ಇಟಗಿ ಗ್ರಾಮದ ಶ್ರೀ ಎಸ್ ಎಸ್ ಹಿರೇಮಠ್ ಅವರ ವರ್ಣಚಿತ್ರಗಳ ಸರಣಿಯಿಂದ ಹೇಳಲಾದ ಕಲ್ಯಾಣದಿಂದ ಉಳವಿಗೆ ಶಿವಶರಣರು ಪ್ರಯಾಣಿಸಿದ ಕಥೆ ಇದು. ವಚನ ಸಾಹಿತ್ಯವನ್ನು ವಿನಾಶದಿಂದ ರಕ್ಷಿಸಲು ಶರಣರ ಹೋರಾಟ ಮತ್ತು ತ್ಯಾಗವನ್ನು ತಿಳಿಸುವ ಈ ಸರಣಿಯನ್ನು ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಪ್ರದರ್ಶಿಸಲಾಗಿದೆ.
ಅಂತರ ಜಾತಿಯ ವಿವಾಹಕ್ಕೆ ಕಾರಣರಾದ ಹರಳಯ್ಯ ಮಧುವರಸರ ಎಳಹೋಟ ಜಾತಿವಾದಿಗಳಿಂದ ನಡೆಯುತ್ತದೆ. ಬಿಜ್ಜಳನ ಕೊಲೆ ನಡೆದು ಈ ಅಪವಾದವು ಶರಣರ ಮೇಲೆ ಬಂದು ಅವರ ಹತ್ಯೆ ನಡೆಯುತ್ತದೆ. ಆಕ್ರೋಶಗೊಂಡ ಶರಣರನ್ನು ಚನ್ನಬಸವಣ್ಣನು ಸಮಾಧಾನ ಮಾಡುತ್ತಾನೆ.
ಮಹಾಮನೆಯಲ್ಲಿ ಚನ್ನಬಸವಣ್ಣ, ಮಡಿವಾಳ ಮಾಚಯ್ಯ, ಸಿಧ್ಧರಾಮಯ್ಯಾ, ರೇಚಯ್ಯ, ನಾಗಲಾಂಬಿಕೆ , ಗಂಗಾಂಬಿಕೆ, ನೀಲಾಂಬಿಕೆ ಇತ್ಯಾದಿ ಪ್ರಮುಖ ಶರಣರು ಮಂತ್ರಾಲೋಚನೆ ಮಾಡುತ್ತಿದ್ದಾರೆ. ವಚನಗಳ ರಕ್ಷಣೆಗಾಗಿ ಕಲ್ಯಾಣದಿಂದ ಹೊರಡುವ ನಿರ್ಧಾರ ಮಾಡುತ್ತಾರೆ.
ಮಹಾಮನೆಯ ಮುಂಭಾಗ ರಾತ್ರಿವೇಳೆ ವಚನಗಳ ಕಟ್ಟುಗಳನ್ನು ಬಟ್ಟೆಗಳಲ್ಲಿ ಕಟ್ಟಿ ಜೋಳಿಗೆಗಳನ್ನು ಮಾಡುತ್ತಾರೆ ಮತ್ತು ಖಾಲಿ ತಾಳೆಗರಿಗಳ ಕಟ್ಟುಗಳನ್ನು, ಸರಂಜಾಮುಗಳನ್ನು ಚಕ್ಕಡಿಗಳಲ್ಲಿ ಹಾಕುತ್ತಾರೆ.
ವಚನಗಳ ಕಟ್ಟುಗಳನ್ನು, ಸಾಮಗ್ರಿಗಳನ್ನು ಹೇರಿದ ಚಕ್ಕಡಿಗಳೊಂದಿಗೆ ಶರಣರು ಕಲ್ಯಾಣದ ತ್ರಿಪುರಾಂತಕ ಕೆರೆಯ ದಂಡೆಯ ಮೇಲಿಂದ ಹಾಯ್ದು ಸೂರ್ಯೋದಯದ ವೇಳೆ ಹೋಗುತ್ತಾರೆ.
ವಚನ ಸಾಹಿತ್ಯ ಹಾಳುಮಾಡಲು ದರೈಯಲ್ಲಿ ಒಂದು ಚಕ್ಕಡಿಗೆ ದುಷ್ಕರ್ಮಿಗಳಿಂದ ಬೆಂಕಿ ಹಚ್ಚುವ ಕ್ರಿಯೆ ನಡೆಯುತ್ತದೆ. ಆದರೆ ಬೆಂಕಿ ಹಚ್ಚಲ್ಪಟ್ಟ ಚಕ್ಕಡಿಯಲ್ಲಿ ಖಾಲಿ ತಳೆಯಗಾರಿಗಳಿದ್ದವು. ವಚನಗಳ ಕಟ್ಟುಗಳು ಶರಣರ ಜೋಳಿಗೆಗಳಲ್ಲಿ ಭದ್ರವಾಗಿದ್ದವು. ಸಿಧ್ಧರಾಮಯ್ಯರು ಯೋಗದಂಡವನ್ನು ಎತ್ತಿ ಹಿಡಿದಿದ್ದರು. ಶರಣರು ದುಷ್ಕರ್ಮಿಗಳನ್ನು ಪ್ರತಿಭಟಿಸಿದರು. ದುಷ್ಟರು ಪಲಾಯನಗೈದರು.
ಸೊನ್ನಲಿಗೆಯಲ್ಲಿ ವಿಶಾಲ ಸರೋವರದ ಮಧ್ಯದ ಒಂದು ನಡುಗಟ್ಟೆಯ ಮರದಲ್ಲಿ ಸಿಧ್ಧರಾಮಯ್ಯರ ಮುಖಂಡತ್ವದಲ್ಲಿ ನಡೆದ ಸಭೆ. ಅಲ್ಲಿ ಶರಣರಿಗಾಗಿ ಊಟ ವಸತಿಗಳ ವ್ಯವಸ್ಥೆ ನಡೆಯುವುದು ಮತ್ತು ಚನ್ನಬಸವಣ್ಣವರಿಂದ ಸಿದ್ಧರಾಮಯ್ಯನವರಿಗೆ ಶೂನ್ಯ ಪೀಠಾರೋಹಣ ಹಸ್ತಾಂತರ ಕಾರ್ಯಕ್ರಮ ನಡೆಯುತ್ತದೆ.
ಸೊನ್ನಲಿಗೆಯಿಂದ ಹಲಸಂಗಿ, ವಿಜಾಪುರ, ಜಮಖಂಡಿ, ಬಬಲೇಶ್ವರ, ಗುಂಡಾಳ, ಮಂಟೂರು, ಮುಧೋಳ, ಯಾದವಾಡ, ಮತ್ತು ಸತ್ತಿಗೇರಿ ಮೂಲಕ ಗೋಡಚಿಗೆ ಶರಣಾಗಮನ. ಅಲ್ಲಿ ಸೈನಿಕರ ಜೊತೆ ಮಾಚಿದೇವನ ಮುಖಂಡತ್ವದಲ್ಲಿ ಯುಧ್ಧ ನಡೆದು ಮಾಚಿದೇವನಿಗೆ ಗಾಯವಾಯಿತು ಮತ್ತು ಸೈನಿಕರು ಪಲಾಯನಗೈದರು.
ಗಾಯಾಳು ಮಾಚಿದೇವನನ್ನು ಕೆಲವು ಶರಣರು ಕರಿಮನೆಗೆ ಕರೆದುಕೊಂಡುಹೋಗುತ್ತಾರೆ. ಅಲ್ಲಿ ಗಾಯ ಉಲ್ಡಣಗೊಂಡು ಮಾಚಿದೇವನು ಲಿಂಗಕ್ಯನಾದನು. ಅವನ ಸಮಾಧಿಯನ್ನು ಖರಿಮನೆಯಲ್ಲಿ ನಿರ್ಮಾಣ ಮಾಡಲಾಯಿತು.
ಉಳಿದ ಶರಣರು ಶೋಗಳ ಮೂಲಕ ಮುರಗೋದಕ್ಕೆ ಹೋದರು. ಗೋವಾ ಕದಂಬರ ಯುವರಾಜ ವಿಜಯಾದಿತ್ಯನ ಆಗಮನವಾಗಿ ಸೇನೆಯಿಂದ ಶರಣರ ರಕ್ಷಣೆ ನಡೆಯಿತು. ಮುರಗೋಡದಲ್ಲಿ ಉಳವಿಯ ಮಹಾದ್ವಾರದ ನಿರ್ಮಾಣ ವಿಜಯಾದಿತ್ಯನಿಂದ ನಡೆದು ಆ ಮಾರ್ಗ ಮೂಲಕ ಶರಣರು ಉಳವಿಯತ್ತ ಪ್ರಯಾಣ ಮಾಡಿದರು.
ಸಂಪಗಾವಿಯ ಹತ್ತಿರ ತ್ರಿಗುಡಿ (ತಿಗಡಿ)ಯಲ್ಲಿ ಶರಣರು ವಸತಿ ಮಾಡಿ ಪ್ರಸಾದ ಸೇವಿಸಿದರು. ಮರಡಿ ನಾಗಲಾಪುರದಲ್ಲಿ ನಾಗಮ್ಮದೇವಿ ಅಂಗ ಪೂಜೆ ಮಾಡಿಕೊಂಡು ಸ್ಥಳದಲ್ಲಿ ಭಕ್ತರು ಗುಡಿಯನ್ನು ನಿರ್ಮಿಸಿದರು. ಕಲ್ಲೂರಿನಲ್ಲಿ ಕಲ್ಯಾಣಮ್ಮನ ಮಾಡಲಾಯಿತು. ನೇಗಿನಹಾಳ ಹಳ್ಳದ ದಂಡೆಯಮೇಲೆ ಸಪ್ಪಯ್ಯ ಶರಣರ ಸಮಾಧಿ ಮಾಡಲಾಯಿತು.
ಕಡಾರವಳ್ಳಿಯಲ್ಲಿ ಕಸಪಯ್ಯನ ಸೈನಿಕರು ಹಾಗು ಶರಣರ ಬೆಂಬಲಕ್ಕೆ ನಿಂತ ಗೋವಾ ಕದಂಬರ ಸೈನಿಕರ ನಡುವೆಯೂ ಅಂತಿಮ ಕದನವಾಗಿ ಸೈನಿಕರು ಪಲಾಯನಗೈಯುತ್ತಾರೆ. ಹುಣಸಿಕಟ್ಟಿ ರುದ್ರಮುನಿದೇವರ ದರ್ಶನ ನಡೆದು ಚನ್ನಬಸವಣ್ಣನವರು ಮುಂದಿನ ಪಯಣದ ಬಗ್ಗೆ ಯೋಚಿಸುತ್ತಾರೆ. ಶರಣರು ಎಂ. ಕೆ. ಹುಬ್ಬಳ್ಳಿ ಹತ್ತಿರದ ಮಲಪ್ರಭಾ ನದಿ ದಂಡೆಯ ಮೇಲೆ ವಾಸವಾಗಿದ್ದಾಗ ಗಂಗಾಂಬಿಕೆ ಲಿಂಗೈಕ್ಯವಾಗುತ್ತಾಳೆ. ಅಲ್ಲಿ ಭಕ್ತರು ದೇವಾಲಯ ನಿರ್ಮಿಸುತ್ತಾರೆ.
ಕಿತ್ತೂರು ಮೂಲಕ ಹುಬ್ಬಳ್ಳಿಗೆ ಚನ್ನಬಸವಣ್ಣ ಮುಂತಾದ ಶರಣರು ಪಯಣಿಸಿ ಶ್ರೀ ಸಿದ್ದೇಶ್ವರ ಅವಧೂತರ ದರ್ಶನ ಪಡೆದು ವಾತ್ಸವ್ಯ ದೂಡಿದರು. ಮೂರುಸಾವಿರ ಶರನರಿದ್ದಿದ್ದರಿಂದ ಅದಕ್ಕೆ ಮೂರುಸಾವಿರ ಮಠವೆಂದು ಹೆಸರು ರೂಢಿಯಲ್ಲಿ ಬಂದಿತು.
ಕಿತ್ತೂರಿನಿಂದ ಹಳಿಯಾಳದ ಮೂಲಕ ಕಕ್ಕೇರಿಗೆ ಶರಣರು ಆಗಮಿಸಿದರು. ಅಲ್ಲಿ ಕಕ್ಕಯ್ಯ ಮತ್ತು ಬಿಷ್ಟಾದೇವಿಯವರ ಲಿಂಗೈಕ್ಯ ಹೊಂದಿದರು. ಅವರ ಸಮಾಧಿ ನಿರ್ಮಾಣ ಮಾಡಲಾಲಯಿತು.
ಹುಬ್ಬಳ್ಳಿಯ ಕಡೆಯಿಂದ ಬಂದ ಶರಣರು ಮತ್ತು ಕಕ್ಕೇರಿ ಹಾಗು ಲಿಂಗಮನಮಠದಿಂದ ಬಂದ ಶರಣರು ಸಾಂಬ್ರಾಣಿ ಗ್ರಾಮದಲ್ಲಿ ಕೂಡಿಕೊಳ್ಳುತ್ತಾರೆ. ಜೂಗುಳಬೆಟ್ಟದ ಮೂಲಕ ಉಳವಿಯತ್ತ ಪಯಣ ಬೆಳೆಸಿದರು.
ಉಳವಿಯಲ್ಲಿ ಗೋವಾ ಯುವರಾಜ ಪೆರ್ಮಾಡಿದೇವ ಮತ್ತು ರಾಣಿ ಮೇಲಾಳದೇವಿ ಜೊತೆಗೆ ಕಲ್ಯಾಣ ಕ್ರಾಂತಿಯ ಕುರಿತು ಶರಣರು ಚರ್ಚಿಸುತ್ತಾರೆ. ಸಂತರ ಅವರ ಆಶ್ರಯದಲ್ಲಿ ಶರಣರ ವಾತ್ಸವ್ಯ ನಡೆಯುತ್ತದೆ. ವಚನಗಳ ಪ್ರತಿ ತಯಾರಿಕೆ, ನಿತ್ಯ ಗೋಷ್ಠಿಗಳು ನಡೆಯುತ್ತವೆ. ಪ್ರಚಾರಕ್ಕೆ ಹಲವು ಗುಂಪುಗಳಲ್ಲಿ ಶರಣರು ನಿರ್ಮಿಸಿದರು.
ಅಕ್ಕ ನಾಗಲಾಂಬಿಕೆ ಲಿಂಗೈಕ್ಯರಾದ ಮೇಲೆ ಅವಿರಳ ಜ್ಞಾನಿ ಚನ್ನಬಸವಣ್ಣನವರು ಜೀವಂತ ಸಮಾಧಿ ಹೊಂದುತ್ತಾರೆ. ಅಲ್ಲಿಯೇ ಈಗಿರುವ ದೇವಾಲಯ ಕಟ್ಟಲ್ಪಟ್ಟಿದೆ. ಇದು ಭಕ್ತಾದಿಗಳ ಪವಿತ್ರ ತಾಣವಾಗಿದೆ.
ಕಲ್ಯಾಣದಲ್ಲಿ ಕ್ರಾಂತಿಯಾದಾಗ ಮಂತ್ರಿ ಪದವಿ ತ್ಯಾಗ ಮಾಡಿ ಜಗಜ್ಯೋತಿ ಶ್ರೀ ಬಸವೇಶ್ವರರು ಕೂಡಲ ಸಂಗಮಕ್ಕೆ ಹೊರಟು ಹೋದರು. ಈ ಅನಿರೀಕ್ಷಿತ ಆಘಾತದಿಂದ ದಿನ ಬೆಳಗಾಗುವಷ್ಟರಲ್ಲಿ, ಶರಣರು ಧರ್ಮ ದ್ರೋಹಿಗಳ ಕುತಂತ್ರದಿಂದ, ರಾಜದ್ರೋಹಿಗಳಾಗಿ ಪರಿಗಣಿಸಲ್ಪಟ್ಟರು. ಸಮಾಜ ಪರಿವರ್ತನೆಗೆ ಕಾರಣವಾದ ವಚನ ಸಾಹಿತ್ಯವನ್ನು ಉಳಿಸಲು, ಶರಣರೆಲ್ಲ ವಚನಗಳ ಕಟ್ಟುಗಳುಳ್ಳ ಗಂಟು ಮೂಟೆಗಳೊಡನೆ ಕಲ್ಯಾಣ ತೊರೆದು, ನಾಲ್ಕು ದಿಕ್ಕಿಗೆ ಗುಂಪುಗಳಲ್ಲಿ ಬೇರೆ ಬೇರೆ ಸ್ಥಳಗಳಿಗೆ ವಲಸೆಹೋರಟರೆಂದು ಮಾತ್ರ ಒಂದು ಸಾಮಾನ್ಯ ವಿವರ ತಿಳಿದ ನಮಗೆ, ಉಳವಿಯು ಶರಣರ ಸಾಹಿತ್ಯ ಉಳವಿಗೆ ಕಾರಣ ಎಂದು ಈ ವರ್ಣಚಿತ್ರಗಳು ತುಂಬಾ ಚೆನ್ನಾಗಿ ಮತ್ತು ಸವಿಸ್ತಾರವಾಗಿ ತಿಳಿಸಿಕೊಡುತ್ತವೆ. ಇಂತಹ ಅದ್ಭುತ ವರ್ಣಚಿತ್ರಗಳನ್ನು ಬಿಡಿಸಿದ ಶ್ರೀ ಎಸ ಎಸ ಹಿರೇಮಠವರಿಗೆ ಹೃತ್ಪೂರ್ವಕ ಧನ್ಯವಾದಗಳು.
ಮಾಘ ಮಾಸದಲ್ಲಿ ರಥಸಪ್ತಮಿಯಿಂದ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಪ್ರಾರಂಭವಾಗಿ ಹತ್ತು ದಿನಗಳವರೆಗೆ ನಡೆಯುತ್ತವೆ. ಭಾರತ ಹುಣ್ಣಿಮೆಯ ಮಾಘ ನಕ್ಷತ್ರದ ದಿವಸ ಶ್ರೀ ಚನ್ನಬಸವೇಶ್ವರರ ಮಹಾ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗುತ್ತದೆ.
ಉಳವಿ ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ನಡುವೆ ಇದೆ. ಉಳವಿ ಧಾರವಾಡದಿಂದ ಸುಮಾರು ೧೦೧ ಮತ್ತು ಕಾರವಾರದಿಂದ ೭೪ ಕಿಲೋಮೀಟರ್ ದೂರದಲ್ಲಿದೆ. ಉಳವಿಯನ್ನು ತಲುಪಲು ಇರುವ ಏಕೈಕ ಮಾರ್ಗವೆಂದರೆ ರಸ್ತೆ ಮಾರ್ಗ.

ಕಲ್ಯಾಣದಿಂದ ಉಳವಿಗೆ ಸಾಗಿಬಂದ ನಕಾಶೆ

ಓಂ ನಮಃ ಶಿವಾಯ
.........
4 comments:
Would you please send the English version of your report?
surely Soul but I'll need some time. perhaps you could try Google Translate..
Sir I had written to you for the copyrights of some of your photos to publish in encyclopedia.but you did respond.
Dear Raghavendra, sorry if I missed your message. could you please email me again, I'll surely respond.
Post a Comment