Jan 26, 2019

ಗುರುದ್ವಾರ ಶ್ರೀ ನಾನಕ್ ಜೀರಾ ಸಾಹೇಬ, ಬೀದರ್

ಸೆಪ್ಟೆಂಬರ್ ೨ ರಿಂದ ೪, ೨೦೧೮ 

ಬೀದರ ಬಂದ ಪ್ರವಾಸಿಗರು ನೋಡಲೇ ಬೇಕಾದ ಮತ್ತೊಂದು ಸ್ಥಳವೆಂದರೆ ಗುರುದ್ವಾರ. ೧೯೪೮ ರಲ್ಲಿ ಸಿಖ್ ಗುರು 'ಗುರು ನಾನಕ್ 'ರವರ ಹೆಸರಿನಲ್ಲಿ ಅಮೃತಶಿಲೆಯಲ್ಲಿ ಕಟ್ಟಲಾದ ಈ ಗುರುದ್ವಾರವು ಕಣ್ಣಿಗೆ ಹಾಗೂ ಮನಸಿಗೆ ತಂಪು ನೀಡುತ್ತದೆ. ಅಷ್ಟೇ ಸ್ವಚ್ಛವಾದ ವಾತಾವರಣ, ಮನೋಹರವಾದ ಸಂಗೀತ ಮನಸ್ಸನ್ನು ತಲ್ಲೀನಗೊಳಿಸುತ್ತದೆ. ಮುಖ್ಯರಸ್ತೆಯಿಂದ ಗುರುದ್ವಾರಕ್ಕೆ ಹೋಗುವ ದಾರಿಗೆ ಮುನ್ನ ಒಂದು ದೊಡ್ಡ ಕಮಾನಿದೆ. ಗುರುದ್ವಾರದ ಪ್ರವೇಶಕ್ಕೂ ಮುನ್ನ  ಪಂಜಾಬಿ ಹೋಟೆಲ್ಗಳು , ಅಂಗಡಿಗಳು, ದವಾಖಾನೆ ಎಲ್ಲ ಇವೆ. ನಂತರ ಗುರುದ್ವಾರದ ದೊಡ್ಡ ಪ್ರವೇಶ ದ್ವಾರ. ಒಳಗೆ ಹೋಗುತ್ತಿದ್ದಂತೆ ಒಂದು ಕಡೆ ಪಾರ್ಕಿಂಗ್ ಇದೆ. ಬಲಬದಿಯಲ್ಲಿ ಬಂದ ಪ್ರವಾಸಿಗರಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ಮಾಡಲಾಗಿದೆ. ಎದುರಿಗೆ ಗುರುದ್ವಾರವಿದೆ.
ನಾವು ಬೀದರನಲ್ಲಿ ಇರುವಷ್ಟು ದಿನವೂ ಗುರುದ್ವಾರಕ್ಕೆ ಹೋಗುವದನ್ನು ತಪ್ಪಿಸಲಿಲ್ಲ. ದಿನಪೂರ್ತಿ ಐತಿಹಾಸಿಕ ಸ್ಥಳಗಳನ್ನು ನೋಡುವದು, ಹೋಟೆಲ್ಗೆ ಬಂದು ಸಂಜೆ ಮತ್ತೊಮ್ಮೆ ಸ್ನಾನ ಮಾಡಿ ಗುರುದ್ವಾರಕ್ಕೆ ಹೋಗಿ ಸಮಾಧಾನದಿಂದ ಕುಳಿತು ಸಂಗೀತ ಕೇಳಿ ಬರುವದು ನಮಗೆ ತುಂಬಾ ಹಿತವೆನಿಸುತ್ತಿತ್ತು. ಒಂದು ದಿನ ಬೆಳಿಗಿನ ವಾಕ್ಗೂ ಕೂಡ ಹೋಗಿ ಬಂದೆವು.
ಗುರುದ್ವಾರವನ್ನು ಸುಂದರವಾದ ಕಣಿವೆಯಲ್ಲಿ ಸ್ಥಾಪಿಸಲಾಗಿದೆ, ಇದು ಮೂರು ಕಡೆಗಳಲ್ಲಿ ಬೆಟ್ಟಗಳಿಂದ ಆವೃತವಾಗಿದೆ. ಈ ದೇವಾಲಯವು ದರ್ಬಾರ್ ಸಾಹಿಬ್, ದಿವಾನ್ ಹಾಲ್ ಮತ್ತು ಲಂಗಾರ್ ಹಾಲ್ ಅನ್ನು ಒಳಗೊಂಡಿದೆ. ಸುಖಾಸನ ಕೊಠಡಿಯಲ್ಲಿ, ಗುರು ಗ್ರಂಥ ಸಾಹಿಬ್, ಸಿಖ್ ಪವಿತ್ರ ಗ್ರಂಥವನ್ನು ಇರಿಸಲಾಗಿದೆ. ಲಿಖಾರಿ ರೂಮ್ ಎಂಬ ಪ್ರತ್ಯೇಕ ಕೊಠಡಿ ಇದೆ, ಅಲ್ಲಿ ದೇಣಿಗೆಗಳನ್ನು ಸ್ವೀಕರಿಸಲಾಗುತ್ತದೆ ಮತ್ತು ರಸೀದಿಗಳನ್ನು ನೀಡಲಾಗುತ್ತದೆ
ಗುರುದ್ವಾರದ ಮುಖ್ಯದ್ವಾರ. ಈ ಮಹಾದ್ವಾರದ ಮೇಲೆ ಮೂರೂ ಗೋಪುರಗಳನ್ನು ನೋಡಬಹುದು. ಒಂದು ದೊಡ್ಡದು ಎರಡು ಸಣ್ಣ ಗೋಪುರಗಳು. ಗೋಡೆಯ ತುಂಬಾ ಚಿತ್ರ ವಿನ್ಯಾಸವನ್ನು ಕಾಣಬಹುದು. ಇದರ ಮೇಲೆ ಶ್ರೀ ಗುರು ನಾನಕ ದೇವಜಿ ದರ್ಶನ ಮಹಾದ್ವಾರವೆಂದು ಬರೆಯಲಾಗಿದೆ.

ಗುರುದ್ವಾರದ ಆವರಣದ ಒಳಗೆ ದೊಡ್ಡ ಮರಗಳಿವೆ. ಅವುಗಳ ಸುತ್ತಲೂ ಕಟ್ಟೆಯನ್ನು ಕಟ್ಟಿ ಹಾಗೂ ಅಲ್ಲಲ್ಲಿ ಬೆಂಚುಗಳನ್ನು ಮಾಡಿ, ಬಂಡ ದರ್ಶನಾರ್ಥಿ ಗಳಿಗೆ ಕುಳಿತುಕೊಳ್ಳಲು ಅನುಕೂಲವನ್ನು ಮಾಡಿದ್ದಾರೆ. ಒಳಗೆ ದರ್ಶನಕ್ಕೆ ಹೋಗುವ ಪ್ರತಿಯೊಬ್ಬರ ತಲೆಯ ಮೇಲೆಯೂ ಬಟ್ಟೆ ಇರಬೇಕಾದುದು ಕಡ್ಡಾಯ. ಯಾರಾದರೂ ಬಟ್ಟೆ ತಂದಿರಲಿಲ್ಲವೆಂದರೆ ಅಲ್ಲಿಯೇ ಗುರುದ್ವಾರದ ಎದುರಿಗೆ ಬಟ್ಟೆ ಇಟ್ಟಿರುತ್ತಾರೆ. ಒಳಗೆ ಹೋಗಿ ಬರಲು ಅವನ್ನು ಉಪಯೋಗಿಸಿ ಮತ್ತೆ ಅಲ್ಲಿಯೇ ಇಟ್ಟು ಬರುವದು ರೂಢಿ.

ಗುರುದ್ವಾರಕ್ಕೆ ಎರಡು ಕಡೆಯಿಂದ ಸೋಪಾನಗಳನ್ನು ಮಾಡಿದ್ದಾರೆ. ಸೋಪಾನಕ್ಕೂ ಮೊದಲು ಕೆಳಗೆ ಸ್ವಲ್ಪ ತೆಗ್ಗು ಮಾಡಿ ಅಲ್ಲಿ ನೀರನ್ನು ಬಿಟ್ಟಿರುತ್ತಾರೆ. ಹೋಗುವವರು ಆ ನೀರಲ್ಲಿ ಕಾಲಿಟ್ಟು ಮುಂದೆ ಹೋಗಬೇಕು. ಇದರರ್ಥ ಒಳಗೆ ಹೋಗುವ ಮೊದಲು ಕಾಲು ತೊಳೆದಂತೆ.

 ಮತ್ತೊಂದು ಕೋನದಿಂದ ತೆಗೆದ ಗುರುದ್ವಾರದ ಚಿತ್ರ.

ಚಿತ್ರದಲ್ಲಿರುವದು ಸಿಖ್ ಗುರು ಶ್ರೀ ಗುರುನಾನಕರು. ಕ್ರಿ.ಶ. ೧೫೧೦-೧೫೧೪ ನಡುವೆ ಗುರು ನಾನಕ್ ನಾಗ್ಪುರ್ ಮತ್ತು ಖಾಂಡ್ವಾದ ಮೂಲಕ ಹಿಂದೂ ದೇವಸ್ಥಾನದ ಓಂಕಾರೇಶ್ವರಕ್ಕೆ ಭೇಟಿ ನೀಡಿ ನಾಂದೇಡ್ಗೆ ಭೇಟಿ ನೀಡಿದರು. ನಾಂದೇಡ್ನಿಂದ ಹೈದರಾಬಾದ್ ಮತ್ತು ಗೋಲ್ಕೊಂಡಾ ಕಡೆಗೆ ತೆರಳಿದ ಅವರು ಮುಸ್ಲಿಂ ಸಂತರನ್ನು ಭೇಟಿಯಾದರು ಮತ್ತು ನಂತರ ಪಿದರ್ ಜಲಾಲುದ್ದೀನ್ ಮತ್ತು ಯಾಕೋಬ್ ಅಲಿಯನ್ನು ಭೇಟಿಮಾಡಲು ಬೀದರ್ಗೆ ಬಂದರು.

ಗುರುಗಳು ಅವನ ಜೊತೆಗಾರ ಮಾರ್ದಾನ ಜೊತೆಯಲ್ಲಿ ಬೀದರ್ ಹೊರವಲಯದಲ್ಲಿ ನೆಲೆಸಿದ್ದರು. ಹತ್ತಿರದ ಗುಡಿಸಲುಗಳಲ್ಲಿ ನೆಲೆಸಿದ  ಮುಸ್ಲಿಂ ಫಕೀರರು ಗುರುಗಳ ಧರ್ಮೋಪದೇಶ ಮತ್ತು ಬೋಧನೆಗಳ ಬಗ್ಗೆ ಆಸಕ್ತಿ ವಹಿಸಿದರು. ಉತ್ತರದ ಪವಿತ್ರ ಸಂತರ ಬಗ್ಗೆ ಸುದ್ದಿ ಶೀಘ್ರದಲ್ಲೇ ಬೀದರ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿತು ಮತ್ತು ಹೆಚ್ಚಿನ ಸಂಖ್ಯೆಯ ಜನರು ಗುರುವಿನ ದರ್ಶನವನ್ನು ಪಡೆಯಲು ಅವರಲ್ಲಿಗೆ  ಬರುತ್ತಿದ್ದರು. ಬೀದರ್ ನಲ್ಲಿ ಕುಡಿಯುವ ನೀರಿನ ಕೊರತೆಯಿದತ್ತು. ಬಾವಿಗಳನ್ನು ಅಗೆಯುವ ಜನರ ಎಲ್ಲಾ ಪ್ರಯತ್ನಗಳು ಪ್ರಯೋಜನವಾಗಲಿಲ್ಲ. ಬಾವಿಗಳು ನೀರನ್ನು ಉತ್ಪಾದಿಸಿದರೂ ಸಹ ನೀರು ಕುಡಿಯುವುದಕ್ಕೆ ಅನರ್ಹ ಎಂದು ಕಂಡುಬಂದಿತು.
ಆಗ ಜನರ ಅಳಲನ್ನು ಕೇಳಿ ಗುರು ನಾನಕರು ತಾವು ನಿಂತ ಜಾಗದಲ್ಲಿ ತಮ್ಮ ಕಟ್ಟಿಗೆಯ ಚಪ್ಪಲಿಯಿಂದ ನಾಲ್ಕಾರು ಕಲ್ಲು ಮತ್ತು ಕಟ್ಟಿಗೆಗಳನ್ನು ಬದಿಗೆ ಸರಿಸಿದರು, ಆಗ ಅಲ್ಲಿಂದ ಒಂದು ನೀರಿನ ಚಿಲುಮೆ ಕಂಡಿತು. ಅದಕ್ಕೆ ನಾನಕ್ ಝೀರಾ ಎಂದು ಕರೆಯಲಾಯಿತು. ಆ ತಿಳಿಯಾದ ತಂಪು ಮತ್ತು ಸಿಹಿ ನೀರು ಈ ದಿನದವರೆಗೂ ಅಲ್ಲಿ ಬರುತ್ತದೆ.

ಆ ನಾನಕ್ ಝೀರಾ ನೀರನ್ನು ಒಂದು ಕುಂಡದಲ್ಲಿ ಶೇಖರಿಸಲಾಗುತ್ತದೆ. ಅದನ್ನೇ ಅಮೃತ ಕುಂಡ ಎಂದು ಕರೆಯುತ್ತಾರೆ. ಈ ನೀರಿಂದ ಮೈ ತೊಳೆದರೆ , ನೀರನ್ನು ಕುಡಿದರೆ ಎಲ್ಲ ರೋಗರುಜಿನಗಳು ಹೋಗುತ್ತವೆಂಬುದು ಜನರ ನಂಬಿಕೆ. ಈ ನೀರಿನ ಚಿಲುಮೆ ಸುಮಾರು ೫೦೦ ವರ್ಷಗಳಿಂದ ಹರಿಯುತ್ತಿದೆ. ಯಾವತ್ತೂ ಬತ್ತಿಲ್ಲ ಎಂದು ಹೇಳುತ್ತಾರೆ.

ಕೆಳಗೆ ಚಿತ್ರದಲ್ಲಿ ಕಾಣುತ್ತಿರುವದು ಸಿಖ್ ರ ಚಿಹ್ನೆ. ಇದನ್ನು ಖಂಡ ಎಂದು ಕರೆಯುತ್ತಾರೆ. ಇದು ಮೂರು ಶಸ್ತ್ರಾಸ್ತ್ರಗಳನ್ನು ಮತ್ತು ಒಂದು ವೃತ್ತವನ್ನು ಒಳಗೊಂಡಿದೆ. ಒಂದು ಖಡ್ಗ, ಎರಡು ಕೃಪಣಗಳು ಮತ್ತು ಒಂದು ವೃತ್ತ. ಇದು ಸಿಖ್ ರ ಮಿಲಿಟರಿ ಲಾಂಛನವಾಗಿದೆ.
 
ಈ ರಸ್ತೆಯ ಎರಡು ಬದಿಗಳಲ್ಲಿ ಪಂಜಾಬಿ ಹೋಟೆಲ್ಗಳು, ಬಟ್ಟೆ ಅಂಗಡಿಗಳು, ಬಳೆ ಅಂಗಡಿಗಳು ಮುಂತಾದವುಗಳನ್ನು ಕಾಣಬಹುದು. ಇಲ್ಲಿಯೇ ಒಂದು ಅಂಗಡಿಯಲ್ಲಿ ಕೈಗೆ ಹಾಕುವ ಕಡ ತೆಗೆದುಕೊಂಡೆವು. ಅಲ್ಲದೆ ಇಲ್ಲಿರುವ ಪಂಜಾಬಿ ಹೋಟೆಲ್ನಲ್ಲಿ ಬಿಸಿ ಬಿಸಿ ಆಲೂ- ಗೋಬಿ ಪರಾಠಾ ತಿಂದೆವು. ತುಂಬಾ ರುಚಿಕರವಾಗಿತ್ತು. ಒಟ್ಟಿನಲ್ಲಿ ಈ ನಿರ್ದಿಷ್ಟ ಪ್ರದೇಶ ಒಂದು ಸಣ್ಣ ಪಂಜಾಬನ್ನು ನಿದರ್ಶಿಸುತ್ತದೆ. ಇಲ್ಲಿಯೇ ಪಕ್ಕದಲ್ಲಿ ವಸ್ತುಸಂಗ್ರಹಾಲಯವಿದೆ. ಅಲ್ಲಿ ಸಿಖ್ ರ ಐತಿಹಾಸಿಕ ಘಟನೆಗಳ ಕುರಿತು ವರ್ಣಚಿತ್ರಗಳನ್ನು ಹಾಗೂ ಬರಹಗಳನ್ನು ಕಾಣಬಹುದು.

ಹೊರಗಿಂದ ನೋಡಿದಾಗ ಕಾಣುವ ಗುರುದ್ವಾರದ ಮಹಾದ್ವಾರ.

ಬಿದರಲ್ಲಿ ನೋಡಬಹುದಾದ ಸ್ಥಳಗಳು - what to see in Bidar district.
.........

Jan 19, 2019

What to see in Gadag district?

Gadag Jilla was formed in 1997, it was carved out of Dharwad district with Gadag-Betgeri city as the district capital. Gadag district consist of seven taluqas namely- Gadag-Betgeri, Gajendragad, Lakshmeshwar, Mundargi, Nargund, Ron, and Shirhatti. This word is a palindrome in Kannada (ಗದಗ) and English (GadaG). Present day Gadag was a prominent place during Western Chalukyan times. The Chalukyan culture has left a long lasting mark here, as a result this place is home to some of the famous musicians and music institutions. Some of the best examples of Chalukyan temple architecture can be seen in Gadag district such as Lakkundi group of temples, Basavanna temple of Dambal, Veeranarayana and Trikuteshwar temple in Gadag. Gadag has its share of forts too, the most prominent being Gajendragad fort. Gadag-Betgeri city is home to one of the largest statues of Karnataka.

Basava statue, Musukina Bavi, Basava Museum, Kashivishwanatha temple

Gajendragad fort, Dambal Nandi, Srimanthgad fort, Japada Bavi

Cave on Pyati-Kodathgeri hillock, Someshwara temple,
JodKalasha Gudi, Doddabasappa temple

Here's a list of places to see in Gadag district-
 1. Jagatjyoti Basaveshwara statue, Gadag - This 116 feet tall statue is situated next to Bhishmakere, the largest waterbody of Gadag city. It was constructed between 2009 and 2015. This standing Basaveshwara is 8' taller than the sitting Basaveshwara of Basava Kalyana in Bidar district. 
 2. Veeranarayana Devasthana, Gadag - This temple was built around 1117 CE by the Chalukyan ruler King Bittideva on the advice of his teacher Ramanujacharya.
 3. Trikuteshwara Devasthana, Gadag - This temple complex was built some time between X and XII centuries CE by Kalyani Chalukyan rulers. This temple is known for its deity- three ShivaLinga carved from one rock. The complex also has temples dedicated to Someshwara and Saraswathi.
 4. Archaeological Museum, Gadag - a government museum showcasing stone scultptural artifacts from Chalukyan to Vijayanagara times.
 5. Pandit Putraj Gawai statue, Gadag - Putraj Gawai hailed for a poor family from Devara Hospete in Hangal taluk, Haveri district. His parents Revaiah Venkatapurmath and Siddamma dies when Putraj was 10 months old and later at the age of six he lost eyesight. He was brought up by his uncle Chandrashekharaiah, later joined Veereshwara Punyashrama and underwent formal musical training. He was awarded Padma Bhushan for his contribution to society and musical field.
 6. Veereshwara Punyashrama - This school was establieshed in 1942 by Pandit Panchakshara Gawai (February 1892 – June 1944). Dedicated to the upliftment of poor and disabled people, this school specializes in Hindustani music. Pandit Putraj Gawai was trained in this school by Pandit Panchakshara Gawai.
 7. Tontadarya Siddalingeshwar Matha - This is a XII Century monastery founded by Tontada Siddalingeshwar Swamiji.
 8. Dattatraya Devasthana - This three storied temple is supposed to have been built by King Yakhsa Malla in 1427 CE. The entire temple has been created from a single tree. This temple is situated in Tanga Koot.
 9. Sri Ramakrishna Ashram, Gadag
 10. St Ignatius Loyola Church, Gadag - this historic church was established in 1918 CE.
 11. Jumma Masjid, Gadag - Jumma Masjid was built in 1675 by the Mughal emperor Aurangazeb's general Dilerkhan.
 12. Temples of Lakkundi - Lakkundi is about 12 kms from Gadag city on Gadag-Koppal road. Lakkundi, a capital during Chalukyan times, is said to have had 101 temples and 101 wells. The most popular temples are Suryanarayana Devasthana, Nanneshwara Devasthana, Brahma Jinalaya, Kashivishvanatha Devalaya, Manikeshwara Devasthana & Musukina Bavi, Mallikarjuna Devasthana, Virabhadra Devasthana, Someshwara Devasthana, Mallikarjuna Devasthana, Halugonda Basaveshwara Devasthana, Kumbareshwara Devasthana, Virupaksheshwara Devasthana, Allama Prabhu Gudi, and many more. Also there's an archaeological museum close to Brahma Jinalaya.
 13. Dodda Basappa temple and Someshwara temple, Dambal - Doddabasappa temple was built in XII century by Western Chalukyan rulers. This temple is dedicated to Shiva, its has a large idol of Basavanna (Nandi). 
 14. Buddhist shrine dedicated to the goddess Taradevi, Dambal
 15. Japada Baavi, Dambal - a stepped well with little temples. Locals call it Japada Bavi. Japa means meditating and Bavi means well. It's an ancient practice to take bath and start a ritual or meditation while still dripping wet.
 16. Dambal Fort - a fort did exist here once upon a time, now nothing much remains of it.
 17. Magadi Bird Sanctuary - Magadi bird sanctuary is about 26 kms from Gadag city. Migratory birds such as Bar Headed Goose, Comb Ducks, Greater Flamingos, Grey Herons, etc. are found here during the winter months.
 18. Gajendragad fort - 'Gajendra' means elephant and 'Gad' means fort. The fort is situated on a hill-top plateau which is a kilometer long. The fort walls are built along the edge of the plateau with the main entrance on the southern side. The fort is said to be built by Chatrapathi Shivaji. The fort also under the Ghorpade who were related to Sandur Ghorpade family.
 19. Kalakaleshwara temple - Kalakaleshwara temple is situated on the slope of Gajendragad hill range. This place is also known as Dakshina Kashi. Kalakaleshwara is an avatar of Lord Shiva.The temple complex includes a shrine dedicated to Lord Virabhadra and fresh water spring known as AtharaGange. The water drips down the aerial roots of a ficus tree.
 20. Temple on a ledge, Chikkadi Gudda - this is a unique temple built on a narrow strip of overhanging rock. This hillock is about a kilometer from the eastern end of Gajendragad town 
 21. Hammagi fort - In plan, this fort is rectangular shaped with eight to ten bastions. The fort is mostly ruins, some walls and bastions still remain. The fort area seems to be encroached upon.
 22. Kodathgeri fort - a tiny fort on a hilltop plateau.
 23. Mundargi fort - This completely ruined fort is situated on the rock hill. Also on the hill slope is an ancient temple dedicated to Lord Hanuman.
 24. Kappatgudda - Kappatgudda hills and valley was declared as a wildlife sanctuary in 2013. However, there are reports about mining companies operating in the hills.
 25. Shantagiri fort - This fort is situated on a hill top plateau. Probably the structures seen today were built by Maratha rulers but originally might have been established during Chalukyan times.
 26. Shrimanthgad fort - This small fort situated on a hillock is near Shirahatti. Within this fort is an ancient shrine dedicated to Havalamma Devi.
 27. Shree Jagdguru Fakireshwara Swami temple, Shirhatti - a Lingayath temple and monastery probably established by a Lingayath Guru named Fakireshwara Swami.
 28. Someshwara temple, Lakshmeshwar - Lakshmeshwar town is popular for its numerous Hindu temples, Jain temples, wells and Jumma Masjid. The most popular temple is Someshwara temple complex. The deity of the temple is unique and the only one in India.
 29. Temples and wells of Sudi - Sudi was a prominent place during Kalyani Chalukyan time. Today, the little village boasts of number of temples such as Jodi Gopura temple, Mallikarjuna temple, Ganesha idol, Nandi statues and a stepped well named Naga-Kunda.
 30. Bhimambika temple, Itagi - Itagi Bheemavva temple is about 5 kms from Sudi village. The temple is ancient but it has been modified to suit the crowds that throng every no moon day.
 31. Uma Maheshwara temple, Harti - This temple was built by Chalukyas. Harti village is about 15 kms from Gadag.
 32. Kotumachagi - Kotumachagi is known for Someswar temple, Durgadevi temple and Hazarat-Zindashav-Ali Dargah. It is said that the XV Century Veerashaiva poet Chamarasa wrote Prabulingalile on Harti lake bank near Someshwara temple. This village is about 22 kms from Gadag.
 33. Nagavi - Nagavi village is known for its Yellamma temple. Nagavi is about 10 kms from Gadag.
 34. Narayana temple, Naregal - this temple is situated in the narrow streets of Naregal town. The beautiful is just unrecognizable as an ancient monument unless someone points it out.
 35. Shankarlinga temple, Hombal - This small temple has a tall Shikhara making it unique in design. Hombal is about 12 kms from Gadag city.
 36. Belavanaki - Belavanaki village is known for its statue of Veerabhadreshwara. Its believed that Belavanki was part of Belavalanaadu-300 or Belvola-300 meaning a region consisting of 300 villages. The village has a number of ancient shrines and temples.
 37. Ron - Ron or Rona was called Dronapur in ancient times. In this town are temples built by an ancient architect called Dronacharya. To name a few historical monuments of Ron- Anantshayan Gudi, Isvara temple, Kali Gudi, Lokanatha temple, Mallikarjuna Gudi, Parsvanath Jain Basadi, and Somlingesvara temple. 
 38. Nargund fort - Nargund town is situated on Hubli-Bijapur highway. The town's best known identity is its hill. Atop the hill is ruins of a fort which was once under Shivaji's control. Nargund is known for the revolt in 1857 revolt.
.........

Jan 12, 2019

ಬಸವ ಕಲ್ಯಾಣ ಕೋಟೆ

ಸೆಪ್ಟೆಂಬರ್ ೨, ೨೦೧೮

ಬಸವ ಕಲ್ಯಾಣದ ಕೋಟೆ ಚಿಕ್ಕದಿರಬೇಕೆಂದು ಊಹಿಸಿದ ನನಗೆ ಕೋಟೆ ಕಂಡ ನಂತರ ತುಂಬಾ ಆಶ್ಚರ್ಯವಾಯಿತು. ಕೋಟೆಯ ಮುಖ್ಯದ್ವಾರದ ಹೊರಗೆ ಒಂದು ದೊಡ್ಡ ಮರವಿದೆ, ಅಲ್ಲಿಯೇ ನಮ್ಮ ಕಾರನ್ನು ನಿಲ್ಲಿಸಿ ಕೋಟೆಯ ಹೊರಗಿರುವ ವಸ್ತು ಸಂಗ್ರಹಾಲಯವನ್ನು ನೋಡಿಕೊಂಡು ಆಮೇಲೆ ಕೋಟೆ ನೋಡಲು ಒಳಗೆ ಹೋಗುವದೆಂದಾಯಿತು. ಕೋಟೆ ನೋಡಿಕೊಂಡು ಹೊರಬಂದ ಸ್ವಲ್ಪ ಜನ ನಮ್ಮನ್ನು ವಿದೇಶೀಯರೆಂದು ತಿಳಿದರು. ಎಷ್ಟು ಹೇಳಿದರು ಕೇಳದೆ ತಮ್ಮ ಜತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಕೇಳಿಕೊಂಡರು. ಸರಿ ಆಯಿತೆಂದು ನಿಂತುಕೊಂಡೆ.ಕೆಳಗಿನ ಚಿತ್ರದಲ್ಲಿ ನಮ್ಮ ಹಿಂದೆ ಕಾಣುವದೇ ಕೋಟೆಯ ಪ್ರವೇಶ ದ್ವಾರ. ಈ ದ್ವಾರಕ್ಕೆ ಎರಡೂ ಬದಿಯಲ್ಲಿರುವ ಹಂತಗಳ ಮೂಲಕ ಪ್ರವೇಶಿಸಿದ ಪಾರ್ಶ್ವದ ಮೇಲೆ ಬಾಲ್ಕನಿಗಳಿವೆ.

ಕೋಟೆಯು ಮೂಲತಃ ಕಲ್ಯಾಣದ ಚಾಲುಕ್ಯರಿಗೆ ಸೇರಿದ್ದು, ನಂತರ ಸುಲ್ತಾನರು, ನಿಜಾಮರು ಆಳಿದರು. ಕೋಟೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಬಲಬದಿಯಲ್ಲಿ ವಿಗ್ರಹವಿಲ್ಲದ ದೇವಸ್ಥಾನವಿದೆ. ಅಷ್ಟೊಂದು ದೊಡ್ಡದಿಲ್ಲದಿದ್ದರೂ ಕಂಬಗಳನ್ನು ಹೊಂದಿದ ಮುಖಮಂಟಪ ಮತ್ತು ಗರ್ಭಗುಡಿಯನ್ನು ಹೊಂದಿದ್ದು, ಇದು ಎರಡು ಬದಿಗಳಲ್ಲಿ ಸೋಪಾನಗಳನ್ನು ಹೊಂದಿದೆ. ದೇವಾಲಯದ ಮುಂದೆ ಒಂದು ಚದರ್ ಕೊಳವಿದೆ.

ಎಡಬದಿಯಲ್ಲಿ ಮೊಹರಂ ಸಮಯದಲ್ಲಿ ಉಪಯೋಗಿಸುವ ದರ್ಗಾ ಇದೆ. ಇದನ್ನು ನೋಡಿದರೆ ಕಟ್ಟಡದ ಒಳ ಶೈಲಿ ಚಾಲುಕ್ಯರ ಮಾದರಿಯಿದ್ದು  ಅದರ ಮೇಲೆ ಇತ್ತೀಚಿಗೆ ಮಿನಾರ್ ಗಳನ್ನು ನಿರ್ಮಿಸಿದ ಹಾಗಿದೆ.
ಈ ಕೋಟೆಯು ಏಳು ಬಾಗಿಲುಗಳನ್ನು ಹೊಂದಿದೆ, ಅದರಲ್ಲಿ ಐದು ಉತ್ತಮ ಆಕಾರದಲ್ಲಿದೆ. ಕೇಂದ್ರ ಅಂಗಳದಲ್ಲಿ ಸುತ್ತುವರೆದಿರುವ ಕೋಟೆಯ ಗೋಡೆಗಳು ಸಿಬ್ಬಂದಿ ಕೊಠಡಿಗಳನ್ನು ಹೊಂದಿವೆ. ಕೋಟೆಯ ಗೋಡೆಗಳು ಎಲೆಗಳ ಚಿತ್ರದಿಂದ ಅಲಂಕೃತವಾಗಿವೆ. ಈ ಕೋಟೆಯನ್ನು ದೊಡ್ಡ ದೊಡ್ಡ ಬಂಡೆಗಲ್ಲುಗಳ ಮೇಲೆ ನಿರ್ಮಿಸಲಾಗಿದೆ. ಸಮೀಪ ಬಂದು ನೋಡುವವರೆಗೂ ಈ ಕೋಟೆ ಕಾಣುವದಿಲ್ಲ. ಕೋಟೆಯ ಸುತ್ತಲೂ ಆಳವಾದ ಕಂದಕವನ್ನು ನಿರ್ಮಿಸಲಾಗಿದೆ. ಈ ಎಲ್ಲ ಮಾರ್ಪಾಡುಗಳನ್ನು ಕೋಟೆಯ ರಕ್ಷಣೆಯ ಉದ್ದೇಶದಿಂದ ಮಾಡಲಾಗಿದೆ ಎನ್ನಬಹುದು.

ಈ ಕೋಟೆಯು ಏಳು ಪ್ರವೇಶ ದ್ವಾರಗಳನ್ನು ಹೊಂದಿದೆ, ಅದರಲ್ಲಿ ಐದು ಉತ್ತಮ ಆಕಾರದಲ್ಲಿದೆ. ದ್ವಾರಗಳಿಗೆ ಸಧ್ಯಕ್ಕೆ ಇತ್ತೀಚಿಗೆ ಮಾಡಿದ ಬಾಗಿಲುಗಳನ್ನು ಜೋಡಿಸಲಾಗಿದೆ. ಮೊದಲಿದ್ದ ಬಾಗಿಲುಗಳನ್ನು ತುಂಬಾ ಹಳೆಯವಾಗಿದ್ದರಿಂದ ತೆಗೆದು ಅಲ್ಲಿಯೇ ಪಕ್ಕದಲ್ಲೇ ಇಟ್ಟಿದ್ದಾರೆ. ದೊಡ್ಡ ದೊಡ್ಡ ಗುಂಡುಗಳನ್ನು ಸಹ ದ್ವಾರದ ಹತ್ತಿರ ಜೋಡಿಸಲಾಗಿದೆ.

ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವದು ಜೈಲು. ಸೆರೆಮನೆಯನ್ನು ಹತ್ತಿರದಿಂದ ನೋಡಲು ಹೋದೆ ಬಾವಲಿಗಳ ಕಮಟು ವಾಸನೆ ಮೂಗಿಗೆ ಒಮ್ಮೆಲೇ ಬಡಿಯಿತು. ಆದರೂ ಇಣುಕಿ ನೋಡಿದೆ, ಹೊರ ರಚನೆಯಲ್ಲಿ ಈ ಸೆರೆಮನೆಗಳು ಈಗಿನ ಜೈಲುಗಳಂತೆ ಕಂಡರೂ ಒಳಗೆ ನಾಲ್ಕರಿಂದ ಐದು ಅಡಿಗಳಷ್ಟು ಆಳವಿರಬೇಕು.
ಚಿತ್ರದಲ್ಲಿ ಕಾಣುವ ಹುಡುಗ ನಮಗೆ ಬಸವಕಲ್ಯಾಣದ ಕೋಟೆಯನ್ನು ಬಹು ವಿಸ್ತಾರವಾಗಿ ತೋರಿಸುತ್ತ ಅದರ ಕುರಿತು ವಿವರಣೆ ಕೊಡುತ್ತಿದ್ದ. ಅವನ ಪಕ್ಕದಲ್ಲಿರುವ ಬೀಸುವ ಕಲ್ಲನ್ನು ಮದ್ದನ್ನು ಬೀಸಲು ಬಳಸಲಾಗುತ್ತಿತ್ತೆಂದು ಹೇಳಿದ.
ಕೆಳಗೆ ಕಾಣುತ್ತಿರುವದು ಕೋಟೆಯ ಒಳಬಾಗಿಲು. ಈ ಕೋಟೆ ನೋಡಲು ಸ್ವಲ್ಪವೂ ಬೇಸರವಾಗುವದಿಲ್ಲ. ಎಷ್ಟೋ ಕೋಟೆಗಳ ಹೆಸರಿನಲ್ಲಿ ಕೋಟೆಯ ಅವಶೇಷಗಳನ್ನು ನೋಡುವ ನಮಗೆ ಇಲ್ಲಿ ಸ್ವಲ್ಪ ಸುಸ್ಥಿತಿಯಲ್ಲಿರುವ ಕೋಟೆಯ ದರ್ಶನವೇ ಆಯಿತು. ನಾನಂತೂ ತುಂಬಾ ಉತ್ಸಾಹದಿಂದಾನೆ ಈ ಕೋಟೆಯನ್ನು ನೋಡಿದೆ.

ಕೋಟೆಯ ಗೋಡೆಗಳನ್ನು ಕಣ್ಣೆತ್ತಿ ನೋಡುತ್ತಿದ್ದರೆ ಬಲು ಎತ್ತರವಾಗಿ ತಲೆ ಎತ್ತಿ ನಿಂತಂತೆ ಕಾಣುತ್ತಿದ್ದವು. ಕೆಳಗಿನ ಚಿತ್ರದಲ್ಲಿರುವ ಗೋಡೆಯನ್ನು ನೋಡಿ ನಾನು ಸಿದ್ದಿಗೆ ಕೇಳಿಯೇ ಬಿಟ್ಟೆ, ಎಷ್ಟು ಎತ್ತರವಿರಬಹುದೀ ಗೋಡೆಗಳು, ಎಷ್ಟು ವರ್ಷಗಳು ಹಿಡಿದಿರಬಹುದು ಈ ಗೋಡೆ ನಿರ್ಮಿಸಲು? ಎಂದು.

ಈ ಬಾಗಿಲಿಂದ ಒಳನಡೆದು ಎಡಕ್ಕೆ ನಡೆದರೆ ರಾಜ ದರ್ಬಾರ್ ಇದೆ. ಹಾಗೂ ಬಲಗಡೆ ರಾಣಿ ಮಹಲ್.

ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವದು ರಾಜ ಮಹಲ್.  ಎದುರಿಗೆ ಚಿಕ್ಕದಾದ ಚೌಕಾಕಾರದ ಕಾರಂಜಿ ಕೊಳವಿದೆ.

ರಾಜ ಮಹಲಿನ ಮತ್ತೊಂದು ಚಿತ್ರ. ಕಮಾನಿನ ಮೇಲೆ ಎರಡೂಕಡೆ ವೃತ್ತಾಕಾರದಲ್ಲಿ ಚಿತ್ರಗಳನ್ನು ಕೆತ್ತಲಾಗಿದೆ. ಎಡಬದಿಯಲ್ಲಿ ಒಂದು ಚಿಕ್ಕ ದೇವಸ್ಥಾನವನ್ನು ಕಾಣಬಹುದು.

ರಾಜ ಮಹಲಿನ ಒಳನೋಟ.

ರಾಜ ಮಹಲಿನ ಗೋಡೆಯ ಮೇಲೆ ನಕಲಿ ಬಾಗಿಲುಗಳನ್ನು ಮಾಡಲಾಗಿದೆ. ಬಹುಶ ಶತ್ರುಗಳನ್ನು ಗೊಂದಲಕ್ಕೊಳ ಮಾಡಲಿರಬೇಕು.

ಕೆಳಗೆ ಚಿತ್ರದಲ್ಲಿ ಕಾಣುತ್ತಿರುವದು ರಂಗೀನ್ ಮಹಲ್ ಮುಂದಿರುವ ಕಾರಂಜಿ ಕೊಳದ ಚಿತ್ರ. ಈ ಕೊಳವು ಅಷ್ಟಭುಜಾಕೃತಿಯದ್ದಾಗಿದೆ. ರಂಗೀನ್ ಮಹಲ್ ಹೆಸರೇ ಸೂಚಿಸುವಂತೆ ಸುಂದರವಾದ ವರ್ಣರಂಜಿತ ಚಿತ್ರಗಳಿಂದ ಕೂಡಿದೆ.

ಕೆಳಗೆ ಕಾಣುತ್ತಿರುವ ಸಣ್ಣ ಕೋಣೆಗಳು ದಾಖಲೆ ಪತ್ರಗಳ ಕಚೇರಿಗಳು ಎಂದು ನಮಗೆ ವಿವರಣೆ ನೀಡುತ್ತಿದ್ದ ಹುಡುಗ ಹೇಳಿದನು.

ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವದು ರಾಜ ದರ್ಬಾರ್. ಇಲ್ಲಿ ರಾಜರು ತಮ್ಮ ಸಂಸತ್ತಿನೊಂದಿಗೆ ಸಭೆ ನಡೆಸುತ್ತಿದ್ದರು. ಕಟ್ಟಡದ ಈ ಭಾಗವು ತುಂಬಾ ದೊಡ್ಡದಾಗಿಯೇ ಇದೆ. ಈ ಕಟ್ಟಡದ ಎದುರಿಗೆ ಉದ್ದವಾದ ಕಾರಂಜಿ ಕೊಳವನ್ನು ನಾವು ಕಾಣಬಹುದು.

ರಾಣಿ ಮಹಲಿನ ಒಂದು ಭಾಗವಾದ ಇಲ್ಲಿ ರಾಣಿಯು ತಲೆ ಸ್ನಾನ ಮಾಡಿದಾಗ ಕೂದಲನ್ನು ಇಲ್ಲಿ ಕಾಯಿಸಿಕೊಳ್ಳುತ್ತಿದ್ದಳೆಂದು ಹೇಳಲಾಗುತ್ತದೆ. ಗಚ್ಚಿನಿಂದ ಮಾಡಿದ ಈ ರಚನೆಯು ಮಲಗಲು ಅನುಕೂಲವಾಗುವಂತಿದ್ದು ತಲೆಯ ಬದಿಯಲ್ಲಿ ಎತ್ತರವಾಗಿದೆ. ಈ ಗಚ್ಚಿನ ರಚನೆಯ ಕೆಳಗೆ ಖಾಲಿ ಜಾಗವಿದ್ದು, ಪೂರ್ತಿ ಕಲ್ಲಿನಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಕಾಣಬಹುದು. ಕೆಳಗಡೆ ಕಾದ ಕೆಂಡವಿಟ್ಟು ಧೂಪ ಹಾಕಿ ತಲೆ ಕಾಯಿಸಿಕೊಳ್ಳುತ್ತಿದ್ದರೆಂದು ಹೇಳಲಾಗುತ್ತದೆ.

ಅಲ್ಲಿಂದ ನಾವು ತೋಪು ನೋಡಲು ಬಂದೆವು. ಮೊದಲನೆಯ ತೋಪು ಸುಮಾರು ೨೦ ಅಡಿ ಉದ್ದವಾಗಿದೆ. ಪಂಚಲೋಹದಿಂದ ಮಾಡಿದ ಈ ತೋಪು ನಾಲ್ಕು ಜಾಗಗಳಲ್ಲಿ ಹಿಡಿಕೆಗಳನ್ನು ಹೊಂದಿದೆ.

ಕೆಳಗಿನ ಚಿತ್ರದಲ್ಲಿರುವ ತೋಪು ಚಿಕ್ಕದಿದ್ದರೂ ತುಂಬಾ ಸುಂದರವಾಗಿದೆ. ಇದನ್ನು ಖಡಕ್ ಬಿಜಲಿ ತೊಪೆಂದು ಕರೆಯುತ್ತಾರೆ. ಈ ತೋಪಿನ ಮೇಲೆ ತುಂಬಾ ಸೂಕ್ಷ್ಮ ಹಾಗೂ ಸುಂದರವಾದ ಚಿತ್ರಗಳನ್ನು ಕೆತ್ತಲಾಗಿದೆ. ಇದನ್ನು ಈಗಲೂ ಕೂಡ ಪೂರ್ತಿ ಸುತ್ತು ಸುತ್ತಿಸಬಹುದು.

ಇನ್ನೊಂದು ಸಣ್ಣ ತೋಪು ಬೇರೆಯ ಗೋಪುರದ ಮೇಲೆ ನಮಗೆ ಕಂಡಿತು. ಆದರೆ ಅಲ್ಲಿ ಹೋಗಲು ದಾರಿ ಸುಗಮವಾಗಿಲ್ಲದ್ದರಿಂದ ದೂರದಿಂದಲೇ ಫೋಟೋ ತೆಗೆದುಕೊಂಡು ಬಂದೆವು.

ಬಸವ ಕಲ್ಯಾಣದ ಕೋಟೆ ಹಾಗೂ ವಸ್ತು ಸಂಗ್ರಹಾಲಯ ನೋಡಬೇಕೆನ್ನುವರು ಶುಕ್ರವಾರ ಬಿಟ್ಟು ಯಾವ ದಿನವಾದರೂ ಭೇಟಿ ನೀಡಬಹುದು. ಶುಕ್ರವಾರದಂದು ಎರಡಕ್ಕೂ ರಜೆ ಇರುತ್ತದೆ. ಬಸವ ಕಲ್ಯಾಣದ ಕೋಟೆಯ ವೀಕ್ಷಣಾ ಕಾರ್ಯ ಇಲ್ಲಿಗೆ ಮುಗಿದಿತ್ತು. ಸ್ವಲ್ಪ ವಿಶ್ರಾಂತಿಯು ಬೇಕಿತ್ತು. ಆದ ಕಾರಣ ಬಸವಕಲ್ಯಾಣದಿಂದ ಬೇಗನೆ ಬಿಟ್ಟು, ಬೀದರ್ ತಲುಪಿ ಹೋಟೆಲ್ ಹುಡುಕಿಕೊಂಡು ಹೊರಟೆವು. ಹೋಟೆಲ್ ರೂಮ್ ಸಿಕ್ಕ ಮೇಲೆ ಸ್ನಾನ ಮುಗಿಸಿ ಗುರುದ್ವಾರಕ್ಕೆ ಹೋಗಬೇಕೆಂದು ನಿರ್ಧರಿಸಿದೆವು.
.........

Jan 5, 2019

ಅನುಭವ ಮಂಟಪ, ಬಸವಣ್ಣ ಮೂರ್ತಿ ಮತ್ತು ಬಸವೇಶ್ವರ ದೇವಸ್ಥಾನ

ಸೆಪ್ಟೆಂಬರ್ ೨, ೨೦೧೮

ಬೀದರ್ ಕೋಟೆ ನೋಡಲು ಹೋಗಬೇಕು ಎಂದು ಬಹಳ ದಿನದಿಂದ ಅಂದುಕೊಳ್ಳುತ್ತಿದ್ದ ನಾವು, ಸೆಪ್ಟೆಂಬರ್ ೨ ರಂದು ಬೀದರಗೆ ಹೋಗುವ ತಯಾರಿ ನಡೆಸಿದೆವು. ಅಲ್ಲಿಯವರೆಗೂ ಹೋಗಿ ಬರಿ ಬೀದರ್ ಕೋಟೆ ಮಾತ್ರ ನೋಡಿಕೊಂಡು ಬರಲು ಹೇಗೆ ಸಾಧ್ಯ! ಅದರೊಂದಿಗೆ ಬಸವ ಕಲ್ಯಾಣ ಕೂಡ ನೋಡುವದೆಂದು ನಿರ್ಧಾರವಾಯಿತು. ಹೈದೆರಾಬಾದಿನಿಂದ ಹೊರಟು ನೇರವಾಗಿ ಬಸವಕಲ್ಯಾಣಕ್ಕೆ ಹೋಗಿ ಕೋಟೆ ಹಾಗೂ ಬಸವ ಮೂರ್ತಿ ಮತ್ತು ಗುಡಿ ನೋಡಿಕೊಂಡು ಬೀದರ್ ಗೆ ಮರಳಿ ಅಲ್ಲಿಯೇ ಎರಡು ದಿನ ಇದ್ದು ಬೀದರ್ ಕೋಟೆ ಹಾಗೂ ಇನ್ನುಳಿದ ಐತಿಹಾಸಿಕ ಸ್ಥಳಗಳನ್ನು ನೋಡುವದೆಂದು ನಿರ್ಧರಿಸಿಕೊಂಡು ಹೈದೆರಾಬಾದ್ ಬೆಳಿಗ್ಗೆ ೪.೪೫ ರ ಸುಮಾರಿಗೆ ಬಿಟ್ಟೆವು. ಅದೇನೇ ಹೇಳಿ ಪ್ರವಾಸಕ್ಕೆ ನಸುಕಿನಲ್ಲಿ ಹೋಗುವ ಸುಖ ಹೊತ್ತಾಗಿ ಹೋಗುವದರಲ್ಲಿಲ್ಲ. ಈ ಬಾರಿ ಚಪಾತಿ, ಸ್ವಲ್ಪ ನೆನೆ ಹಾಕಿದ ಮಡಿಕೆ ಕಾಳು, ಉಪ್ಪು-ಖಾರ, ಮೊಸರು, ಸೌತೆಕಾಯಿ ಕೂಡ ನಮ್ಮೊಂದಿಗೆ ಪ್ರವಾಸಕ್ಕೆಂದು ಸಜ್ಜಾಗಿತ್ತು.

ಬಸವ ಕಲ್ಯಾಣ ತಲುಪಿದಾಗ ಬೆಳಿಗ್ಗೆ ಸುಮಾರು ೭.೩೦. ನೇರವಾಗಿ ಬಸವ ಮೂರ್ತಿ ನೋಡಲು ಹೋದೆವು ಆದರೆ ಮೂರ್ತಿ ವೀಕ್ಷಣಾವಕಾಶ ಪ್ರವಾಸಿಗರಿಗೆ ತೆರೆದುಕೊಳ್ಳುವದು ಸುಮಾರು ೯ ಗಂಟೆಗೆಂದು ತಿಳಿಯಿತು. ಅಲ್ಲಿಯೇ ಇದ್ದ ಒಂದು ಚಿಕ್ಕ ಹೋಟೆಲಿನಲ್ಲಿ ಎರಡು ಕಪ್ ಚಾ ಮತ್ತು ಪಾರ್ಲೆ-ಜಿ ಬಿಸ್ಕತ್ ತಿಂದೆವು. ಆ ಅಂಗಡಿಯವನು ನಮಗೆ ಅನುಭವ ಮಂಟಪದ ಕುರಿತು ಹೇಳಿದನು. ಹೇಗೂ ಇಲ್ಲಿ ಟಿಕೆಟ್ ಕೊಡುವದು ತಡ ಅಲ್ಲಿಯವರೆಗೆ ಅನುಭವ ಮಂಟಪಕ್ಕೆ ಹೋಗಿ ಬನ್ನಿ ಎಂದನು. ನಾವು ಕೂಡ ಅದೇ ಸರಿ ಎಂದು ಕಾರನ್ನು ಅನುಭವ ಮಂಟಪದ ರಸ್ತೆಯತ್ತ ತಿರುಗಿಸಿದೆವು.

ಅನುಭವ ಮಂಟಪದ ಕುರಿತು ಹೇಳಬೇಕಾದಲ್ಲಿ, ಇದು ಪ್ರಪಂಚದ ಮೊದಲ ಸಂಸತ್ತು,12 ನೇ ಶತಮಾನದಲ್ಲಿ ವೀರಶೈವ ಪಂಥದ ಅನುಯಾಯಿಗಳ, ಸಂತರು ಮತ್ತು ತತ್ವಜ್ಞಾನಿಗಳ ಅಕಾಡೆಮಿಯಾಗಿತ್ತು. ವೀರಶೈವಕ್ಕೆ ಸಂಬಂಧಿಸಿದ ಎಲ್ಲಾ ಧಾರ್ಮಿಕ ಮತ್ತು ತತ್ತ್ವಚಿಂತನೆಯ ಚಿಂತನೆಯ ಕಾರಂಜಿಯಾಗಿದೆ. ಅಲ್ಲಮಪ್ರಭು ಈ ಅನುಭವ ಮಂಟಪದ ಸ್ಥಾಪಕರಾಗಿದ್ದರು. ಈ ಸಂಸ್ಥೆಯು ವಚನ ಸಾಹಿತ್ಯದ ಕಾರಂಜಿಯಾಗಿದ್ದು, ಇದನ್ನು ವೀರಶೈವ ಧಾರ್ಮಿಕ ಮತ್ತು ತತ್ತ್ವಚಿಂತನೆಯ ಚಿಂತನೆಯನ್ನು ಪ್ರಸಾರ ಮಾಡಲು ವೇದಿಕೆಯಾಗಿ ಬಳಸಲಾಯಿತು. ಅಕ್ಕ ಮಹಾದೇವಿ, ಚನ್ನಬಸವಣ್ಣ ಮತ್ತು ಬಸವಣ್ಣ ಮುಂತಾದ ವೀರಶೈಯ ತತ್ವಶಾಸ್ತ್ರದ ಇತರ ಮಹಾ ವ್ಯಕ್ತಿಗಳು ಅನುಭವ ಮಂಟಪದಲ್ಲಿ ಪಾಲ್ಗೊಂಡಿದ್ದರು. ಅನುಭವ ಮಂಟಪವು ಮಹಾಮನೆ ಎಂದು ಕೂಡ ಕರೆಯಲ್ಪಡುತ್ತದೆ.

ಅನುಭವ ಮಂಟಪ ತಲುಪುತ್ತಿದ್ದಂತೆ ಅಲ್ಲಿ ಅನುಭವ ಮಂಟಪ ಹೆಸರುಳ್ಳ ಒಂದು ಕಮಾನನ್ನು ಕಾಣಬಹುದು. ಕಾರನ್ನು ಅಲ್ಲಿಯೇ ಬಿಟ್ಟು ಕಮಾನಿನ ಒಳಗೆ ನಡೆದು ಹೊರಟೆವು. ಮಂಟಪದ ಮೇಲೆ ಶಿವಲಿಂಗದ ಆಕಾರವನ್ನು ಮಾಡಲಾಗಿದೆ.

ಹೊರಗಿನಿಂದ ಅನುಭವ ಮಂಟಪದ ಒಂದು ನೋಟ. ನಾವು ಅಲ್ಲಿ ಹೋಗುವ ಮೊದಲೇ ಒಂದು ಗುಂಪು ಅನುಭವ ಮಂಟಪವನ್ನು ನೋಡಲು ಉತ್ತರಪ್ರದೇಶದ ಅಲಿಘರ್ ಇಂದ ಬಂದಿತ್ತು. ಆ ಗುಂಪು ಮುಸಲ್ಮಾನರದ್ದಾಗಿದ್ದರಿಂದ ಅಲ್ಲಿನ ವ್ಯಕ್ತಿ ಅನುಭವ ಮಂಟಪದ ಕುರಿತು ಹಿಂದಿಯಲ್ಲಿ ಅವರಿಗೆ ವಿವರಣೆ ನೀಡುತ್ತಿದ್ದನು. ಉತ್ತರ ಕರ್ನಾಟಕವು ಹೈದೆರಾಬಾದ್ ಕರ್ನಾಟಕ ಎಂದು ಕರಿಸಿಕೊಳ್ಳುತ್ತದೆ, ಹಿಂದಿ ಕೂಡ ಸ್ವಲ್ಪ ಹೈದೆರಾಬಾದ್ ಹಿಂದಿಯನ್ನೇ ಹೋಲುತ್ತದೆ. ಆತನ ಭಾಷೆ ಕೇಳಲಿಕ್ಕೆ ಹಾಸ್ಯಾಸ್ಪದವಾಗಿಯೂ, ಹಾಗೂ ತುಂಬಾ ಸೊಗಸಾಗಿಯೂ ಇತ್ತು.

ಕಟ್ಟಡವು ತುಂಬಾ ಸರಳ ಮತ್ತು ಸುಂದರವಾಗಿದೆ. ಆಯತಾಕಾರದಲ್ಲಿರುವ ಈ ಕಟ್ಟಡದ ಒಳಗಡೆ ನಟ್ಟ ನಡುವೆ ಆಸನದ ರೀತಿಯಲ್ಲಿ ಕಲ್ಲಿನಿಂದ ಮಾಡಿದ ಆರು ಸೋಪಾನಗಳನ್ನೊಳಗೊಂಡ ಆಕೃತಿ ಇದೆ. ಆರು ಸೋಪಾನಗಳ ಮೇಲೆ ದೇವನಲ್ಲಿ ಐಕ್ಯ ಹೊಂದುವ ಮಾರ್ಗವನ್ನು ಸೂಚಿಸಲಾಗಿದೆ. ಸೋಪಾನಗಳ ಮೇಲೆ ಕೆಳಗಿನಿಂದ ಮೇಲಕ್ಕೆ (ಚಿತ್ರದಲ್ಲಿ ತೋರಿಸಿದಂತೆ) ಭಕ್ತ, ಮಾಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂದು ಬರೆಯಲಾಗಿದೆ.

ಮಂಟಪದ ಒಳಗೆ ಗೋಡೆಗೆ ಸುತ್ತಲೂ ಬಸವಣ್ಣ ಹಾಗೂ ಇತರ ಶರಣರು ಮತ್ತು ಅವರ ಜೀವನದ ಅಮೂಲ್ಯ ಘಟನೆಗಳ ಚಿತ್ರಗಳನ್ನು ಹಾಕಿದ್ದಾರೆ. ಈ ಚಿತ್ರಗಳನ್ನೇ ತೋರಿಸಿ ಆ ವ್ಯಕ್ತಿ ಅವರಿಗೆ ವಿವರಣೆ ಕೊಡುತ್ತಿದ್ದನು.

ಶರಣರ ಚಿತ್ರಗಳ ಕುರಿತು ವ್ಯಕ್ತಿಯೊಬ್ಬ ವಿವರಣೆ ಕೊಡುತ್ತಿರುವ ವಿಡಿಯೋ

ಕಟ್ಟಡದ ಹೊರಮಗ್ಗಲಿನ ಗೋಡೆಗೂ ಸಹ ಚಿತ್ರಗಳನ್ನು ಹಾಕಿದ್ದಾರೆ. ಅರ್ಧ ಗಂಟೆ ಸಾಕು ಅನುಭವ ಮಂಟಪ ನೋಡಲು. ಪ್ರವಾಸಿಗರು ಬೇಗ ಹೋದರೆ ಮೊದಲು ಇದನ್ನು ನೋಡಿಕೊಂಡು ನಂತರ ಕೋಟೆ, ಗುಡಿ ಹಾಗೂ ಮೂರ್ತಿ ನೋಡಲು ಹೋಗುವದು ಒಳ್ಳೆಯದೆಂದು ನನ್ನ ಅಭಿಪ್ರಾಯ.

ಅನುಭವ ಮಂಟಪ ನೋಡಿಕೊಂಡು ಹೊರಗೆ ಬಂದೆವು. ಈ ಮಂಟಪದ ಹಿಂದೆ ಒಂದು ದೊಡ್ಡ ಖಾಲಿ ಮೈದಾನವಿದೆ, ಸುತ್ತಲೂ ಮರಗಳು ಹಾಗೂ ನೀರಿನ ಟ್ಯಾಂಕು ಕೂಡ ಇದೆ. ಬೆಳಿಗಿನ ಉಪಹಾರ ಮಾಡಲು ಇದೆ ಸರಿಯಾದ ಜಾಗವೆಂದು ನಾವು ಅಲ್ಲಿಯೇ ಮರದ ಕೆಳಗೆ ಕಾರನ್ನು ನಿಲ್ಲಿಸಿ, ಮನೆಯಿಂದ ತಂದಿದ್ದ ಚಪಾತಿ ಮತ್ತು ಇತರೆ ದಿನಿಸುಗಳನ್ನು ತಿಂದೆವು. ಅಲ್ಲಿಂದ ಬಸವ ಮೂರ್ತಿ ನೋಡಲು ಹೊರಟೆವು.

ಮಹಾಮನೆ ನೋಡಿ ಅಲ್ಲಿಂದ ಬಸವಣ್ಣನವರ ದೊಡ್ಡ ಮೂರ್ತಿಯನ್ನು ನೋಡಲು ಬಂದೆವು. ಟಿಕೆಟ್ ಕೊಡುವ ವ್ಯಕ್ತಿ ಮೊದಲು ಕೆಳಗಿರುವ ಶರಣರ ಗವಿ ನೋಡಿಕೊಂಡು ನಂತರ ಬಸವ ಮೂರ್ತಿ ನೋಡಿ ಎಂದು ಸೂಚಿಸಿದ. ಅದರಂತೆ ನಾವು ಶರಣರ ಗವಿ ನೋಡಲು ಹೊರಟೆವು.

ಶರಣರ ಗವಿ ಕುರಿತು ಹೇಳಬೇಕಾದಲ್ಲಿ ಇದು ಕಲ್ಲು, ಕಬ್ಬಿಣ ಮತ್ತು ಸಿಮೆಂಟ್ ಇಲ್ಲದೆ ಮಾನವ ನಿರ್ಮಿತ ಗುಹೆ. ಇದನ್ನು ರಾಷ್ಟ್ರಕೂಟರ ಕಾಲದ ಅಜಂತಾ ಎಲ್ಲೋರಾ ಗುಹೆಗಳ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಈ ಗುಹೆಯ ಒಳಗಡೆ ಶರಣರ (ಅಕ್ಕ ಮಹಾದೇವಿ, ಚೆನ್ನ ಬಸವಣ್ಣ, ನೀಲಾಂಬಿಕಾ, ಮಡಿವಾಳ ಮಾಚಯ್ಯ, ರಾಮೇಶ್ವರ, ಅಲ್ಲಮಪ್ರಭು ಮತ್ತು ಬಸವಣ್ಣನವರ) ಪುತ್ಥಳಿಗಳನ್ನು ಕೆತ್ತಲಾಗಿದೆ. ಅಲ್ಲದೆ ಗುಹೆಯಲ್ಲಿಯೇ ಬಸವ ಪುತ್ಥಳಿಯ ಮುಂದೆ ಕುಳಿತು ಧ್ಯಾನ ಮಾಡಲು ಒಂದು ಧ್ಯಾನ ಮಂದಿರವನ್ನು ಮಾಡುತ್ತಿದ್ದಾರೆ ಅಲ್ಲಿ ಒಂದೇ ಸಮಯಕ್ಕೆ ೧೦೦ ಜನ ಕುಳಿತು ಧ್ಯಾನ ಮಾಡಬಹುದು ಎಂದು ನಮಗೆ ಈ ಗುಹೆ ತೋರಿಸುತ್ತಿದ್ದ ವ್ಯಕ್ತಿ ಹೇಳಿದನು.

 ಈ ಗುಹೆಯನ್ನು ಉಸಿರಾಡುವ ಗುಹೆ ಎಂದು ಕೂಡ ಕರೆಯುತ್ತಾರೆ. ಕಾರಣ ಇಲ್ಲಿ ಒಂದೇ ಸಮಯಕ್ಕೆ ಸಾವಿರ ಜನ ಒಳಗೆ ಹೋದರು ಉಸಿರಾಡಲು ಯಾವುದೇ ಕಷ್ಟವಾಗುವದಿಲ್ಲ. ಹೊರಗಿನಂತೆಯೇ ಹವಾಗುಣ ಒಳಗೆಯೂ ಇದೆ.

ಕೆಳಗಿನ ಚಿತ್ರದಲ್ಲಿ ಎಡಬದಿಯಲ್ಲಿ ಕಾಣುವ ಪುತ್ಥಳಿ ಶ್ರೀ ಚನ್ನಬಸವಣ್ಣನವರದು. ಇವರು ಬಸವಣ್ಣನವರ ಸೋದರಳಿಯ. ಬಲಬದಿಯಲ್ಲಿ ಲಿಂಗ ಪೂಜೆ ಮಾಡುತ್ತಿರುವ ಮಡಿವಾಳ ಮಾಚಯ್ಯನವರ ಪುತ್ಥಳಿ.

ಬಸವ ಧರ್ಮ ಪೀಠದ ಪೀಠಾಧ್ಯಕ್ಶ್ಯೇ  ಮಾತೆ ಮಹಾದೇವಿ ಇವರ ಆಸಕ್ತಿಯ ಫಲವಾಗಿ ಈ ಗುಹೆಯ ನಿರ್ಮಾಣವಾಗಿದೆ.

ಶರಣರ ಗುಹೆಯಿಂದ ಹೊರಬಂದು ಬಸವ ಪುತ್ಥಳಿ ನೋಡುವದರಲ್ಲಿ ನಿರತರಾದೆವು. ನಾನು ಮೊದಲ ಬಾರಿಗೆ ಬಸವ ಕಲ್ಯಾಣಕ್ಕೆ ಬಂದಿದ್ದರಿಂದ ಪುತ್ಥಳಿ ನೋಡಿ ಆಶ್ಚರ್ಯ ಪತ್ತೆ. ೧೦೮ ಅಡಿ ಎತ್ತರದ ಈ ಪುತ್ಥಳಿ ಕೆಳಗೆ ನಿಂತು ನೋಡುತ್ತಿದ್ದರೆ ಬಸವಣ್ಣನವರ ತಲೆ ಆಕಾಶಕ್ಕೆ ಹತ್ತಿದೆ ಎಂದು ಭಾಸವಾಗುವಂತಿದೆ.

ಇಲ್ಲಿಯೂ ಕೂಡ ಸೋಪಾನಗಳ ಮೇಲೆ ಶರಣರ ಪುತ್ಥಳಿಗಳನ್ನು ಮಾಡಿ ಎತ್ತರದ ಕೊನೆಯಲ್ಲಿ ದೊಡ್ಡ ಬಸವ ಪುತ್ಥಳಿ ಪ್ರತಿಸ್ಥಾಪನೆಯಾಗಿದೆ. ಒಂದು ಕೈಯಲ್ಲಿ ವಚನಗಳ ಹೊತ್ತಿಗೆ, ಮತ್ತೊಂದು ಕೈಯಿಂದ ಆಶೀರ್ವಾದ ಮಾಡುತ್ತಿರುವ ಬಸವ ಮೂರ್ತಿ ನೋಡಲು ಎರಡು ಕಣ್ಣು ಸಾಲದು. ಮೂರ್ತಿಯ ಮುಂದೆ ತುಂಬಾ ಸುಂದರವಾದ ಕೈತೋಟವನ್ನು ಮಾಡಿದ್ದಾರೆ. ಪುತ್ಥಳಿಯ ಕೆಳಗೆ ಒಂದು ಸಭಾಂಗಣ ಮಾಡಿ ಪ್ರಾರ್ಥನಾ ಮಂದಿರವನ್ನು ಮಾಡಿದ್ದಾರೆ. ಪ್ರಾರ್ಥನಾ ಮಂದಿರದಲ್ಲಿ ಕುಳಿತರೆ ಮನಸಿಗೆ ಶಾಂತಿ ಎನಿಸಿ ಹೊರಬರಲು ಮನಸಾಗುವದೇ ಇಲ್ಲ.

ಬಸವ ಮೂರ್ತಿಯನ್ನು ನೋಡಿಕೊಂಡು, ಎಡಗಡೆ ಬಂದರೆ ಶರಣರ ಜೀವನದಲ್ಲಿ ನಡೆದ ಮಹತ್ವದ ಘಟನೆಗಳ ಸಂದರ್ಭಗಳ ಮೂರ್ತಿಗಳನ್ನು ಮಾಡಿದ್ದಾರೆ. ಕೆಳಗೆ ಚಿತ್ರದಲ್ಲಿ ಕಾಣುತ್ತಿರುವದು ಮಹಾ ಶರಣ ಹರಳಯ್ಯ ಹಾಗೂ ಅವನ ಹೆಂಡತಿ ಶರಣೆ ಕಲ್ಯಾಣಮ್ಮ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗಾಗಿ ಪಾದುಕೆಗಳನ್ನು ಮಾಡುತ್ತಿರುವ ಸಂದರ್ಭ. ಪಾದುಕೆಗಳನ್ನು ಮಾಡಿ ಒಂದು ಬುಟ್ಟಿಯಲ್ಲಿ ಹೂ ಹಾಸಿ ಅದರಲ್ಲಿ ಪಾದುಕೆಗಳನ್ನಿಟ್ಟುಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟಾಗ, ಬಸವಣ್ಣನವರು ಈ ಪಾದುಕೆಗಳು ಕಾಲಿನಲ್ಲಲ್ಲ ನನ್ನ ತಲೆಯ ಮೇಲಿರಬೇಕಾದವೆಂದು ಅವನ್ನು ತಲೆಯಮೇಲೆ ಇಟ್ಟುಕೊಂಡಿದ್ದರು. ಬಿಜ್ಜನಹಳ್ಳಿಯಲ್ಲಿ  ಈಗಲೂ ಕೂಡ ಈ ಪಾದುಕೆಗಳನ್ನು ನೋಡಬಹುದು.

೧೨ ನೇ ಶತಮಾನದಲ್ಲಿ ಜಾತಿಪದ್ಧತಿಯನ್ನು ಖಂಡಿಸಿ ಬಸವಣ್ಣನವರು ಬ್ರಾಹ್ಮಣನಾದ ಮಧುವರಸನ ಮಗಳಿಗೆ ಹಾಗೂ ಸಮಗಾರ ಹರಳಯ್ಯನ ಮಗನಿಗೆ ಅಂತರ್ಜ್ಯಾತಿ ವಿವಾಹ ಮಾಡಿಸಿದಾಗ, ಬಿಜ್ಜಳ ರಾಜ ಬಸವಣ್ಣನವರಿಗೆ ಗಡಿಪಾರು ಶಿಕ್ಷೆ ಕೊಟ್ಟು, ಆ ವಿವಾಹ ಮಾಡಿಸಿದ ಮಧುವರಸ, ಹರಳಯ್ಯ ಹಾಗೂ ಅವನ ಮಗನನ್ನು ಆನೆ ಕಾಲಿಗೆ ಕಟ್ಟಿ ಎಳೆಸಿದನು.ಇದನ್ನೇ ಬಿಂಬಿಸುವ ಮೂರ್ತಿಗಳನ್ನು ಇಲ್ಲಿ ಮಾಡಲಾಗಿದೆ.
ಬಸವ ಪುತ್ಥಳಿಯ ಪಕ್ಕದಲ್ಲಿಯೇ ಅಕ್ಕ ಮಹಾದೇವಿ ಗವಿ ಇದೆ. ಇದನ್ನು ನೋಡಲು ಹೋದಾಗ ಕೆಲಸ ನಡೆದಿದ್ದರಿಂದ ಗವಿಯನ್ನು ನೋಡಲು ಆಗಲಿಲ್ಲ. ಇಷ್ಟು ನೋಡಿಕೊಂಡು ಬಸವೇಶ್ವರರ ಗುಡಿ ನೋಡಲು ನಗರದತ್ತ ನಡೆದೆವು. ನಗರದ ಮಧ್ಯವಿರುವ ಈ ಗುಡಿ ತುಂಬಾ ಸರಳವಾದ ಶೈಲಿಯಲ್ಲಿದೆ. ಎಲ್ಲ ದೇವಸ್ಥಾನಗಳಂತೆ ಇದಕ್ಕೂ ಕೂಡ ಶಿಖರವನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಹೊರಗೆ ಅಂಗಣವನ್ನು ಮಾಡಲಾಗಿದೆ. ಬಸವ ದೇವನ ದರ್ಶನವಾದ ಮೇಲೆ ಅಲ್ಲಿ ಕುಳಿತುಕೊಳ್ಳಬಹುದು.

ಗರ್ಭಗುಡಿಯಲ್ಲಿರುವ ಬಸವಣ್ಣನವರ ಸುಂದರ ಮೂರ್ತಿ.

ಗುಡಿ ದರ್ಶನವಾದ ಮೇಲೆ ನಾವು ಇನ್ನು ಕೋಟೆ ನೋಡಬೇಕಿತ್ತು, ಅಲ್ಲದೆ ಹೊಟ್ಟೆ ಬೇರೆ ಹಸಿದಿತ್ತು. ನಾವು ಮತ್ತೆ ಕಾರನ್ನು ಅನುಭವ ಮಂಟಪದ ಪಕ್ಕಕ್ಕಿರುವ ಖಾಲಿ ಮೈದಾನದತ್ತ ತಿರುಗಿಸಿದೆವು. ಏಕೆಂದರೆ ಊಟ ಮಾಡಲು ಅಷ್ಟೊಂದು ಪ್ರಶಸ್ತ ಸ್ಥಳ ಬೇರೆ ಎಲ್ಲೂ ಇರಲಿಲ್ಲ. ಅಲ್ಲಿಯೇ ಕುಳಿತು ಮನೆಯಿಂದ ತಂದ ಊಟ ಮಾಡಿ ಕೋಟೆ ನೋಡಲು ಹೊರಟೆವು.

ಬಸವ ಕರ್ಮಭೂಮಿಯಾದ ಕಲ್ಯಾಣದಲ್ಲಿ ನೋಡಬೇಕಾದ ಇನ್ನಿತರ ಸ್ಥಳಗಳು:

 1. ಶರಣ ಉರಿಲಿಂಗ ಪೆದ್ದಿ ಮಠ 
 2. ಸಭಾ ಭವನ
 3. ಕಂಬಳಿ ಮಠ
 4. ಶರಣ ಶೈತ್ಯ ಗ್ರಂಥಾಲಯ (Sharana Litreature Library)
 5. ಶರಣ ಅಲ್ಲಮ ಪ್ರಭು ಗದ್ದುಗೆ ಮಠ
 6. ಹರಳಯ್ಯ ಮತ್ತು ಇತರ ಶರಣರ ಗವಿ
 7. ಶರಣ ಮಡಿವಾಳ ಮಾಚಯ್ಯ ಹೊಂಡ 
 8. ಶರಣೆ ಅಕ್ಕ ನಾಗಮ್ಮ ಗವಿ
 9. ಬಸವ ಅರಿವಿನ ಮನೆ 
 10. ಅಕ್ಕ ಮಹಾದೇವಿ ಆಶ್ರಮ 
 11. ಘನಲಿಂಗ ರುದ್ರಮುನಿ ಗವಿ
 12. ಶರಣ ನೂಲಿ ಚಂದಯ್ಯ ಗವಿ
 13. ತ್ರಿಪುರಾಂತ ಕೆರೆ 

.........