುಣವಾಗಿ ತಮ್ಮ ದಿಕ್ಕನ್ನು ಬದಲಾಯಿಸುವ ಆ ಸೂರ್ಯಕಾಂತಿ ಹೂ, ಬೆಳಿಗಿನ ಆ ಇಬ್ಬನಿ ಹನಿ-ಸಂಜೆಯ ಆ ತಂಪಾದ ಗಾಳಿ ಎಂತಹ ಮನುಷ್ಯನ ಹೃದಯವನ್ನು ಕೂಡ ತಣಿಸುತ್ತದೆ.
    ಎಷ್ಟೋ ಸಲ ನಾನು ಕುಡುಕರು ಹೇಳುವದನ್ನು ಕೇಳಿದೀನಿ, ಕುಡಿದಾಗ ಪ್ರಪಂಚ ತುಂಬಾ ಸುಂದರವಾಗಿ ಕಾಣಿಸ್ತದೆ ಅಂತ.... !! ದುಡ್ಡು ಕೊಟ್ಟು ಕೊಂಡ ಆ ನಶೆ ಮತ್ತೆ ಇಳಿಯೋದು ಬಲು ಸುಲಭ, ದುಡ್ಡು ಕೊಡದೆ ಪ್ರಕೃತಿ ಪ್ರತಿ ಬೆಳಿಗ್ಗೆ ನಮಗೆ ತನ್ನ ಸೌಂದರ್ಯದ ನಶೆ ಏರಿಸಿ ಪೂರ್ತಿ ದಿನವನ್ನೇ ಸುಂದರವನ್ನಾಗಿ ಮಾಡುತ್ತದೆ. ಈ ನಶೆ ಎಲ್ಲರಿಗೂ ಇಷ್ಟ ಮತ್ತು ಅವಶ್ಯಕ .... :)


ಸೂರ್ಯೋದಯದ ಕಾಲದ ಮಂಜು ಮುಸುಕಿದ ಈ ಚಿತ್ರ ನೋಡಿದರೆ ಮನಸಿಗೆ ಎಷ್ಟೋ ಖುಷಿ ಆಗುತ್ತದೆ. ನಾನು ಎಸ್.ಎಲ್.ಭೈರಪ್ಪ, ಕುವೆಂಪು, ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕಗಳನ್ನು ತುಂಬಾ ಓದುತ್ತೇನೆ. ಅವರು ಬರೆದ ಪ್ರಕೃತಿ ವರ್ಣನೆ ಎಷ್ಟೊಂದು ಅಘಾದ ಸಂತೋಷವನ್ನುಂಟು ಮಾಡುತ್ತದೆ ಎಂದರೆ ಹೇಳಲಸಾಧ್ಯ!


ಮರದ ಮರೆಯಿಂದ ಇಣುಕುತ್ತಿರುವ ಈ ಸೂರ್ಯ ದಿನದ ಶುಭೋದಯದ ಕಿರಣಗಳ ಸುರಿಮಳೆ ಸುರಿಸಿದ್ದಾನೆ.


ಹಸಿರಿನಿಂದ ಕೂಡಿದ ಗದ್ದೆಯಲ್ಲಿರುವ ಈ ಗುಡಿಸಲು, ರಾತ್ರಿ ಕಳೆದ ಕ್ಷಣಗಳ ಕುರಿತು, ಬೆಳಗಿನ ಪ್ರಕೃತಿಗೆ ಹೇಳುವ ತಯಾರಿಯಲ್ಲಿದೆ. 


ಬೆಳಿಗಿನ ಬೆಳಕಿಗೆ ಇನ್ನೂ ಶುಭ್ರವರ್ಣ ತಳೆದಿರುವ ಹತ್ತಿ ಗಿಡಗಳ ಮೇಲೆ ಮೊಸರು ಚೆಲ್ಲಿದಂತೆ ಕಾಣುತ್ತಿದೆ.


ಬೆಳಿಗಿನ ನೀಲಿ ಆಕಾಶಕ್ಕೆ ಉದಯದ ಶುಭ ಕೋರಿ, ಮುತ್ತಿಡುತ್ತಿರುವ ಶಿಲೆ.

ಮನುಷ್ಯ ಎಷ್ಟೇ ಆಧುನಿಕತೆ ಬೆಳಿಸಿಕೊಂಡು ಎಷ್ಟೇ ಸುಂದರವಾದ ವಸ್ತುಗಳನ್ನು ಮಾಡಿದರೂ - ಈ ಪ್ರಕೃತಿ ಸೌಂದರ್ಯಕ್ಕೆ ಸಾಟಿಯಾಗಲಾರದು!
.........

7 comments:

Anonymous said...

Achchu kattagide, nisrghada Nashe yeridaaga adu konevaregu iliyolla.
Naanu nannane samshaya padtha idde?
Yaavaglu ADE preshne, am I over dozed with nature, idu oodidamele nananthavru iddare.. innu iddare asharya? Naanu White house ninda 13 miles doordallidru ondu chikka community (halli anubhudu) idda kaarana, yettarada gida, 2 small creeks.
Innu nashe ildilla haagu ee lekhane oodidamele nan anthavru nisarga permigalige innu kone bandilla. Mother is beautiful.

Anonymous said...

Nanna uddhesha Hindu Rastradalli nisarga premigalu illa annodalla, nanna maatina artha adalla, nissandeha vaagi bhoomi taayi aardhakaru ellelo iddare, avru horagade helavo illa horgade suthlikke avakasha ilvo. Maatra Naanu eega, yaava sankoch haagu sandeha ilde helod yenadre pregne kadime, illi adu jaasti. Udaharenege nammamaneyalli kasa bitthu andre yaaru haakiddare annodana kelode illa,swacha goliso haage, ee-pragne naavu bhodhica andre our home is not just these four walls, we have to think beyond, think mother earth is our home doesn't matter who trashes it. we should bring awareness to ourselves and to others. ee-kalakali bharathdalli kadime, illi prati spring nalli yetire community Namma ee creek nalli ilidu malege kochi bandha maalinya plastic, cans yella clean maadthare haage adrali eseyodu kadime.

pushpa said...

Yes I agree with your thoughts... Parisara preetisoru idare ulisoru kadime!

Betta said...

Hi,
great articles. found this site looking for ashoka's edicts.
Can you please tell me what is the name of the rock formation and its location ?
Please keep the adventure going, wish that you find more interesting places.

thanks
betnag

pushpa said...

Thank you for the interest.
In Wikimapia the rock formation is marked as 'Devil's Tower'
It's coordinates are 16°58'51"N 78°52'47"E

WhatsappShiva said...

ನಿಜವಾಗಿಯೂ, ನಿಮ್ಮ ಪ್ರಯಾಣದ ನಶೆ ಹೀಗೆ ಇರಲಿ, ನಮಗೆ ಒದಿನ ನಶೆ ಇಳಿಯದಂತೆ, ನೋಡಿಕೋಳ್ಳಿ.

pushpa said...

Thank you Shivanand :)