Jan 7, 2017

ಶಿವಶರಣ ಹರಲಯ್ಯನ ಪಾದುಕೆಗಳು, ಬಿಜ್ಜನಹಳ್ಳಿ, ಕಲ್ಬುರ್ಗಿ ಜಿಲ್ಲೆ

ಸುಮಾರು 12 ನೇ ಶತಮಾನದಲ್ಲಿ, ಬಿಜ್ಜಳನ ರಾಜ್ಯವಾದ ಕಲ್ಯಾಣದಲ್ಲಿ ಚಮ್ಮಾರ ಹರಳಯ್ಯನೆಂಬುವವನಿದ್ದ. ಅವನು ಮತ್ತು ಅವನ ಹೆಂಡತಿ ಕಲ್ಯಾಣಮ್ಮ  ಶರಣಗುರು ಜಗಜ್ಯೋತಿ ಬಸವೇಶ್ವರರು ಪ್ರಾರಂಭಿಸಿದ ಶರಣ ಚಳುವಳಿಯ ಭಾಗವಾಗಿದ್ದರು. ಜಾತಿ-ಧರ್ಮ ಇವೆಲ್ಲವನ್ನೂ ಮೀರಿದ್ದು ಮನುಷ್ಯತ್ವ ಎಂದು ಸಾರಿ ಹೇಳುವ ಈ ಚಳುವಳಿಯು ಬಡಿಗೇರ, ಅಂಬಿಗ, ಹೊಲೆಯ, ಮಾದಿಗ, ಚಮ್ಮಾರ ಇಂತಹ ಮುಂತಾದ ಜಾತಿಯ ಜನಗಳಿಗೂ ನ್ಯಾಯವನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿತ್ತು. ಆದ್ದರಿಂದ ಇದನ್ನು ಸ್ಥಾಪಿಸಿದ ಬಸವಣ್ಣವರ ಮೇಲೆ ಈ ಜನಗಳಿಗೆ ಅಪಾರ ಗೌರವ ಮತ್ತು ಪ್ರೀತಿ ಬೆಳೆಯಿತು. ಈ ಶರಣ ಚಳುವಳಿಯಲ್ಲಿ ಪಾಲ್ಗೊಂಡವರನ್ನು ಶರಣರು ಎಂದು ಕರೆಯುತ್ತಿದ್ದರು. ಒಬ್ಬ ಶರಣ ಮತ್ತೊಬ್ಬ ಶರಣನಿಗೆ ಶುಭಾಶಯ ತಿಳಿಸಲು ಶರಣು ಎನ್ನುವದು ರೂಢಿ (ಶರಣು ಎಂದರೆ ನಮಸ್ಕಾರ). ಒಂದು ದಿನ ಹರಳಯ್ಯನು ಬಸವೇಶ್ವರರನ್ನು ಕಂಡೊಡನೆ ಶರಣು ಎಂದು ಶುಭಾಶಯ ತಿಳಿಸಿದನು, ಅದಕ್ಕೆ ಪ್ರತಿಯಾಗಿ ಬಸವೇಶ್ವರರು ಕೈ ಮುಗಿದು ಶರಣು ಶರಣಾರ್ಥಿ ಎಂದು ಶುಭಾಶಯ ಕೋರಿದರು. ಇದರಿಂದ ಹರಳಯ್ಯ ತಾನು ಪಾಪ ಮಾಡಿದೆ, ಇಷ್ಟು ದೊಡ್ಡ ಮನುಷ್ಯರು ನನ್ನಂಥ ಕೀಳು ಜಾತಿಯ ಮನುಷ್ಯನಿಗೆ ಹೀಗೆ ಶುಭಾಶಯ ಕೋರಿದರು. ಇದಕ್ಕೆ ತಕ್ಕ ಪ್ರಾಯಶ್ಚಿತ್ತವಾಗಬೇಕು ಎಂದು ತನ್ನ ತೊಡೆಯ ಚರ್ಮದಿಂದ ಒಂದು ಜೊತೆ ಪಾದರಕ್ಷೆಯನ್ನು ಮಾಡಿ ಬಸವೇಶ್ವರರಿಗೆ ಅರ್ಪಿಸಬೇಕೆಂದು ನಿರ್ಧರಿಸಿದನು. ಪತ್ನಿ ಕಲ್ಯಾಣಮ್ಮ ಕೂಡ ಈ ಅರ್ಪಣೆಯಲ್ಲಿ ಭಾಗಿಯಾಗುತ್ತೆನೆಂದು ವಿನಂತಿಸಿಕೊಂಡಳು. ಪತಿ-ಪತ್ನಿಯರಿಬ್ಬರು ತಮ್ಮ ತೊಡೆಯ ಚರ್ಮದಿಂದ ಒಂದು ಜೊತೆ ಪಾದರಕ್ಷೆಗಳನ್ನು ಮಾಡಿ ಬಸವೇಶ್ವರರಲ್ಲಿಗೆ ಕೊಂಡೊಯ್ದರು. ಬಸವೇಶ್ವರರು ಇದನ್ನು ನೋಡಿ ಬೆರಗಾದರು. ಪಾದರಕ್ಷೆಗಳನ್ನು ಮುಟ್ಟಿ ನೋಡಿ, ಅವುಗಳನ್ನು ತಲೆಯ ಮೇಲೆ ಇಟ್ಟುಕೊಂಡು, ಈ ಪಾದರಕ್ಷೆಗಳಲ್ಲಿ ದೈವಿಕ ಗುಣವಿದೆ. ನಾನಿವನ್ನು ಧರಿಸುವದು ತಪ್ಪಾಗುತ್ತೆ. ಎಂದು ಅವನ್ನು ಹಿಂತಿರುಗಿಸಿದರು.

ಐತಿಹಾಸಿಕ ದಾಖಲೆಗಳ ಪ್ರಕಾರ ಈ ಮೇಲಿನ ಘಟನೆ ನಡೆದು 800 ವರ್ಷಗಳು ಕಳೆದು ಹೋಗಿವೆ. 800 ವರ್ಷಗಳ ನಂತರ ಈ ಪಾದರಕ್ಷೆಗಳು ಮತ್ತೆ ಬೆಳಕಿಗೆ ಬಂದಿವೆ. ಗುಲ್ಬರ್ಗದಿಂದ 60 ಕಿಮೀ ದೂರದಲ್ಲಿರುವ ಬಿಜ್ಜನಹಳ್ಳಿ (ಮಾಳಖೇಡದಿಂದ ಕೇವಲ 6 ಕಿಮೀ) ಎಂಬ ಗ್ರಾಮದಲ್ಲಿ ಒಂದು ಸಣ್ಣ ದೇವಸ್ಥಾನ ಮಾಡಿ ಈ ದೈವಿಕ ಪಾದರಕ್ಷೆಗಳನ್ನು ಪೂಜಿಸುತ್ತಿದ್ದಾರೆ. ಕೆಲವು ವಿಜ್ಞಾನಿಗಳು ಇವುಗಳನ್ನು ಪರೀಕ್ಷಿಸಿ, ಈ ಪಾದರಕ್ಷೆಗಳು ಮಾಡಿರುವದು ಮನುಷ್ಯ ಚರ್ಮದಿಂದಲೇ ಎಂದು ಮತ್ತು ಅವಧಿ ಸುಮಾರು 800 ವರ್ಷಗಳ ಹಿಂದೆ ಎಂದು ಸ್ಪಷ್ಟ ಪಡಿಸಿದ್ದಾರೆ. 

ಗುಡಿ
ಪಾದುಕೆಗಳು
ಬರೆಧವರು: ಪುಶ್ಪ ಪ್ರಸಧ್

Click on Haralayyana Paduke to read in English.
.........

No comments: