Jan 12, 2019

ಬಸವ ಕಲ್ಯಾಣ ಕೋಟೆ

ಸೆಪ್ಟೆಂಬರ್ ೨, ೨೦೧೮

ಬಸವ ಕಲ್ಯಾಣದ ಕೋಟೆ ಚಿಕ್ಕದಿರಬೇಕೆಂದು ಊಹಿಸಿದ ನನಗೆ ಕೋಟೆ ಕಂಡ ನಂತರ ತುಂಬಾ ಆಶ್ಚರ್ಯವಾಯಿತು. ಕೋಟೆಯ ಮುಖ್ಯದ್ವಾರದ ಹೊರಗೆ ಒಂದು ದೊಡ್ಡ ಮರವಿದೆ, ಅಲ್ಲಿಯೇ ನಮ್ಮ ಕಾರನ್ನು ನಿಲ್ಲಿಸಿ ಕೋಟೆಯ ಹೊರಗಿರುವ ವಸ್ತು ಸಂಗ್ರಹಾಲಯವನ್ನು ನೋಡಿಕೊಂಡು ಆಮೇಲೆ ಕೋಟೆ ನೋಡಲು ಒಳಗೆ ಹೋಗುವದೆಂದಾಯಿತು. ಕೋಟೆ ನೋಡಿಕೊಂಡು ಹೊರಬಂದ ಸ್ವಲ್ಪ ಜನ ನಮ್ಮನ್ನು ವಿದೇಶೀಯರೆಂದು ತಿಳಿದರು. ಎಷ್ಟು ಹೇಳಿದರು ಕೇಳದೆ ತಮ್ಮ ಜತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದು ಕೇಳಿಕೊಂಡರು. ಸರಿ ಆಯಿತೆಂದು ನಿಂತುಕೊಂಡೆ.ಕೆಳಗಿನ ಚಿತ್ರದಲ್ಲಿ ನಮ್ಮ ಹಿಂದೆ ಕಾಣುವದೇ ಕೋಟೆಯ ಪ್ರವೇಶ ದ್ವಾರ. ಈ ದ್ವಾರಕ್ಕೆ ಎರಡೂ ಬದಿಯಲ್ಲಿರುವ ಹಂತಗಳ ಮೂಲಕ ಪ್ರವೇಶಿಸಿದ ಪಾರ್ಶ್ವದ ಮೇಲೆ ಬಾಲ್ಕನಿಗಳಿವೆ.

ಕೋಟೆಯು ಮೂಲತಃ ಕಲ್ಯಾಣದ ಚಾಲುಕ್ಯರಿಗೆ ಸೇರಿದ್ದು, ನಂತರ ಸುಲ್ತಾನರು, ನಿಜಾಮರು ಆಳಿದರು. ಕೋಟೆಯ ಒಳಗೆ ಪ್ರವೇಶಿಸುತ್ತಿದ್ದಂತೆ ಬಲಬದಿಯಲ್ಲಿ ವಿಗ್ರಹವಿಲ್ಲದ ದೇವಸ್ಥಾನವಿದೆ. ಅಷ್ಟೊಂದು ದೊಡ್ಡದಿಲ್ಲದಿದ್ದರೂ ಕಂಬಗಳನ್ನು ಹೊಂದಿದ ಮುಖಮಂಟಪ ಮತ್ತು ಗರ್ಭಗುಡಿಯನ್ನು ಹೊಂದಿದ್ದು, ಇದು ಎರಡು ಬದಿಗಳಲ್ಲಿ ಸೋಪಾನಗಳನ್ನು ಹೊಂದಿದೆ. ದೇವಾಲಯದ ಮುಂದೆ ಒಂದು ಚದರ್ ಕೊಳವಿದೆ.

ಎಡಬದಿಯಲ್ಲಿ ಮೊಹರಂ ಸಮಯದಲ್ಲಿ ಉಪಯೋಗಿಸುವ ದರ್ಗಾ ಇದೆ. ಇದನ್ನು ನೋಡಿದರೆ ಕಟ್ಟಡದ ಒಳ ಶೈಲಿ ಚಾಲುಕ್ಯರ ಮಾದರಿಯಿದ್ದು  ಅದರ ಮೇಲೆ ಇತ್ತೀಚಿಗೆ ಮಿನಾರ್ ಗಳನ್ನು ನಿರ್ಮಿಸಿದ ಹಾಗಿದೆ.
ಈ ಕೋಟೆಯು ಏಳು ಬಾಗಿಲುಗಳನ್ನು ಹೊಂದಿದೆ, ಅದರಲ್ಲಿ ಐದು ಉತ್ತಮ ಆಕಾರದಲ್ಲಿದೆ. ಕೇಂದ್ರ ಅಂಗಳದಲ್ಲಿ ಸುತ್ತುವರೆದಿರುವ ಕೋಟೆಯ ಗೋಡೆಗಳು ಸಿಬ್ಬಂದಿ ಕೊಠಡಿಗಳನ್ನು ಹೊಂದಿವೆ. ಕೋಟೆಯ ಗೋಡೆಗಳು ಎಲೆಗಳ ಚಿತ್ರದಿಂದ ಅಲಂಕೃತವಾಗಿವೆ. ಈ ಕೋಟೆಯನ್ನು ದೊಡ್ಡ ದೊಡ್ಡ ಬಂಡೆಗಲ್ಲುಗಳ ಮೇಲೆ ನಿರ್ಮಿಸಲಾಗಿದೆ. ಸಮೀಪ ಬಂದು ನೋಡುವವರೆಗೂ ಈ ಕೋಟೆ ಕಾಣುವದಿಲ್ಲ. ಕೋಟೆಯ ಸುತ್ತಲೂ ಆಳವಾದ ಕಂದಕವನ್ನು ನಿರ್ಮಿಸಲಾಗಿದೆ. ಈ ಎಲ್ಲ ಮಾರ್ಪಾಡುಗಳನ್ನು ಕೋಟೆಯ ರಕ್ಷಣೆಯ ಉದ್ದೇಶದಿಂದ ಮಾಡಲಾಗಿದೆ ಎನ್ನಬಹುದು.

ಈ ಕೋಟೆಯು ಏಳು ಪ್ರವೇಶ ದ್ವಾರಗಳನ್ನು ಹೊಂದಿದೆ, ಅದರಲ್ಲಿ ಐದು ಉತ್ತಮ ಆಕಾರದಲ್ಲಿದೆ. ದ್ವಾರಗಳಿಗೆ ಸಧ್ಯಕ್ಕೆ ಇತ್ತೀಚಿಗೆ ಮಾಡಿದ ಬಾಗಿಲುಗಳನ್ನು ಜೋಡಿಸಲಾಗಿದೆ. ಮೊದಲಿದ್ದ ಬಾಗಿಲುಗಳನ್ನು ತುಂಬಾ ಹಳೆಯವಾಗಿದ್ದರಿಂದ ತೆಗೆದು ಅಲ್ಲಿಯೇ ಪಕ್ಕದಲ್ಲೇ ಇಟ್ಟಿದ್ದಾರೆ. ದೊಡ್ಡ ದೊಡ್ಡ ಗುಂಡುಗಳನ್ನು ಸಹ ದ್ವಾರದ ಹತ್ತಿರ ಜೋಡಿಸಲಾಗಿದೆ.

ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವದು ಜೈಲು. ಸೆರೆಮನೆಯನ್ನು ಹತ್ತಿರದಿಂದ ನೋಡಲು ಹೋದೆ ಬಾವಲಿಗಳ ಕಮಟು ವಾಸನೆ ಮೂಗಿಗೆ ಒಮ್ಮೆಲೇ ಬಡಿಯಿತು. ಆದರೂ ಇಣುಕಿ ನೋಡಿದೆ, ಹೊರ ರಚನೆಯಲ್ಲಿ ಈ ಸೆರೆಮನೆಗಳು ಈಗಿನ ಜೈಲುಗಳಂತೆ ಕಂಡರೂ ಒಳಗೆ ನಾಲ್ಕರಿಂದ ಐದು ಅಡಿಗಳಷ್ಟು ಆಳವಿರಬೇಕು.
ಚಿತ್ರದಲ್ಲಿ ಕಾಣುವ ಹುಡುಗ ನಮಗೆ ಬಸವಕಲ್ಯಾಣದ ಕೋಟೆಯನ್ನು ಬಹು ವಿಸ್ತಾರವಾಗಿ ತೋರಿಸುತ್ತ ಅದರ ಕುರಿತು ವಿವರಣೆ ಕೊಡುತ್ತಿದ್ದ. ಅವನ ಪಕ್ಕದಲ್ಲಿರುವ ಬೀಸುವ ಕಲ್ಲನ್ನು ಮದ್ದನ್ನು ಬೀಸಲು ಬಳಸಲಾಗುತ್ತಿತ್ತೆಂದು ಹೇಳಿದ.
ಕೆಳಗೆ ಕಾಣುತ್ತಿರುವದು ಕೋಟೆಯ ಒಳಬಾಗಿಲು. ಈ ಕೋಟೆ ನೋಡಲು ಸ್ವಲ್ಪವೂ ಬೇಸರವಾಗುವದಿಲ್ಲ. ಎಷ್ಟೋ ಕೋಟೆಗಳ ಹೆಸರಿನಲ್ಲಿ ಕೋಟೆಯ ಅವಶೇಷಗಳನ್ನು ನೋಡುವ ನಮಗೆ ಇಲ್ಲಿ ಸ್ವಲ್ಪ ಸುಸ್ಥಿತಿಯಲ್ಲಿರುವ ಕೋಟೆಯ ದರ್ಶನವೇ ಆಯಿತು. ನಾನಂತೂ ತುಂಬಾ ಉತ್ಸಾಹದಿಂದಾನೆ ಈ ಕೋಟೆಯನ್ನು ನೋಡಿದೆ.

ಕೋಟೆಯ ಗೋಡೆಗಳನ್ನು ಕಣ್ಣೆತ್ತಿ ನೋಡುತ್ತಿದ್ದರೆ ಬಲು ಎತ್ತರವಾಗಿ ತಲೆ ಎತ್ತಿ ನಿಂತಂತೆ ಕಾಣುತ್ತಿದ್ದವು. ಕೆಳಗಿನ ಚಿತ್ರದಲ್ಲಿರುವ ಗೋಡೆಯನ್ನು ನೋಡಿ ನಾನು ಸಿದ್ದಿಗೆ ಕೇಳಿಯೇ ಬಿಟ್ಟೆ, ಎಷ್ಟು ಎತ್ತರವಿರಬಹುದೀ ಗೋಡೆಗಳು, ಎಷ್ಟು ವರ್ಷಗಳು ಹಿಡಿದಿರಬಹುದು ಈ ಗೋಡೆ ನಿರ್ಮಿಸಲು? ಎಂದು.

ಈ ಬಾಗಿಲಿಂದ ಒಳನಡೆದು ಎಡಕ್ಕೆ ನಡೆದರೆ ರಾಜ ದರ್ಬಾರ್ ಇದೆ. ಹಾಗೂ ಬಲಗಡೆ ರಾಣಿ ಮಹಲ್.

ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವದು ರಾಜ ಮಹಲ್.  ಎದುರಿಗೆ ಚಿಕ್ಕದಾದ ಚೌಕಾಕಾರದ ಕಾರಂಜಿ ಕೊಳವಿದೆ.

ರಾಜ ಮಹಲಿನ ಮತ್ತೊಂದು ಚಿತ್ರ. ಕಮಾನಿನ ಮೇಲೆ ಎರಡೂಕಡೆ ವೃತ್ತಾಕಾರದಲ್ಲಿ ಚಿತ್ರಗಳನ್ನು ಕೆತ್ತಲಾಗಿದೆ. ಎಡಬದಿಯಲ್ಲಿ ಒಂದು ಚಿಕ್ಕ ದೇವಸ್ಥಾನವನ್ನು ಕಾಣಬಹುದು.

ರಾಜ ಮಹಲಿನ ಒಳನೋಟ.

ರಾಜ ಮಹಲಿನ ಗೋಡೆಯ ಮೇಲೆ ನಕಲಿ ಬಾಗಿಲುಗಳನ್ನು ಮಾಡಲಾಗಿದೆ. ಬಹುಶ ಶತ್ರುಗಳನ್ನು ಗೊಂದಲಕ್ಕೊಳ ಮಾಡಲಿರಬೇಕು.

ಕೆಳಗೆ ಚಿತ್ರದಲ್ಲಿ ಕಾಣುತ್ತಿರುವದು ರಂಗೀನ್ ಮಹಲ್ ಮುಂದಿರುವ ಕಾರಂಜಿ ಕೊಳದ ಚಿತ್ರ. ಈ ಕೊಳವು ಅಷ್ಟಭುಜಾಕೃತಿಯದ್ದಾಗಿದೆ. ರಂಗೀನ್ ಮಹಲ್ ಹೆಸರೇ ಸೂಚಿಸುವಂತೆ ಸುಂದರವಾದ ವರ್ಣರಂಜಿತ ಚಿತ್ರಗಳಿಂದ ಕೂಡಿದೆ.

ಕೆಳಗೆ ಕಾಣುತ್ತಿರುವ ಸಣ್ಣ ಕೋಣೆಗಳು ದಾಖಲೆ ಪತ್ರಗಳ ಕಚೇರಿಗಳು ಎಂದು ನಮಗೆ ವಿವರಣೆ ನೀಡುತ್ತಿದ್ದ ಹುಡುಗ ಹೇಳಿದನು.

ಕೆಳಗಿನ ಚಿತ್ರದಲ್ಲಿ ಕಾಣುತ್ತಿರುವದು ರಾಜ ದರ್ಬಾರ್. ಇಲ್ಲಿ ರಾಜರು ತಮ್ಮ ಸಂಸತ್ತಿನೊಂದಿಗೆ ಸಭೆ ನಡೆಸುತ್ತಿದ್ದರು. ಕಟ್ಟಡದ ಈ ಭಾಗವು ತುಂಬಾ ದೊಡ್ಡದಾಗಿಯೇ ಇದೆ. ಈ ಕಟ್ಟಡದ ಎದುರಿಗೆ ಉದ್ದವಾದ ಕಾರಂಜಿ ಕೊಳವನ್ನು ನಾವು ಕಾಣಬಹುದು.

ರಾಣಿ ಮಹಲಿನ ಒಂದು ಭಾಗವಾದ ಇಲ್ಲಿ ರಾಣಿಯು ತಲೆ ಸ್ನಾನ ಮಾಡಿದಾಗ ಕೂದಲನ್ನು ಇಲ್ಲಿ ಕಾಯಿಸಿಕೊಳ್ಳುತ್ತಿದ್ದಳೆಂದು ಹೇಳಲಾಗುತ್ತದೆ. ಗಚ್ಚಿನಿಂದ ಮಾಡಿದ ಈ ರಚನೆಯು ಮಲಗಲು ಅನುಕೂಲವಾಗುವಂತಿದ್ದು ತಲೆಯ ಬದಿಯಲ್ಲಿ ಎತ್ತರವಾಗಿದೆ. ಈ ಗಚ್ಚಿನ ರಚನೆಯ ಕೆಳಗೆ ಖಾಲಿ ಜಾಗವಿದ್ದು, ಪೂರ್ತಿ ಕಲ್ಲಿನಲ್ಲಿ ಸಣ್ಣ ಸಣ್ಣ ರಂಧ್ರಗಳನ್ನು ಕಾಣಬಹುದು. ಕೆಳಗಡೆ ಕಾದ ಕೆಂಡವಿಟ್ಟು ಧೂಪ ಹಾಕಿ ತಲೆ ಕಾಯಿಸಿಕೊಳ್ಳುತ್ತಿದ್ದರೆಂದು ಹೇಳಲಾಗುತ್ತದೆ.

ಅಲ್ಲಿಂದ ನಾವು ತೋಪು ನೋಡಲು ಬಂದೆವು. ಮೊದಲನೆಯ ತೋಪು ಸುಮಾರು ೨೦ ಅಡಿ ಉದ್ದವಾಗಿದೆ. ಪಂಚಲೋಹದಿಂದ ಮಾಡಿದ ಈ ತೋಪು ನಾಲ್ಕು ಜಾಗಗಳಲ್ಲಿ ಹಿಡಿಕೆಗಳನ್ನು ಹೊಂದಿದೆ.

ಕೆಳಗಿನ ಚಿತ್ರದಲ್ಲಿರುವ ತೋಪು ಚಿಕ್ಕದಿದ್ದರೂ ತುಂಬಾ ಸುಂದರವಾಗಿದೆ. ಇದನ್ನು ಖಡಕ್ ಬಿಜಲಿ ತೊಪೆಂದು ಕರೆಯುತ್ತಾರೆ. ಈ ತೋಪಿನ ಮೇಲೆ ತುಂಬಾ ಸೂಕ್ಷ್ಮ ಹಾಗೂ ಸುಂದರವಾದ ಚಿತ್ರಗಳನ್ನು ಕೆತ್ತಲಾಗಿದೆ. ಇದನ್ನು ಈಗಲೂ ಕೂಡ ಪೂರ್ತಿ ಸುತ್ತು ಸುತ್ತಿಸಬಹುದು.

ಇನ್ನೊಂದು ಸಣ್ಣ ತೋಪು ಬೇರೆಯ ಗೋಪುರದ ಮೇಲೆ ನಮಗೆ ಕಂಡಿತು. ಆದರೆ ಅಲ್ಲಿ ಹೋಗಲು ದಾರಿ ಸುಗಮವಾಗಿಲ್ಲದ್ದರಿಂದ ದೂರದಿಂದಲೇ ಫೋಟೋ ತೆಗೆದುಕೊಂಡು ಬಂದೆವು.

ಬಸವ ಕಲ್ಯಾಣದ ಕೋಟೆ ಹಾಗೂ ವಸ್ತು ಸಂಗ್ರಹಾಲಯ ನೋಡಬೇಕೆನ್ನುವರು ಶುಕ್ರವಾರ ಬಿಟ್ಟು ಯಾವ ದಿನವಾದರೂ ಭೇಟಿ ನೀಡಬಹುದು. ಶುಕ್ರವಾರದಂದು ಎರಡಕ್ಕೂ ರಜೆ ಇರುತ್ತದೆ. ಬಸವ ಕಲ್ಯಾಣದ ಕೋಟೆಯ ವೀಕ್ಷಣಾ ಕಾರ್ಯ ಇಲ್ಲಿಗೆ ಮುಗಿದಿತ್ತು. ಸ್ವಲ್ಪ ವಿಶ್ರಾಂತಿಯು ಬೇಕಿತ್ತು. ಆದ ಕಾರಣ ಬಸವಕಲ್ಯಾಣದಿಂದ ಬೇಗನೆ ಬಿಟ್ಟು, ಬೀದರ್ ತಲುಪಿ ಹೋಟೆಲ್ ಹುಡುಕಿಕೊಂಡು ಹೊರಟೆವು. ಹೋಟೆಲ್ ರೂಮ್ ಸಿಕ್ಕ ಮೇಲೆ ಸ್ನಾನ ಮುಗಿಸಿ ಗುರುದ್ವಾರಕ್ಕೆ ಹೋಗಬೇಕೆಂದು ನಿರ್ಧರಿಸಿದೆವು.
.........

5 comments:

Shridhar P M said...

Very Nice Sir,

I follow your blogs, because it gives me knowledge about the karnataka.

Thanks for sharing, we will be waiting for few more.

Thanking you

Ganesh K said...

Dear Siddeshwar, These are the heritage sites of Basava kalyana, notified in Basava Kalyan Development Borard (BKDB)

HERITAGE SITES AND MONUMENTS AT BASAVAKALYAN
1. Fort
2. Parusha-Katte
3. Basaveshwara temple
4. Kinnari Bommayya Cave
5. Moligeya Mavayyana Gudi at Molakri
6. Devar Dasimayya/Jedar Dasimayya Caves
7. Kambli Matha
8. Basava Bhavana
9. Sadananda Matha
10. Haralayya cave and gudi
11. Basava Vana
12. Jatra Maidan
13. Prabhudevara Gaddige
14. Madivala Machayya Shrine and Honda (Pond)
15. Shivapur Shiva Temple
16. Narayanapur Shiva Temple
17. Akka Nagammana Gavi
18. Basaveshvara Mahamane spot-Arrival Gavi
19. Tripurantakeshvara Temple
20. Dharmashala
21. Tiprant village holy sites
22. Tripurantaka Tank
23. Rudramuni and Vijnaneshwara Gavis
24. New Anubhava Mantap
25. Panchasutra Gavi
26. Nuliya Chandayya’s Gavi
27. Bandavara Oni (street) Traditionally said to be so
28. Yalahooti site
29. Museum of the Archaeology Department.

I love to read your write ups on all these places :)

Thank you for your wonderful write ups. I am greatly inspired from you to read about History, archaeology and culture.

Prof. Ganesh K. Davanagere.

Reference.
https://indiacode.nic.in/bitstream/123456789/3146/1/13%20of%202005%20%28E%29.pdf

ಸೀತಾ ಎಸ್. ನಾರಾಯಣ said...

Nice article.manyare vivarane chennagide.nangu inthaha lekhana bareyuvudu oduvudu ishta.abhinandanegalu

Anonymous said...

Siddeshwarji, very nice write up with so much information, thank you

siddeshwar said...

Thank you 🙏🏽